ಶಾಸ್ತ್ರಿ ಮತ್ತೆ ಕರ್ನಾಟಕದಲ್ಲಿ ಹುಟ್ಟದೇ ಇರಲಿ ಎಂದು ನೋವು ತೋಡಿಕೊಂಡ ಸುಮಾ ಶಾಸ್ತ್ರಿ

By Suvarna Web DeskFirst Published Mar 22, 2018, 10:57 AM IST
Highlights

ಎಲ್ ಎನ್ ಶಾಸ್ತ್ರಿ ಅವರಿಗೆ ಮರುಹುಟ್ಟು  ಅನ್ನೋದಿದ್ದರೆ ಅವರು ಕರ್ನಾಟಕದಲ್ಲಿ  ಹುಟ್ಟದೇ ಇರಲಿ. - ಚಿತ್ರೋದ್ಯಮ ನಿರ್ಲಕ್ಷ್ಯ ಮಾಡಿದ್ದರಿಂದಲೇ ಅವರು ಅಷ್ಟು ಬೇಗ ತೀರಿಕೊಂಡರು.  ಸುಮಾ ಶಾಸ್ತ್ರಿ ತಮ್ಮ ಪತಿಯನ್ನು ಕಳೆದುಕೊಂಡ  ನೋವನ್ನು ಹೊರಹಾಕಿದ್ದು  ಹೀಗೆ. ಅವರ ಸಂಕಟ ಆಕ್ರೋಶವಾಗಿ ಹೊರಹೊಮ್ಮಿತು.

ಬೆಂಗಳೂರು (ಮಾ. 22): ಎಲ್ ಎನ್ ಶಾಸ್ತ್ರಿ ಅವರಿಗೆ ಮರುಹುಟ್ಟು  ಅನ್ನೋದಿದ್ದರೆ ಅವರು ಕರ್ನಾಟಕದಲ್ಲಿ  ಹುಟ್ಟದೇ ಇರಲಿ. - ಚಿತ್ರೋದ್ಯಮ ನಿರ್ಲಕ್ಷ್ಯ ಮಾಡಿದ್ದರಿಂದಲೇ ಅವರು ಅಷ್ಟು ಬೇಗ ತೀರಿಕೊಂಡರು.  ಸುಮಾ ಶಾಸ್ತ್ರಿ ತಮ್ಮ ಪತಿಯನ್ನು ಕಳೆದುಕೊಂಡ  ನೋವನ್ನು ಹೊರಹಾಕಿದ್ದು  ಹೀಗೆ. ಅವರ ಸಂಕಟ ಆಕ್ರೋಶವಾಗಿ ಹೊರಹೊಮ್ಮಿತು.

ಕನ್ನಡ  ಚಿತ್ರರಂಗ ಕನ್ನಡದ ಪ್ರತಿಭೆಗಳಿಗೆ ಅವಕಾಶ  ಕೊಡಲೇ ಇಲ್ಲ. ಚಿತ್ರೋದ್ಯಮದಲ್ಲಿ ಪ್ರತಿಭಾವಂತರಿಗೆ ಬೆಲೆ ಇಲ್ಲ ಅನ್ನುವ ಎದೆಯಾಳದ ಸಿಟ್ಟನ್ನು  ಅವರು ನೇರವಾದ ಮಾತುಗಳಲ್ಲಿ ತೆರೆದಿಟ್ಟರು. ಪ್ರತಿಭಾವಂತರು ಕರ್ನಾಟಕದಲ್ಲಿ ಹುಟ್ಟಲೇ
ಬಾರದು ಎಂದು ಹೇಳಿಯೂ ಬಿಟ್ಟರು.  ‘ಎಲ್‌ಎನ್ ಶಾಸ್ತ್ರಿ ಏನು ಅನ್ನೋದು ಎಲ್ಲರಿಗೂ  ಗೊತ್ತಿದೆ. ಅನೇಕ ಸೂಪರ್‌ಹಿಟ್ ಹಾಡು  ಕೊಟ್ಟಿದ್ದಾರೆ ಅವರು. ಸದಾ ಹೊಸದನ್ನು  ಕೊಡಲಿಕ್ಕೆಂದೇ ತುಡಿಯುತ್ತಿದ್ದರು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹಾಡುತ್ತಾ  ಖುಷಿಪಟ್ಟವರು ಅವರು. ಆದರೆ ಕನ್ನಡ ಚಿತ್ರರಂಗ  ಮಾಡಿದ್ದೇನು? ಅದು ತಾರತಮ್ಯ ಮಾಡಿತು.  ಪ್ರತಿಭಾವಂತರನ್ನು ಕಡೆಗಣಿಸಿತು. ಉತ್ತರ  ಭಾರತದ ಗಾಯಕರಿಗೆ ಮಣೆ ಹಾಕಲಾಯಿತು.  ಇಲ್ಲಿಯೇ ಇದ್ದು ಸಾಧಿಸಬೇಕು ಅಂದುಕೊಂಡಿದ್ದ  ಶಾಸ್ತ್ರಿಯವರಿಗೆ ಈ ಬೆಳವಣಿಗೆ ಆಘಾತ ನೀಡಿತು.  ಅವಕಾಶಗಳನ್ನು ಕಾಯುತ್ತಾ ಕೂತವರಿಗೆ ನಿರಾಸೆ   ಕಾದಿತ್ತು. ಅದೇ ಕೊರಗಿನಿಂದಲೇ ಅವರಿಗೆ  ಕ್ಯಾನ್ಸರ್ ಬಂತು. ಅದು ಅವರನ್ನು ನನ್ನಿಂದ ದೂರ
ಮಾಡಿತು.’  ಸುಮಾ ಶಾಸ್ತ್ರಿ ಮಾತುಗಳಲ್ಲಿ ವಿಷಾದ ಮತ್ತು  ನೋವಿತ್ತು.  

click me!