
ಟಾಲಿವುಡ್‌ನಲ್ಲಿ ಶ್ರದ್ಧಾ ಶ್ರೀನಾಥ್ ಗಟ್ಟಿಯಾಗಿ ನೆಲೆಯೂರುವ ಲಕ್ಷಣಗಳು ಕಾಣುತ್ತಿವೆ. ನಾನಿ ಜತೆಗೆ ‘ಜೆರ್ಸಿ’ ಸಿನಿಮಾದಲ್ಲಿ ನಟಿಸಿ ಗೆದ್ದ ಮೇಲೆ ಈಗ ಮತ್ತೊಬ್ಬ ಸ್ಟಾರ್ ಹೀರೋ, ಸ್ಟಾರ್ ಡೈರೆಕ್ಟರ್ ಚಿತ್ರಕ್ಕೆ ನಾಯಕಿ ಆಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆ ಹೀರೋ ಮೆಗಾಸ್ಟಾರ್ ಚಿರಂಜೀವಿ. ಆ ನಿರ್ದೇಶಕ ಕೊರಟಾಲ ಶಿವ.
ಸುಶ್ಮಿತಾ ಸೇನ್ ಫುಲ್ ವರ್ಕ್ ಔಟ್..ವಿಡಿಯೋ ವೈರಲ್
‘ಸೈರಾ’ ಚಿತ್ರದ ನಂತರ ಚಿರು ಹಾಗೂ ಕೊರಟಾಲ ಶಿವ ಕಾಂಬಿನೇಷನಲ್ಲೊಂದು ಸಿನಿಮಾ ಸೆಟ್ಟೇರಲಿದ್ದು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಈ ಇಬ್ಬರಲ್ಲಿ ಕನ್ನಡದ ‘ಯೂ ಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್ ಕೂಡ ಒಬ್ಬರು ಎಂಬುದು ತೆಲುಗು ಚಿತ್ರರಂಗದಲ್ಲಿ ಈಗಷ್ಟೆ ಕೇಳಿ ಬರುತ್ತಿರುವ ಮಾತು.
‘ಅಮರ್’ ರಿಲೀಸ್‌ಗೂ ಮುನ್ನ 1 ಲಕ್ಷಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿ
ಮತ್ತೊಬ್ಬ ನಾಯಕಿಯಾಗಿ ನಯನಾ ತಾರಾ ಅಥವಾ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ‘ಶ್ರೀಮಂತುಡು’, ‘ಜನತಾ ಗ್ಯಾರೇಜ್’, ‘ಭರತ್ ಅನೆ ನೇನು’ ಮುಂತಾದ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ಕೊರಟಾಲ ಶಿವ. ಇಂಥ ನಿರ್ದೇಶಕನ ಚಿತ್ರಕ್ಕೆ ನಾಯಕಿ ಆಗುವ ಮೂಲಕ ಶ್ರದ್ಧಾ ಶ್ರೀನಾಥ್, ಟಾಲಿವುಡ್ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.