
ಆ್ಯಮಿ ಜಾಕ್ಸನ್ ನಟಿಯಾಗಿರುವ ಈ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ವಿಭಿನ್ನ ಗೆಟ್ ಅಪ್‌ನಲ್ಲಿ ಶಿವರಾಜ್ ಕುಮಾರ್ ಕಾಣಿಸುತ್ತಿದ್ದು, ಕಳೆದೆರಡು ವರ್ಷಗಳಿಂದಲೂ ಚಿತ್ರೀಕರಣ ನಡೆಯುತ್ತಲೇ ಇದೆ. ಈಗಾಗಲೇ ಈ ಚಿತ್ರದ ಹಾಡುಗಳು 1.8 ಕೋಟಿ ರೂ.ಗೆ ಮಾರಾಟವಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷ.
'ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ 1 ಅಂತಾರೋ...' ಹಾಡಿನಲ್ಲಿಯೂ ಶಿವರಾಜ್‌ಕುಮಾರ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು, ನೃತ್ಯ ನಿರ್ದೆಶನವನ್ನು ವಿ. ನಾಗೇಶ್ ಮಾಸ್ಟರ್ ಮಾಡಿದ್ದಾರೆ. Young and Energetic ಆಗಿ ಶಿವಣ್ಣ ಸ್ಟೆಪ್ಸ್ ಹಾಕಿದ್ದು, ಈ ಹಾಡಿಗೆ ಜೀವ ತುಂಬಿದ್ದಾರೆ.
ನಿನ್ನೆ ಮೊನ್ನೆ ಬಂದೋರೆಲ್ಲ...ವಿವಾದ ಹುಟ್ಟಿಸಬಹುದಾ ಎನ್ನೋ ಅನುಮಾನ ಹುಟ್ಟಿಸಿದೆ.
ಅಷ್ಟಕ್ಕೂ ಈ ಚಿತ್ರಕ್ಯಾಕೆ ಇಷ್ಟು ಟೈಂ?
ಏನೇ ಸಿನಿಮಾ ಮಾಡಿದರೂ ಒಂದು ವರ್ಷ ಟೈಮ್ ತೆಗೆದುಕೊಳ್ಳುವ ಪ್ರೇಮ್, 'ಯಾವುದೇ ಕಾರಣಕ್ಕೂ ಕ್ವಾಲಿಟಿ ವಿಷಯದಲ್ಲಿ ರಾಜಿ ಮಾಡುಕೊಳ್ಳುವುದಿಲ್ಲ. ಈ ಸಿನಿಮಾದ ಕ್ಲೈಮಾಕ್ಸ್ ಮಾತ್ರ ಬಾಕಿ ಇದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಮುಗಿಲದೆ,' ಎನ್ನುತ್ತಾರೆ ಜೋಗಿ ಫೇಮ್‌ನ ಪ್ರೇಮ್.
ಮಾಸ್ ಸಾಂಗ್, ಸ್ಟಾರ್ ನಟರು ಹಾಗೂ ಬಾಲಿವುಡ್ ಬೆಡಗಿ ಸಿನಿಮಾಕ್ಕೆ ಚಿತ್ರರಂಗ ಆತುರದಿಂದ ಕಾಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.