
ಬೆಂಗಳೂರು (ಮಾ. 21): ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಅಭಿನಯದ ‘ಪೀಕು’ ಚಿತ್ರದಲ್ಲಿ ನಡೆಯುವಂತಿರುವ ಈ ಕತೆ ನಿಜವಾಗಿಯೂ ನಡೆದಿದೆ. ಅದನ್ನು ನಿಜವಾಗಿಸಿದ್ದು ‘ಕತೆಯೊಂದು ಶುರುವಾಗಿದೆ’ ಚಿತ್ರದ ನಾಯಕಿ ಪೂಜಾ ದೇವರಿಯ. ಪೂಜಾ ಮೂಲತಃ ಕನ್ನಡಿಗರು. ಆದರೆ ಅವರ ತಂದೆ ತಾಯಿ ಚೆನ್ನೈನಲ್ಲಿ ನೆಲೆಸಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಹಿಂದೆ ಅವರ ಅಜ್ಜಿ ಸುಶೀಲ ಅವರೂ ಚೆನ್ನೈಗೆ ಬಂದು ಪೂಜಾ ಕುಟುಂಬದ ಜೊತೆ ನೆಲೆಸಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಇತ್ತೀಚೆಗೆ ಇವರ ಮನೆದೇವರಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇಗುಲದಲ್ಲಿ ಕುಟುಂಬದ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ ಪೂಜಾ ಒಬ್ಬರೇ ಡ್ರೈವ್ ಮಾಡಿಕೊಂಡು ಬರುವುದು ಅಂತಾಗಿತ್ತು. ಆದರೆ ಕೊನೆಯ ಕ್ಷಣದ ಬದಲಾವಣೆ ಏನಾಯಿತು ಎಂದರೆ ಹಿಂದಿನ ದಿನ ರಾತ್ರಿ ಪೂಜಾ ಅಜ್ಜಿಯ ಬಳಿಗೆ ಹೋಗಿ, ಅಜ್ಜಿ ಅಜ್ಜಿ ಮೇಲುಕೋಟೆಗೆ ಹೋಗೋಣ ಬರ್ತೀಯಾ ಅಂತ ಕೇಳಿದ್ದಾರೆ. ಅಜ್ಜಿ ತಕ್ಷಣ ನಡೀ ಹೋಗೋಣ ಅಂತ ಉತ್ಸಾಹ ತೋರಿಸಿದರು. ಪೂಜಾ ಅಚ್ಚರಿಗೆ ಪಾರವೇ ಇಲ್ಲ. ತಕ್ಷಣ ಕಾರು ರೆಡಿ ಮಾಡಿ ಮನೆಯವರನ್ನೆಲ್ಲಾ ಒಪ್ಪಿಸಿ ಅಜ್ಜಿಗೆ ಏನೇನು ಬೇಕೋ ಅದನ್ನೆಲ್ಲಾ ಪ್ಯಾಕ್ ಮಾಡಿದ್ದಾರೆ. ಮರುದಿನ ಅಜ್ಜಿಯನ್ನು ಕಾರಲ್ಲಿ ಕೂರಿಸಿ ಪಯಣ ಹೊರಟಿದ್ದಾರೆ. ಚೆನ್ನೈನಿಂದ ಹೊರಟು ಮೇಲುಕೋಟೆಗೆ ತಲುಪಿ ಅಲ್ಲಿಂದ ಸಂಬಂಧಿಕರ ಜೊತೆ ಬೆಂಗಳೂರಿಗೆ ಮತ್ತು ಮರಳಿ ವಾಪಸ್ ಬಂದಿದ್ದಾರೆ. ಸುಮಾರು ಸಾವಿರ ಕಿಮೀಗಳ ಪಯಣ ಅದು. ಅಲ್ಲಲ್ಲಿ ಕಾರು ನಿಲ್ಲಿಸಿ, ಅಜ್ಜಿಗೆ ಕಾಫಿ
ಕುಡಿಸಿ, ಚೆಂದ ಜಾಗ ಕಂಡಾಗ ಕಾರಿಳಿದು ಅಜ್ಜಿ ಮತ್ತು ಮೊಮ್ಮಗಳು ಜೊತೆಜೊತೆಗೆ ನಕ್ಕು ಸಂಭ್ರಮಿಸಿದ್ದಾರೆ. ಈ ಕತೆ ಹೇಳುವಾಗ ಪೂಜಾ ದನಿಯಲ್ಲಿ ಖುಷಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.