AI ಜಗತ್ತಿನಲ್ಲಿ ಸಿಂಪಲ್ ಸುನಿ ಹೊಸ ಪ್ರಯೋಗ: ಉತ್ತರ ಹುಡುಕಲು ಬರ್ತಿದೆ ಲಂಬೋದರ 2.0!

Published : Oct 12, 2026, 04:28 PM IST
Lambodara 2.0

ಸಾರಾಂಶ

ಕನ್ನಡದ ಸೈ-ಫೈ ಸಿನಿಮಾ ‘ಲಂಬೋದರ 2.0’ 2026ರ ನವೆಂಬರ್ 20ರಂದು ಬಿಡುಗಡೆಯಾಗಲಿದೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಕುನಾಲ್ ಕಪೂರ್ ಕನ್ನಡಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿದ್ದಾರೆ.

ಬಾಲಿವುಡ್ ನಟ ಕುನಾಲ್ ಕಪೂರ್ ಮೊದಲ ಬಾರಿಗೆ ನಟಿಸುತ್ತಿರುವ ಕನ್ನಡದ ಸೈ-ಫೈ ಸಿನಿಮಾ 'ಲಂಬೋದರ 2.0' ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರ 2026ರ ನವೆಂಬರ್ 20ರಂದು ತೆರೆಗೆ ಬರಲಿದೆ. ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ ಜೊತೆಗೆ 'ಜಿಯಾ' ಹೆಸರಿನ ರೋಬೋಟ್ ಕೂಡ ಚಿತ್ರದಲ್ಲಿದೆ.

ಕನ್ನಡದ ಬಹುನಿರೀಕ್ಷಿತ ಸೈ-ಫೈ ಸಿನಿಮಾ 'ಲಂಬೋದರ 2.0' ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಬಾಲಿವುಡ್ ನಟ ಕುನಾಲ್ ಕಪೂರ್ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ 2026ರ ನವೆಂಬರ್ 20ರಂದು ಥಿಯೇಟರ್‌ಗೆ ಬರಲಿದೆ ಎಂದು ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.

ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, 'ಮಹಾವೀರ್ ಜೈನ್ ಫಿಲ್ಮ್ಸ್ ಅರ್ಪಿಸುವ, ಸಿಂಪಲ್ ಸುನಿ ನಿರ್ದೇಶನದ 'ಲಂಬೋದರ 2.0' ಸಿನಿಮಾ 2026ರ ನವೆಂಬರ್ 20ರಂದು ರಿಲೀಸ್ ಆಗಲಿದೆ. ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ ಹಾಗೂ ಕುನಾಲ್ ಕಪೂರ್ ಇದರಲ್ಲಿ ನಟಿಸಿದ್ದಾರೆ. ವಿಶೇಷವಾಗಿ 'ಜಿಯಾ' ಎಂಬ ಹ್ಯೂಮನಾಯ್ಡ್ ರೋಬೋಟ್ ಕೂಡ ಚಿತ್ರದಲ್ಲಿದೆ. 2026ರ ಅಕ್ಟೋಬರ್ 14ರಂದು ಫಸ್ಟ್ ಲುಕ್ ರಿಲೀಸ್ ಆಗಲಿದೆ' ಎಂದು ಬರೆದುಕೊಂಡಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ಪ್ರಪಂಚದ ಸುತ್ತ ಈ ಸಿನಿಮಾದ ಕಥೆ ಸಾಗಲಿದೆ. ತಂತ್ರಜ್ಞಾನ ನಿಜಕ್ಕೂ ಮನುಷ್ಯನಿಗೆ ಖುಷಿ ಕೊಡುತ್ತಾ? ಅನ್ನೋ ಪ್ರಶ್ನೆಯನ್ನು ಈ ಚಿತ್ರ ಹುಟ್ಟುಹಾಕಲಿದೆ. ಮನರಂಜನೆ, ಸಸ್ಪೆನ್ಸ್, ಕಾಮಿಡಿ ಜೊತೆಗೆ ಮನುಷ್ಯನ ಭಾವನೆಗಳು ಹಾಗೂ ಎಐ ನಡುವಿನ ಸಂಘರ್ಷವನ್ನು ನಿರ್ದೇಶಕರು ತೆರೆಮೇಲೆ ತರುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ತರಣ್ ಆದರ್ಶ್ ಅಕ್ಟೋಬರ್ 11, 2026ರಂದು ಟ್ವೀಟ್ ಮಾಡಿದ್ದಾರೆ.

ಸಿನಿಮಾ ಹಾಗೂ ತಾರಾಗಣದ ಬಗ್ಗೆ

ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರುವ 'ಲಂಬೋದರ 2.0' ಚಿತ್ರದಲ್ಲಿ ಹ್ಯೂಮನಾಯ್ಡ್ ರೋಬೋಟ್ ಪ್ರಮುಖ ಪಾತ್ರದಲ್ಲಿ ನಟಿಸಿದೆ. ಬೆಂಗಳೂರಿನ ಮಚಾನಿ ರೊಬೊಟಿಕ್ಸ್ ಸಂಸ್ಥೆ ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ 'ಜಿಯಾ' ಎಂದು ಹೆಸರಿಡಲಾಗಿದೆ. ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ, ಮ್ಯಾಕ್ ಡಿಸೋಜಾ ಹಾಗೂ ಮೇಘನಾ ಗಾಂವ್ಕರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಾಸ್ ಪ್ರೊಡಕ್ಷನ್ಸ್ ಹಾಗೂ ಅನಿಲ್ ಶೆಟ್ಟಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಎಐ ಆಧಾರಿತ ಸೋಷಿಯಲ್ ಥ್ರಿಲ್ಲರ್

ಚಿತ್ರತಂಡ ಹೇಳುವಂತೆ, ಇದೊಂದು ಎಐ ಆಧಾರಿತ ಸೋಷಿಯಲ್ ಥ್ರಿಲ್ಲರ್ ಸಿನಿಮಾ. ಇಂದಿನ ಯುವಜನತೆ ಸೋಷಿಯಲ್ ಮೀಡಿಯಾದಲ್ಲಿ ಕಳೆಯುವ ಸಮಯ, ಡಿಜಿಟಲ್ ಪ್ರಪಂಚದ ಬದಲಾವಣೆಗಳು ಹಾಗೂ ಕೃತಕ ಬುದ್ಧಿಮತ್ತೆಯ ಪ್ರಭಾವವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂದಿನ ಡಿಜಿಟಲ್ ಯುಗದ ಯುವಕರಿಗೆ ಈ ಸಿನಿಮಾ ತುಂಬಾನೇ ಹತ್ತಿರವಾಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಶೂಟಿಂಗ್ ಕಂಪ್ಲೀಟ್

ಇನ್ನು ಈ ವರ್ಷದ ಜನವರಿಯಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಇತ್ತೀಚೆಗಷ್ಟೇ ನಿರ್ದೇಶಕ ಸಿಂಪಲ್ ಸುನಿ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಲಾವಣಿ ಕಲೆಯ ಹೆಸರನ್ನು ಬೆಳಗಿಸಿದ್ದ ನಟಿ ಮಧು ಕಂಬಿಕರ್ ಇನ್ನಿಲ್ಲ: ಮರಾಠಿ ಚಿತ್ರರಂಗ ಕಂಬನಿ
‘ಮಗಳು ಇನ್ನಿಲ್ಲ’ ಎಂದು ಭಾವಿಸಿದ್ದ ತಂದೆ; 8 ಗಂಟೆಗಳ ಬಳಿಕ ಶವಪೆಟ್ಟಿಗೆಯೊಳಗೆ ನಡೆದದ್ದೇನು?