
ಬೆಂಗಳೂರು(ಜು.14): 'ಆರ್ಟ್ ಆಫ್ ಲಿವಿಂಗ್'ನ ಸಂಸ್ಥಾಪಕ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಜೀವನಕಥನ ಆಧರಿಸಿ ಶೀಘ್ರದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ಅದ್ದೂರಿ ಸಿನಿಮಾ ತಯಾರಾಗಲಿದೆ. 'ಪಠಾಣ್', 'ಫೈಟರ್' ಮೊದಲಾದ ಸಿನಿಮಾ ನಿರ್ದೇಶಿಸಿರುವ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಿದ್ದಾರ್ಥ್ ಆನಂದ್ ಹಾಗೂ ಮತ್ತೋರ್ವ ಬಾಲಿವುಡ್ ನಿರ್ಮಾಪಕ ಮಹಾವೀರ ಜೈನ್ ಜೊತೆಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಈ ಬಗ್ಗೆ ಮಹಾವೀರ್ ಜೈನ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥೆ ನೀತು ಮಹಾವೀರ್‌ಜೈನ್ ಮಾಹಿತಿ ನೀಡಿದ್ದು, 'ಈ ಸಿನಿಮಾ ಜಾಗತಿಕ ಶಾಂತಿ, ಅಹಿಂಸೆಗೆ ರವಿಶಂಕರ ಗುರೂಜಿ ನೀಡಿರುವ ಕೊಡುಗೆ, ಅವರ ಮಾನವೀಯ ಕೆಲಸಗಳ ಮೇಲೆ ಬೆಳಕು ಚೆಲ್ಲಲಿದೆ. ಅದರಲ್ಲೂ ಮುಖ್ಯವಾಗಿ ಕೊಲಂಬಿಯಾದ 52 ವರ್ಷಗಳ ಅಂತರ್ಯುದ್ಧವನ್ನು ರವಿಶಂಕರ ಗುರೂಜಿ ಶಾಂತಿ ಮಾತುಕತೆಯ ಮೂಲಕ ಬಗೆಹರಿಸಿದ ಅಂಶ ಸಿನಿಮಾದಲ್ಲಿ ಪ್ರಮುಖವಾಗಿ ಬರಲಿದೆ' ಎಂದು ತಿಳಿಸಿದ್ದಾರೆ.
ಐಸ್‌ಲ್ಯಾಂಡ್ ಪ್ರಧಾನಿ ಬೆನೆಡಿಕ್ಟ್‌ಸನ್ ಭೇಟಿಯಾದ ರವಿಶಂಕರ್ ಗುರೂಜಿ; ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ
'ಬಾಲಿವುಡ್ ಸಿನಿಮಾ ಬರಹಗಾರ ಮೊಂಟೂ ಬಸ್ಸಿ ಈ ಸಿನಿಮಾದ ಕಥೆ ಬರೆದಿದ್ದಾರೆ. ಗುರೂಜಿ ಪ್ರತಿಪಾದಿಸುವ ವಸುದೈವ ಕುಟುಂಬಕಂ ತತ್ವ, ವಾಷಿಂಗ್ಟನ್ ಡಿಸಿ ಜಾಗತಿಕ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಪಾಲ್ಗೊಂಡ ಕ್ಷಣಗಳನ್ನೆಲ್ಲ ಸಿನಿಮಾದಲ್ಲಿ ತರಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞರು, ಕಲಾವಿದರು ಈ ಸಿನಿಮಾದಲ್ಲಿರುತ್ತಾರೆ' ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.