
ಈ ವಾರ ಬಿಗ್ ಬಾಸ್ ಮನೆಯಿಂದ ಅಕ್ಷತಾ ಪಾಂಡವಪುರ ಹೊರಬಿದ್ದಿದ್ದಾರೆ. ಬಿಗ್‌ಬಾಸ್ ಸೀಜನ್-6ರ 6ನೇ ಸ್ಪರ್ಧಿಯಾಗಿ ಅಕ್ಷತಾ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.
ಮನೆಯೊಳಗೆ ಪ್ರವೇಶ ಮಾಡಿದ ದಿನದಿಂದ ಒಂದಲ್ಲ, ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಅಕ್ಷತಾ, ಸಹಸ್ಪರ್ಧಿ ರಾಕೇಶ್ ಜೊತೆ ಹೆಚ್ಚು ಅನ್ಯುನ್ಯವಾಗಿರೋದು ಬಿಗ್‌ಬಾಸ್ ಮನೆಯ ಒಳಗೂ ಹೊರಗೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಆಂಡಿ ಮುಖಕ್ಕೆ ಬಾರಿಸಿದ ಕವಿತಾ ತಾಯಿ! ಇದೇನಿದು?
ಅಲ್ಲದೇ ಬಿಗ್ ಬಾಸ್ ಮನೆಯಲ್ಲಿನ ಅವರ ವರ್ತನೆಗಳನ್ನ ನೋಡಿದ ಕೆಲ ವೀಕ್ಷಕರು, ಅಕ್ಷತಾರನ್ನ ಹೊರ ಹಾಕಬೇಕು ಎಂದು ಪ್ರೊಟೆಸ್ಟ್ ಕೂಡ ನಡೆಸಿದ್ದರು.
ಟಾಸ್ಕ್ ಅಂತಾ ಬಂದಾಗ ಅದನ್ನ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳುತ್ತಿದ್ದ ಅಕ್ಷತಾ, ಇದೀಗ 84 ದಿನಗಳನ್ನು ಕಳೆದು ಬಿಗ್‌ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಧನರಾಜ್‌ಗೆ ಮುತ್ತಿನ ಮಳೆ
ಯಾರು ಈ ಅಕ್ಷತಾ ಪಾಂಡವಪುರ..?
ಅಕ್ಷತಾ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದ ಹುಡುಗಿ. ಪ್ರತಿಭಾವಂತ ನಟಿಯಾದ ಅಕ್ಷತಾ ಈಗಾಗ್ಲೆ ಪಲ್ಲಟ ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿ ರಾಜ್ಯಪ್ರಶಸ್ತಿಯನ್ನ ಪಡೆದಿದ್ದಾರೆ.
ಇಬೆಲ್ಲಾ ಶೀರ್ಷಿಕೆಯ ಮಹಿಳಾ ಪ್ರಧಾನ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಜೀರ್ಜಿಂಬೆ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ.
ಚಿತ್ರರಂಗಕ್ಕೆ ಕಾಲಿಡುವ ಮುನ್ನ ರಂಗಭೂಮಿ ಕಲಾವಿದೆಯಾಗಿದ್ದ ಅಕ್ಷತಾ, ಎಂಜಿ ರೋಡ್ ಶಾಂತಿ, ಒಬ್ಬಳು, ಆ ಒಂದು ನೋಟ ಹೀಗೆ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.