
ಬಿಗ್ಬಾಸ್ ಕನ್ನಡ ಸೀಜನ್-6ರ ಮೊದಲ ಫೈನಲಿಸ್ಟ್ ಆಗಿ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಆಯ್ಕೆಯಾಗಿದ್ದಾರೆ.
ಬಿಗ್ಬಾಸ್ ಸೀಸನ್ 6ಕ್ಕೆ ತೆರೆ ಬೀಳಲು ಇನ್ನೂ 3 ವಾರಗಳು ಬಾಕಿ ಇವೆ. ಹೀಗಿರುವಾಗಲೇ ಈ ಬಾರಿಯ ಮೊದಲ ಫೈನಲಿಸ್ಟ್ನ ಆಯ್ಕೆ ಮಾಡಿರುವುದು ವಿಶೇಷ.
ಈ ವಾರ ಬಿಗ್ಬಾಸ್-6 ಮನೆಯಿಂದ ರಂಗಭೂಮಿ ಕಲಾವಿದೆ ಔಟ್: ಯಾರವರು?
ಸೀಸನ್-6ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಸೇರಿದಂತೆ ಒಟ್ಟು 20 ಕಂಟೆಸ್ಟೆಂಟ್ಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ರು. ಸದ್ಯ ಬಿಗ್ ಬಾಸ್ ಮನೆಯಲ್ಲಿ 7 ಕಂಟೆಸ್ಟೆಂಟ್ಗಳು ಮಾತ್ರ ಉಳಿದಿದ್ದಾರೆ.
ಈ ನಡುವೆಯೇ ನವೀನ್ ಸಜ್ಜು ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಂದ್ರೆ ಹಿಂದಿನ ಸೀಸನ್ಗಳಲ್ಲಿ 3 ವಾರ ಬಾಕಿ ಇರುವಾಗಲೇ ಯಾರೂ ಕೂಡಾ ಫಿನಾಲೆಗೆ ಆಯ್ಕೆಯಾಗಿರಲಿಲ್ಲ.
ಆದ್ರೆ ಇದೀಗ ನವೀನ್ ಸಜ್ಜು. ಫೈನಲ್ಗೆ 3 ವಾರ ಬಾಕಿ ಇರುವ ಮೊದಲೇ ಫೈನಲಿಸ್ಟ್ ಆಗಿ ಎಂಟ್ರಿ ಪಡೆದ ಮೊದಲ ಸ್ಪರ್ಧಿಯಾಗಿದ್ದಾರೆ.
ನವೀನ್ ಸಜ್ಜು ಫೈನಲ್ ಹೋಗಿದ್ದೇಗೆ..?
3 ವಾರ ಬಾಕಿ ಇರುವಾಗಲೇ ನವೀನ್ ಸಜ್ಜು ಅವರನ್ನು ಫೈನಲ್ಗೆ ಆಯ್ಕೆ ಮಾಡಿರುವುದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಲ್ಲಿ ನವೀನ್ ಗೆಲುವು ಸಾಧಿಸಿದ್ದಾರೆ. ಇದ್ರಿಂದ ಅವರಿಗೆ ಫೈನಲ್ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಆಯ್ಕೆ ಮಾಡಿದೆ.
ಟಾಸ್ಕ್ ನಲ್ಲಿ ಗೆದ್ದರೇ ಒಂದು ಬಂಪರ್ ಗಿಫ್ಟ್ ನೀಡುವುದಾಗಿ ಬಿಗ್ ಬಾಸ್ ಹೇಳಿತ್ತು. ಅದರಂತೆ ಟಾಸ್ ನಲ್ಲಿ ಗೆದ್ದ ನವೀನ್ ಗೆ ದೊಡ್ಡ ಉಡುಗೊರೆ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.