ಆಸ್ಟ್ರೇಲಿಯಾದಲ್ಲಿ ಶಿವಣ್ಣ ಫ್ಯಾಮಿಲಿ; ಪತ್ನಿ, ಮಗಳ ಜೊತೆ ಜಾಲಿ ಜಾಲಿ!

Published : Nov 13, 2018, 01:38 PM IST
ಆಸ್ಟ್ರೇಲಿಯಾದಲ್ಲಿ ಶಿವಣ್ಣ ಫ್ಯಾಮಿಲಿ; ಪತ್ನಿ, ಮಗಳ ಜೊತೆ ಜಾಲಿ ಜಾಲಿ!

ಸಾರಾಂಶ

ಆಸ್ಟ್ರೇಲಿಯಾದಲ್ಲಿ ಶಿವಣ್ಣ ಫ್ಯಾಮಿಲಿ | ಪತ್ನಿ, ಮಗಳ ಜೊತೆ ಸಮಯ ಕಳೆದ ಶಿವಣ್ಣ 

ಬೆಂಗಳೂರು (ನ. 13): ಸೆಂಚುರಿ ಸ್ಟಾರ್​​, ಹ್ಯಾಟ್ರಿಕ್​ ಹೀರೋ, ಕರುನಾಡ ಚಕ್ರವರ್ತಿ ಡಾ.ಶಿವರಾಜ್​​ಕುಮಾರ್​​ಗೆ ಮೂಂಬಾ ಸ್ಟಾರ್ ಪಟ್ಟ ಸಿಕ್ಕಿದೆ. 

ಮೆಲ್ಬೋರ್ನ್​ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವಣ್ಣ ಅವರಿಗೆ ಮೂಂಬಾ ಸ್ಟಾರ್​  ಬಿರುದು ನೀಡಿ, ಅಲ್ಲಿನ ಕನ್ನಡಿಗರು ಸನ್ಮಾನ ಮಾಡಿದ್ದಾರೆ. ನವೆಂಬರ್​​ 10 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಹಬ್ಬದಲ್ಲಿ ಶಿವಣ್ಣ ಭಾಗಿಯಾಗಿ, ಅಲ್ಲಿ ಕನ್ನಡ ಭವನ ಉದ್ಘಾಟನೆ ಮಾಡಿದ್ದಾರೆ. 

ಮೂಂಬಾ ಫೆಸ್ಟಿವಲ್ ಎಂದು ಕರೆಯಲ್ಪಡುವ ಈ ಕಾರ್ಯಕ್ರಮ ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಸುಮಾರು ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವವನ್ನು 1955ರಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಪತ್ನಿ ಗೀತಾ ಶಿವರಾಜ್​ಕುಮಾರ್​, ಟಗರು ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಹಾಗೂ ಆಪ್ತರ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಶಿವಣ್ಣ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕುಟುಂಬ ಸಮೇತ ಆಸ್ಟ್ರೇಲಿಯಾ ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ ಶಿವಣ್ಣ. 

ಪತ್ನಿ, ಮಗಳ ಜೊತೆ ಶಿವಣ್ಣ 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!