ಕನ್ನಡದಾಚೆ ಶಿವಣ್ಣನ ಮತ್ತೊಂದು ಹೆಜ್ಜೆ: ಬಾಲಿವುಡ್‌ ಡೆಬ್ಯೂಗೆ ಸಜ್ಜಾದ ಹ್ಯಾಟ್ರಿಕ್‌ ಹೀರೋ!

Published : Aug 24, 2026, 05:24 PM IST
Shivarajkumar

ಸಾರಾಂಶ

ಶಿವರಾಜ್‌ಕುಮಾರ್‌ ಮತ್ತು ಆರ್. ಚಂದ್ರು ಕಾಂಬಿನೇಷನ್‌ನ ಈ ಬಹುಕೋಟಿ ಪ್ರಾಜೆಕ್ಟ್‌ನ ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಆಗಸ್ಟ್‌ 28ರಂದು ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಇದೀಗ ತಮ್ಮ ಸಿನಿ ಪಯಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶಿವಣ್ಣ, ಇದೀಗ ಹಿಂದಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಆರ್. ಚಂದ್ರು ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾದ ಮೂಲಕ ಶಿವರಾಜ್‌ಕುಮಾರ್‌ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

‘ಕಬ್ಜ’ ಸಿನಿಮಾ ನಿರ್ದೇಶನದ ಮೂಲಕ ಗಮನ ಸೆಳೆದಿರುವ ಆರ್. ಚಂದ್ರು, ಇದೀಗ ಶಿವಣ್ಣ ಅವರೊಂದಿಗೆ ಕೈಜೋಡಿಸಿದ್ದು, ದೊಡ್ಡ ಮಟ್ಟದ ಪ್ಯಾನ್‌ ಇಂಡಿಯಾ ಸಿನಿಮಾವೊಂದನ್ನು ರೂಪಿಸಲು ಸಜ್ಜಾಗಿದ್ದಾರೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್‌ ಮತ್ತು ಆರ್‌ಸಿ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

ಆಗಸ್ಟ್‌ 28ಕ್ಕೆ ಟೈಟಲ್‌, ಮೋಷನ್ ಪೋಸ್ಟರ್ ರಿಲೀಸ್!

ಶಿವರಾಜ್‌ಕುಮಾರ್‌ ಮತ್ತು ಆರ್. ಚಂದ್ರು ಕಾಂಬಿನೇಷನ್‌ನ ಈ ಬಹುಕೋಟಿ ಪ್ರಾಜೆಕ್ಟ್‌ನ ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಆಗಸ್ಟ್‌ 28ರಂದು ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ. ಚಿತ್ರವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿದ್ದು, ಬಳಿಕ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಇದು ಕೇವಲ ಕನ್ನಡ-ಹಿಂದಿ ಸಿನಿಮಾವಷ್ಟೇ ಅಲ್ಲದೆ, ದೊಡ್ಡ ಮಟ್ಟದ ಮಲ್ಟಿಲಿಂಗ್ವಲ್‌ ಪ್ರಾಜೆಕ್ಟ್ ಆಗಿ ರೂಪುಗೊಳ್ಳಲಿದೆ.

‘ಕಬ್ಜ’ ಬಳಿಕ ಆರ್. ಚಂದ್ರು ಬಿಗ್ ಪ್ಲ್ಯಾನ್

2023ರಲ್ಲಿ ಬಿಡುಗಡೆಯಾದ ‘ಕಬ್ಜ’ ಬಳಿಕ ಆರ್. ಚಂದ್ರು ಹಲವು ಕಥೆಗಳ ಮೇಲೆ ಕೆಲಸ ಮಾಡುತ್ತಿದ್ದರು. ತಮ್ಮ ಮುಂದಿನ ನಿರ್ದೇಶನದ ಸಿನಿಮಾವನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ರೂಪಿಸುವ ಉದ್ದೇಶ ಹೊಂದಿದ್ದ ಅವರು, ಇದೀಗ ಶಿವರಾಜ್‌ಕುಮಾರ್‌ ಅವರಂತಹ ಸ್ಟಾರ್‌ ನಟನೊಂದಿಗೆ ಕೈಜೋಡಿಸಿದ್ದಾರೆ. ವಿವಿಧ ಚಿತ್ರರಂಗಗಳ ಪ್ರತಿಭೆಗಳನ್ನು ಒಂದೇ ಸಿನಿಮಾದಲ್ಲಿ ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದ್ದು, ಬೇರೆ ಬೇರೆ ಇಂಡಸ್ಟ್ರಿಗಳ ಪ್ರಮುಖ ಕಲಾವಿದರನ್ನು ಚಿತ್ರಕ್ಕೆ ಕರೆತರುವ ಯೋಜನೆಯೂ ಇದೆ ಎನ್ನಲಾಗಿದೆ. ನಿರ್ಮಾಪಕ ಆನಂದ್ ಪಂಡಿತ್ ಅವರ ಬೆಂಬಲದೊಂದಿಗೆ ಈ ಪ್ರಾಜೆಕ್ಟ್ ಭರ್ಜರಿ ಮಟ್ಟದಲ್ಲಿ ಮೂಡಿಬರುವ ನಿರೀಕ್ಷೆ ಮೂಡಿಸಿದೆ.

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಹೆಚ್ಚಿದ ಕುತೂಹಲ

ಶಿವರಾಜ್‌ಕುಮಾರ್‌ ಈಗಾಗಲೇ ಕನ್ನಡದ ಗಡಿ ದಾಟಿ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದಲ್ಲೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ತೆಲುಗಿನ ‘ಗುಮ್ಮಡಿ ನರಸಯ್ಯ’, ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

ಇದಲ್ಲದೆ ಶ್ರೀನಿ ನಿರ್ದೇಶನದ ‘A For Anand’ ಹಾಗೂ ಹೇಮಂತ್ ಎಂ. ರಾವ್ ನಿರ್ದೇಶನದ ‘666 Operation Dream Theatre’ ಸಿನಿಮಾಗಳಲ್ಲೂ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಆರ್. ಚಂದ್ರು ಮತ್ತು ಆನಂದ್ ಪಂಡಿತ್ ಅವರ ಕಾಂಬಿನೇಷನ್‌ಗೆ ಶಿವಣ್ಣ ಸಾಥ್ ನೀಡುತ್ತಿರುವುದು ಕುತೂಹಲ ಹೆಚ್ಚಿಸಿದೆ. ಆಗಸ್ಟ್‌ 28ರಂದು ಮುಂಬೈನಲ್ಲಿ ನಡೆಯಲಿರುವ ಟೈಟಲ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಅಧಿಕೃತ ಝಲಕ್ ನೀಡಲಿದೆ. ಕನ್ನಡದ ಹ್ಯಾಟ್ರಿಕ್ ಹೀರೋ ಇದೀಗ ಬಾಲಿವುಡ್‌ನಲ್ಲೂ ತಮ್ಮ ಖದರ್ ತೋರಿಸಲು ಸಜ್ಜಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

55 ವರ್ಷಕ್ಕೆ ಆಟ ನಿಲ್ಲಿಸಿದ ಡಾ.ರಾಜ್ ಕುಮಾರ್ ಉದ್ಘಾಟಿಸಿದ್ದ ಊರ್ವಶಿ ಚಿತ್ರಮಂದಿರ! ಗಟ್ಟಿಮುಟ್ಟಾಗಿದ್ದರೂ ನೆಲಸಮ!
Operation Bangara: ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ನಟಿ ನಿಶ್ವಿಕಾ ನಾಯ್ಡು! ಏನಿದು Golden Girl ರಹಸ್ಯ