Shrirastu Shubhamastu: ಶಾರ್ವರಿಯನ್ನು ಎಷ್ಟು ಬೇಕಾದ್ರೂ ಬೈರಿ, ನನ್ನ ಹೆಸ್ರು ಹೇಳಿ ಕೆಟ್ಟ ಮಾತನಾಡಿದ್ರೆ... ವಾರ್ನಿಂಗ್​ ಕೊಟ್ಟ ನಟಿ

Published : Jun 02, 2025, 06:04 PM IST
Sapna Dixit

ಸಾರಾಂಶ

ಶ್ರೀರಸ್ತು ಶುಭಮಸ್ತು ಸೀರಿಯಲ್​ ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್​ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ವಾರ್ನ್​ ಮಾಡಿದ್ದಾರೆ. ಏನದು?

ನೋಡಿ, ನಾನು ಪರ್ಸನಲ್ಲಾಗಿ ಶಾರ್ವರಿ ಅಲ್ಲ. ನೀವು ಶಾರ್ವರಿಯನ್ನು ಎಷ್ಟೇ ಬೇಕಾದರೂ ಉಗಿದುಕೊಳ್ಳಿ, ಬೈದುಕೊಳ್ಳಿ ನನಗೆ ಬೇಸರ ಇಲ್ಲ. ಇದಾಗಲೇ ಸುಮಾರ್​ ಮಂದಿ ಹಾಳಾದವಳು, ನೀನು ಸಾಯ್ಬಾರ್ದಾ ಹಾಗೆ ಹೀಗೆ ಅಂತೆಲ್ಲಾ ಹೇಳ್ತಾರೆ. ನನಗೆ ಅದು ಸ್ವಲ್ಪನೂ ಬೇಸರ ಇಲ್ಲ. ಏಕೆಂದ್ರೆ ಶಾರ್ವರಿ ಕ್ಯಾರೆಕ್ಟರೇ ಹಾಗೆ. ಆ ರೀತಿ ಕ್ಯಾರೆಕ್ಟರ್​ ಅಷ್ಟು ಕಿರಿಕಿರಿ ತಂದಿದೆ ಎಂದರೆ ಆ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೇನೆ ಎಂದು ಅರ್ಥ. ಆದ್ದರಿಂದ ಎಷ್ಟು ಬೇಕಾದ್ರೂ ಬೈದುಕೊಂಡರೂ ನನಗೆ ಬೇಜಾರು ಇಲ್ಲ ಎನ್ನುತ್ತಲೇ ಕೆಲವರು ಪರ್ಸನಲ್​ ಆಗಿ ಅಟ್ಯಾಕ್​ ಮಾಡುವ ಬಗ್ಗೆಯೂ ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್​ ಅಸಮಾಧಾನ ಹೊರಹಾಕಿದ್ದಾರೆ.

ಎಫ್​ಡಿಎಫ್​ಎಸ್​ ಯೂಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ, ಕೆಲವೊಮ್ಮೆ ನನ್ನ ಮೇಲೆ ಪರ್ಸನಲ್​ ಆಗಿ ಅಟ್ಯಾಕ್​ ಮಾಡಲಾಗುತ್ತದೆ. ಇದು ನನಗೆ ತುಂಬಾ ನೋವು ಉಂಟು ಮಾಡುತ್ತದೆ. ಮಹಿಳೆಯೊಬ್ಬರು ನೇರವಾಗಿ ಸಪ್ನಾ ದೀಕ್ಷಿತ್​ ಸಾಯ್ಬಾರ್ದಾ ಎಂದು ಕೇಳಿದರು. ಅವರಿಗೆ ಪರ್ಸನಲ್​ ಆಗಿ ಮೆಸೇಜ್​ ಮಾಡಿ ವಾರ್ನ್​ ಮಾಡಿದೆ. ಹೀಗೆ ಮುಂದುವರೆಗೆ ಕಂಪ್ಲೇಂಟ್​ ಕೊಡಬೇಕಾಗುತ್ತದೆ. ನೀವು ಪಾತ್ರವನ್ನು ಬೈರಿ ಆದ್ರೆ ನನ್ನನ್ನಲ್ಲ ಎಂದೆ. ಕೊನೆಗೆ ಆಕೆ ಸಾರಿ ಕೇಳಿ ಮೆಸೇಜ್​ ಅನ್ನು ಡಿಲೀಟ್​ ಮಾಡಿದ್ರು. ಆದ್ದರಿಂದ ಎಲ್ಲರೂ ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಾನು ಪರ್ಸನಲ್​ ಆಗಿ ಬೇರೆಯೇ ಕ್ಯಾರೆಕ್ಟರ್​ನವಳು. ನಾನಷ್ಟೇ ಅಲ್ಲದೇ ಆನ್​ಸ್ಕ್ರೀನ್​ನಲ್ಲಿ ವಿಲನ್​ ಆಗಿರುವವರೆಲ್ಲರೂ ಇಂಥದ್ದನ್ನೇ ಅನುಭವಿಸುತ್ತಾರೆ ಎನ್ನುವ ಬಗ್ಗೆ ಸಪ್ನಾ ಮಾತನಾಡಿದ್ದಾರೆ.

ಅಷ್ಟಕ್ಕೂ, ಸೀರಿಯಲ್​ಗಳು ಇಂದು ಹೆಚ್ಚಿನವರಿಗೆ ಅದೆಷ್ಟು ಆಪ್ಯವಾಗಿದೆ ಎಂದರೆ, ಅದರೊಳಗೇ ಹೊಕ್ಕು, ಅದರಲ್ಲಿರುವ ಪಾತ್ರಗಳನ್ನೇ ಮೈಮೇಲೆ ಆಹ್ವಾನಿಸಿಕೊಳ್ಳುವವರಿದ್ದಾರೆ. ತಾವು ಟಿ.ವಿಯಲ್ಲಿ ನೋಡುತ್ತಿರುವುದು ಕಾಲ್ಪನಿಕ ಕಥೆ, ಇಲ್ಲಿರುವವರು ಪಾತ್ರಧಾರಿಗಳಷ್ಟೇ. ಈ ಸೀರಿಯಲ್​ನಲ್ಲಿ ವಿಲನ್​ ಆಗಿದ್ದರೆ, ಇನ್ನೊಂದು ಸೀರಿಯಲ್​ನಲ್ಲಿ ನಾಯಕ-ನಾಯಕಿಯಾಗುತ್ತಾರೆ ಎನ್ನುವ ಯೋಚನೆ ಮಾಡದ ಹಲವು ಮಂದಿ ಇಂದಿಗೂ ಇದ್ದಾರೆ. ಇದೇ ಕಾರಣಕ್ಕೆ ವಿಲನ್​ ಪಾತ್ರಧಾರಿಗಳು ತಾವು ಎಲ್ಲಾದರೂ ಹೋದರೆ ಜನ ತಮ್ಮನ್ನು ನೋಡುವ ರೀತಿ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಹಿಂದೊಮ್ಮೆ ಇದೇ ಸೀರಿಯಲ್​ ತುಳಸಿ ಮಗಳಾಗಿರುವ ಹಾಗೂ ಒಂದು ರೀತಿಯಲ್ಲಿ ವಿಲನ್​ ಎನಿಸಿಕೊಂಡಿದ್ದ ಸಂಧ್ಯಾ ಪಾತ್ರಧಾರಿ ದೀಪಾ ಕಟ್ಟೆ ಈ ಬಗ್ಗೆ ಮಾತನಾಡಿದ್ದರು. ಹೊರಗಡೆ ಹೋದಾಗ ಜನ ಹೇಗೆ ಛೀಮಾರಿ ಹಾಕುತ್ತಾರೆ ಎಂದು ಹೇಳಿದ್ದರು.

ಇನ್ನು ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್​ ಕುರಿತು ಹೇಳುವುದಾದರೆ, ಇವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ಎಂಟ್ರಿ ಕೊಟ್ಟವರು. ಇವರ ಮೊದಲ ಸೀರಿಯಲ್​ ಪ್ರಾಯಶ್ಚಿತ ಧಾರಾವಾಹಿಯಲ್ಲಿ. ತದ ನಂತರ ಪಾ.ಪ ಪಾಂಡು, ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾಂಡುರಂಗ ವಿಠಲ, ದಂಡ ಪಿಂಡಗಳು, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ, ಮಾಂಗಲ್ಯ, ಪುರುಷೋತ್ತಮ, ಪದ್ಮಾವತಿ ಸೇರಿದಂತೆ ಎಪ್ಪತ್ತೈದಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬೇರೆ ಭಾಷೆಗಳ ಸೀರಿಯಲ್​ಗಳಲ್ಲಿಯೂ ನಟಿಸಿರುವ ಅವರು, ಕೆಲವು ಸಿನಿಮಾಗಳನ್ನೂ ಮಾಡಿದ್ದಾರೆ. ರನ್ನ, ರಂಗಿತರಂಗ, ಕೃಷ್ಣ ರುಕ್ಕು, ನಿಜ,ಪ್ರೀತಿಯ ಲೋಕ, ಶಿವಲಿಂಗ, ಭರ್ಜರಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಿನವುಗಳಲ್ಲಿ ಇವರದ್ದು ಪೋಷಕ ಪಾತ್ರ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!