Shravani Subramanya Serial: ಅಪ್ಪ ಕಟ್ಟಿದ ತಾಳಿ ಮಗಳು ಧರಿಸ್ಬೋದಾ? 'ಶ್ರಾವಣಿ-ಸುಬ್ರಹ್ಮಣ್ಯ' ನೋಡಿ ನೆಟ್ಟಿಗರು ಶಾಕ್​!

Published : Jun 26, 2025, 04:11 PM ISTUpdated : Jun 26, 2025, 04:27 PM IST
Shravani Subramanya

ಸಾರಾಂಶ

ಶ್ರಾವಣಿಯ ಕತ್ತಿನಲ್ಲಿ ಇರುವ ತಾಳಿ ಆಕೆಯ ಅಮ್ಮನದ್ದು ಎಂದಿದ್ದಾಳೆ ಅಜ್ಜಿ. ಹಾಗಿದ್ರೆ ಅಮ್ಮನ ಮಂಗಳಸೂತ್ರ ಮಗಳು ಧರಿಸ್ಬೋದಾ ಎಂಬೆಲ್ಲಾ ಪ್ರಶ್ನೆ ಉದ್ಭವವಾಗಿದೆ. ನೆಟ್ಟಿಗರು ಏನು ಹೇಳಿದ್ರು ನೋಡಿ! 

ಹಿಂದೂ ಧರ್ಮದಲ್ಲಿ ಮಂಗಳಸೂತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಇಂದು ಫ್ಯಾಷನ್​ ಹೆಸರಿನಲ್ಲಿನೋ ಅಥವಾ ಸಿನಿಮಾ ತಾರೆಯರನ್ನು ನೋಡಿ ಅವರನ್ನೇ ಫಾಲೋ ಮಾಡಿಯೋ ಒಟ್ಟಿನಲ್ಲಿ ಕೆಲವರು ಇದನ್ನು ಧರಿಸುವುದಿಲ್ಲ ಎನ್ನುವುದು ನಿಜವಾದರೂ ಅದರ ಪಾವಿತ್ರ್ಯತೆ ಮಾತ್ರ ಕಡಿಮೆಯೇನೂ ಆಗಿಲ್ಲ. ಇದು ಪತಿ ಮತ್ತು ಪತ್ನಿ ನಡುವಿನ ಸಂಬಂಧವನ್ನು ಸಂಕೇತಿಸುತ್ತದೆ. ಮಂಗಳಸೂತ್ರವನ್ನು ಧರಿಸುವುದು ಪತ್ನಿಯ ಪವಿತ್ರತೆ ಮತ್ತು ಪತಿ-ಪತ್ನಿಯರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ ಎಂದೇ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹೆಸರೇ ಹೇಳುವಂತೆ "ಮಂಗಳ" ಎಂದರೆ ಶುಭ ಅಥವಾ ಮಂಗಳಕರ ಮತ್ತು "ಸೂತ್ರ" ಎಂದರೆ ದಾರ ಅಥವಾ ಸರಪಳಿ. ಆದ್ದರಿಂದ, "ಮಂಗಳಸೂತ್ರ" ಎಂಬುದು ಶುಭವಾದ ದಾರ ಅಥವಾ ಸರಪಳಿ ಎಂದು ಅರ್ಥ. ಇದು ಪತಿಯಿಂದ ಪತ್ನಿಗೆ ನೀಡಲಾಗುವ ಪವಿತ್ರ ವಸ್ತುವಾಗಿದೆ ಮತ್ತು ಇದು ಅವರ ಸಂಬಂಧದ ಬಾಂಧವ್ಯವನ್ನು ಸೂಚಿಸುತ್ತದೆ.

ಕರಿಮಣಿ, ಮಂಗಳಸೂತ್ರ, ತಾಳಿ ಎಂದೆಲ್ಲಾ ಕರೆಸಿಕೊಳ್ಳುವ ಈ ಸರಪಳಿಯ ಜೊತೆ ಎಷ್ಟೋ ಮಹಿಳೆಯರ ಭಾವುಕ ಸಂಬಂಧವೂ ಇರುತ್ತದೆ. ಬೇರೆ ಯಾವುದೇ ಒಡವೆಗಳನ್ನು ಕಣ್ಣುಮುಚ್ಚಿ ಬೇಕಾದರೂ ತೆಗೆದುಕೊಡಲು ತಯಾರು ಇರುವ ಮಹಿಳೆಯರು, ಮಂಗಳಸೂತ್ರದ ವಿಷಯಕ್ಕೆ ಬಂದರೆ ಮಾತ್ರ ಚಂಡಿ ಚಾಮುಂಡಿ ಅವತಾರ ತಾಳುವುದು ಉಂಟು. ಅದು ಚಿನ್ನದ್ದೇ ಆಗಿರಬೇಕೆಂದೇನೂ ಇಲ್ಲ, ಅರಿಶಿಣದ ಕೊಂಬಾದರೂ ಆದೀತು. ಆದರೆ ಆ ಸೂತ್ರದ ಜೊತೆ ಅವರಿಗೆ ಇರುವ ಅವಿನಾಭಾವ ನಂಟದು. ಹಾಗಿದ್ದ ಮೇಲೆ ಗಂಡಸು ತನ್ನ ಪತ್ನಿಗೆ ಕಟ್ಟಿದ ಮಂಗಳಸೂತ್ರವನ್ನು ಮಗಳಾದವಳು ಧರಿಸ್ಬೋದಾ? ಅರ್ಥಾತ್​ ಅಮ್ಮನ ಮಂಗಳಸೂತ್ರವನ್ನು ಮಗಳು ಧರಿಸ್ಬೋದಾ ಎನ್ನುವ ಪ್ರಶ್ನೆ ಬಂದರೆ, ಛೇ ಇದೆಂಥ ಮಾತು ಎಂದು ಕೇಳಬಹುದು. ಅಪ್ಪ ಕಟ್ಟಿದ ತಾಳಿಯನ್ನು ಮಗಳು ಧರಿಸುವುದು ಎಂದರೆ ಇದೇನಿದು ಎಂದು ಈ ಪ್ರಶ್ನೆ ಕೇಳಿದವರ ಮೇಲೆಯೇ ಹರಿಹಾಯ್ಬೋದು.

ಆದರೆ, ಇದೀಗ ಶ್ರಾವಣಿ-ಸುಬ್ರಹ್ಮಣ್ಯ ಸೀರಿಯಲ್​ನಲ್ಲಿ ಅದೇ ರೀತಿ ಆಗಿದ್ದು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ. ಅಮ್ಮನಾದವಳು ತನ್ನೆಲ್ಲಾ ಒಡವೆಗಳನ್ನು ಮಗಳಿಗೆ ನೀಡುವುದು ಇದೆಯಾದರೂ, ತನ್ನ ತಂದೆ ಕಟ್ಟಿದ ತಾಳಿಯನ್ನು ಮಾತ್ರ ನೀಡಲು ಸಾಧ್ಯವೇ ಇಲ್ಲ. ಇದನ್ನೇನೂ ಶಾಸ್ತ್ರ, ಸಂಪ್ರದಾಯದಲ್ಲಿಯೇ ಹೇಳಬೇಕೆಂದೇನಿಲ್ಲ. ಅದು ಎಂಥವರಿಗೂ ತಿಳಿಯುವಂಥದ್ದೇ. ಆದರೆ ಇದೀಗ ಈ ಸೀರಿಯಲ್​ನಲ್ಲಿ ಇಂಥದ್ದೊಂದು ಎಡವಟ್ಟು ಮಾಡಿರುವುದು ಭಾರಿ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಇದರಲ್ಲಿ ಶ್ರಾವಣಿಗೆ ಅಜ್ಜಿ, ತನ್ನೆಲ್ಲಾ ಒಡವೆಗಳನ್ನು ನೀಡಿದ್ದಾರೆ. ಇದು ನಿನ್ನ ಅಮ್ಮನ ಒಡವೆಗಳು ಎಂದು ಹೇಳಿದ್ದಾಳೆ. ಕೊನೆಗೆ ಒಂದು ಸರವನ್ನು ನಾನೇ ನನ್ನ ಕೈಯಾರೆ ನಿನಗೆ ಹಾಕುತ್ತೇನೆ ಎಂದು ಸರ ಹಾಕುವ ಸಮಯದಲ್ಲಿ ಮಂಗಳಸೂತ್ರದ ಮೇಲೆ ಅಜ್ಜಿಯ ಗಮನ ಹೋಗಿದೆ. ಆಗ ಅದನ್ನು ನೋಡಿ ಆಕೆ ಶಾಕ್​ ಆಗಿದ್ದಾಳೆ. ಶಾಕ್​ ಆಗಿರುವುದಕ್ಕೆ ಕಾರಣ, ಅಮ್ಮನ ಮಂಗಳಸೂತ್ರವನ್ನು ಮಗಳು ಹಾಕಿಕೊಂಡಿದ್ದಾಳೆ ಎಂದಲ್ಲ, ಬದಲಿಗೆ ತಾಯಿಯಿಂದ ದೂರವಾಗಿದ್ದ ಶ್ರಾವಣಿಗೆ ಅಮ್ಮನ ಮಂಗಳಸೂತ್ರ ಹೇಗೆ ಸಿಕ್ಕಿತು ಎನ್ನುವ ಆಶ್ವರ್ಯ ಆಕೆಯದ್ದು.

ಇದು ನಿನಗೆ ಎಲ್ಲಿ ಸಿಕ್ಕಿತು? ಇದು ನನ್ನ ಮಗಳು ಅರ್ಥಾತ್​ ನಿನ್ನ ಅಮ್ಮ ಹಾಕಿಕೊಂಡ ಮಂಗಳಸೂತ್ರ ಅಮ್ಮಾ ಎಂದು ಅಜ್ಜಿ ಭಾವುಕ ಆಗಿದ್ದಾಳೆ. ಇಲ್ಲಿ ಶ್ರಾವಣಿಯೇನೋ ತಿಳಿಯದೇ ಆ ಮಂಗಳಸೂತ್ರವನ್ನು ಹಾಕಿಕೊಂಡಿದ್ದಾಳೆ ನಿಜ. ಆದರೆ ಅಜ್ಜಿ ಈ ಮಂಗಳಸೂತ್ರವನ್ನು ಹಾಕಿಕೊಂಡಿರುವುದು ತಪ್ಪು ಎನ್ನುವ ಭಾವನೆಯಿಂದ ನೋಡದೇ ಮಗಳ ಮಂಗಳಸೂತ್ರ ಎಂದು ಭಾವುಕ ಆಗಿರುವುದನ್ನು ನೋಡಿ ಇದೆಂಥ ದೃಶ್ಯ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಅಷ್ಟಕ್ಕೂ ಸೀರಿಯಲ್​ನಲ್ಲಿ ಏನು ಬೇಕಾದರೂ ಆಗುತ್ತದೆ ಎನ್ನುವುದು ನಿಜವಾದರೂ, ವಾಸ್ತವಕ್ಕೆ ತೀರಾ ದೂರವಾಗಿರುವುದನ್ನು ತೋರಿಸಬೇಕು, ಅದರಲ್ಲಿಯೂ ಮಂಗಳಸೂತ್ರದಂಥ ಭಾವನೆಗಳಿಗೆ ಧಕ್ಕೆ ಮಾಡಬೇಡಿ, ಇದನ್ನು ಬೇರೆ ರೀತಿಯಲ್ಲಿ ತೋರಿಸುವ ಸಾಧ್ಯತೆ ಇತ್ತು ಅಥವಾ ಅಜ್ಜಿ ಇದನ್ನು ಹಾಕಿಕೊಂಡಿರುವುದು ತಪ್ಪು ಎಂದು ಹೇಳಬಹುದಿತ್ತು ಎಂದೆಲ್ಲಾ ನೆಟ್ಟಿಗರು ಹೇಳುತ್ತಿದ್ದಾರೆ. ಮುಂದೇನಾಗತ್ತೆ ನೋಡಬೇಕಷ್ಟೇ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?