ರಾಹುಲ್ ಗಾಂಧಿ ಅಮ್ಮ ಅಪ್ಪನ ತೊಡೆಯ ಮೇಲೆ ಕುಳಿತ ಹೇಳಿಕೆಗೆ, ಡ್ಯಾಂ! ಸಿದ್ಧರಾಗಿರಿ ಮಕ್ಕಳೇ... ಎಂದ ನಟಿ ಸೋನಾಕ್ಷಿ ಸಿನ್ಹಾ!

Published : Nov 18, 2026, 03:50 PM IST
Sonakshi Sinha Reacts to Rahul Gandhi

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿ ನಡುವಿನ ಡೈನಿಂಗ್ ಟೇಬಲ್ ಆತ್ಮೀಯತೆ ಕುರಿತು ಹೇಳಿದ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕಥೆಗೆ ನಟಿ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ: ‘ಊಟದ ಸಮಯದಲ್ಲಿ ಅಮ್ಮ, ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಂದೆ-ತಾಯಿಯ ಪ್ರೀತಿಯ ಬಗ್ಗೆ ನೀಡಿರುವ ಹೇಳಿಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಮಾತ್ರವಲ್ಲ ರಾಹುಲ್ ಅವರ ಈ ಹೇಳಿಕೆಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕೂಡ ತಮ್ಮದೇ ಆದ ಹಾಸ್ಯಮಯ ಶೈಲಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ತಮ್ಮ ಭವಿಷ್ಯದ ಮಕ್ಕಳೂ ಕೂಡ ಪೋಷಕರ ಇಂತಹ ಬಹಿರಂಗ ಪ್ರೀತಿಯನ್ನು ನೋಡುತ್ತಲೇ ಬೆಳೆಯಬೇಕಾಗುತ್ತದೆ ಎಂದು ನಟಿ ತಮಾಷೆ ಮಾಡಿದ್ದಾರೆ.

ಸಿನ್ಹಾ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವೂಮಾನಿಯಾ ಎಂಬ ಅಕೌಂಟ್ ನಲ್ಲಿ ಊಟದ ಸಮಯದಲ್ಲಿ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬ ವಿಷಯ ಏಕೆ ಇಷ್ಟೊಂದು ದೊಡ್ಡ ವಿವಾದ ಅಥವಾ ಚರ್ಚಾಸ್ಪದ ಸಂಗತಿಯಾಗಿದೆ? ಎಂಬುದಾಗಿ ಬರೆಯಲಾಗಿತ್ತು. ಇದನ್ನು ರೀ ಪೋಸ್ಟ್ ಮಾಡಿರುವ ಸೋನಾಕ್ಷಿ, ಡ್ಯಾಮ್! ನನ್ನ ಭವಿಷ್ಯದ ಮಕ್ಕಳಿಗೆ ಮುಂದೆ ಏನು ಕಾದಿದೆ ಎಂಬುದೇ ಗೊತ್ತಿಲ್ಲ. ಸಿದ್ಧರಾಗಿರಿ ಮಕ್ಕಳೇ (ನೀವು ಈಗ ಎಲ್ಲೇ ಇದ್ದರೂ ಸರಿ)! ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಆ ಮೂಲಕ ದಂಪತಿಗಳ ನಡುವಿನ ಸಹಜ ಪ್ರೀತಿ ಮತ್ತು ಆತ್ಮೀಯತೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಅವರು ಹಾಸ್ಯದ ಧಾಟಿಯಲ್ಲಿ ಬೆಂಬಲಿಸಿದ್ದಾರೆ.

ವ್ಯಂಗ್ಯವಾಡಿದ ಬಿಜೆಪಿ ನಾಯಕರು

ಸೋನಿಯಾ ಗಾಂಧಿಯವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಆತ್ಮಕತೆ ಬಿಡುಗಡೆ ಕಳೆದ ಸೋಮವಾರ ನವೆಂಬರ್ 16ರಂದು ನಡೆದಿತ್ತು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಊಟ ಮಾಡುವಾಗ ಅಮ್ಮ ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಆದರೆ ನನ್ನ ಸ್ನೇಹಿತರ ಮನೆಯಲ್ಲಿ ಎಂದೂ ಇಂಥ ದೃಶ್ಯ ಕಂಡಿರಲಿಲ್ಲ’ ಎಂದು ತಮ್ಮ ಪೋಷಕರ ನಡುವಿನ ಪ್ರೀತಿಯ ಬಾಂಧವ್ಯವನ್ನು ಸ್ಮರಿಸಿದ್ದರು. ಈ ಹೇಳಿಕೆಯನ್ನು ವ್ಯಂಗ್ಯವಾಡಿರುವ ಬಿಜೆಪಿ ನಾಯಕರು, ಸೋನಿಯಾ ಅವರ ಅತ್ಯಂತ ಸಂಭ್ರಮದ ದಿನದಂದೂ ರಾಹುಲ್‌ ತಾಯಿಗೆ ಮುಜುಗರ ಉಂಟು ಮಾಡಿದರು ಎಂದು ಟೀಕಿಸಿದ್ದರು.

ಹಳೆಬೀಡು ಶಿಲ್ಪದ ಚಿತ್ರದ ಮೂಲಕ ತಿರುಗೇಟು ಕೊಟ್ಟಿದ್ದ ರಾಹುಲ್

ಇದಕ್ಕೆ, ಕರ್ನಾಟಕದ ಹಳೆಬೀಡು ದೇವಾಲಯದ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಶಿಲ್ಪದ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ರಾಹುಲ್‌ ತಿರುಗೇಟು ನೀಡಿದ್ದಾರೆ. ಜತೆಗೆ, ‘ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬೆಂಬಲಿಗರ ಹೃದಯಗಳಲ್ಲಿ ಒಂದು ಜಾಲವನ್ನು ಹೆಣೆದಿವೆ. ಇದು ಅವರು ಪ್ರೀತಿಯನ್ನು ವ್ಯಕ್ತಪಡಿಸದಂತೆ ತಡೆಯುತ್ತಿದೆ. ಒಬ್ಬ ನಿಜವಾದ ಹಿಂದೂವಾಗಿ, ಅವರನ್ನು ಈ ಜಾಲದಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗ ಅವರು ಕೂಡ ತಮ್ಮ ಜೀವನದಲ್ಲಿ ಪ್ರೀತಿ ಹಾಗೂ ಆಪ್ತತೆಯ ಅದ್ಭುತ ಸೌಂದರ್ಯ ಮತ್ತು ಆನಂದವನ್ನು ಅನುಭವಿಸಲು ಪ್ರಾರಂಭಿಸಬಹುದು. ಸತ್ಯಂ ಶಿವಂ ಸುಂದರಂ’ ಎಂದು ಬರೆದಿದ್ದರು.

ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ಹಳೆಬೀಡು

ತಮ್ಮ ತಂದೆ- ತಾಯಿಯನ್ನು ಹಳೇಬೀಡು ದೇಗುಲದ ವಾಸ್ತುಶಿಲ್ಪಕ್ಕೆ ಹೋಲಿಸಿದ ರಾಹುಲ್‌ ನಡೆಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಕಿಡಿಕಾರಿದ್ದರು, ‘ಮಾನವವೆಂದೂ ದೇವರಾಗಲು ಸಾಧ್ಯವಿಲ್ಲ’ ಎಂದಿದ್ದಾರೆ. ರಾಹುಲ್‌ ಟ್ವೀಟ್‌ ಮಾಡಿರುವ ಚಿತ್ರ ಹಳೆಬೀಡು ದೇವಸ್ಥಾನದ್ದಾಗಿದ್ದು, 12ನೇ ಶತಮಾನದ ಇತಿಹಾಸ ಹೊಂದಿದೆ. 11 ಮತ್ತು 14ನೇ ಶತಮಾನಗಳ ನಡುವೆ ಹಳೆಬೀಡು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಆಗ ಇದನ್ನು ದ್ವಾರಸಮುದ್ರ ಎಂದು ಕರೆಯಲಾಗುತ್ತಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದಲ್ಲಿ ಸಾವಿರಾರು ಹಾಡು, ತಮಿಳಿನಲ್ಲಿ ಒಂದೇ ಹಾಡಿನಿಂದ ಮೋಡಿ: ರಾಜೇಶ್ ಕೃಷ್ಣನ್ ವಿಶೇಷತೆ ಗೊತ್ತಾ?
ಮಹಾಭಾರತದ ಪಾತ್ರ ಮಾಡಿ ತನ್ನ ಹೆಸರನ್ನೇ ಅರ್ಜುನ ಎಂದು ಬದಲಾಯಿಸಿದ ಏಕೈಕ ಮುಸ್ಲಿಂ ನಟ