
ಸದ್ಯ ಕರ್ನಾಟಕದಲ್ಲಿ ಟ್ರೆಂಡಿಂಗ್‌ನಲ್ಲಿರೋ ಸುದ್ದಿಗಳಲ್ಲಿ ನಟ ವಿಷ್ಣುವರ್ಧನ್ (Vishnuvardhan) ಸಮಾಧಿ ತೆರವು ಮಾಡಿರುವ ಘಟನೆಯೂ ಒಂದು. ಇದೇ ತಿಂಗಳು 08ರಂದು (08 ಆಗಷ್ಟ 2025) ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ. ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಆ ಬಳಿಕ ನಟ ವಿಷ್ಣುವರ್ಧನ್ ಅಭಿಮಾನಿಗಳೂ ಸೇರಿದಂತೆ, ಹಲವು ನಟನಟಿಯರು ಈ ಬಗ್ಗೆ ನೋವು ವ್ಯಕ್ತಪಡಿಸಿ ಸಮಾಧಿ ತೆರವು ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಕಿಚ್ಚ ಸುದೀಪ್ ಸೇರಿದಂತೆ ಹಲವು ನಟನಟಿಯರು ಸಮಾಧಿ ನೆಲಸಮ ಮಾಡಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, 'ದೊಡ್ಮನೆ' ಕುಟುಂಬ ಎಂದೇ ಹೇಳಲಾಗುವ ಡಾ ರಾಜ್‌ಕುಮಾರ್ ಫ್ಯಾಮಿಲಯಿಂದ, ಎರಡನೇ ಮಗ, ರಾಘವೇಂದ್ರ ರಾಜ್‌ಕುಮಾರ್ ಕೂಡ ಈ ವಿಷ್ಣು ಸಮಾಧಿ ನೆಲಸಮ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಆದರೆ, ಶಿವಣ್ಣ ಈ ಬಗ್ಗೆ ಏನೂ ಮಾಡಿನಾಡಿಲ್ಲ ಅಂತ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಹಾಕುತ್ತಿದ್ದರು.
ನಿರೀಕ್ಷೆಯಂತೆ ನಟ ಶಿವರಾಜ್‌ಕುಮಾರ್ (Shivarajkumar) ಅವರು ಇದೀಗ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಈ ಬಗ್ಗೆ ಮಾತನ್ನಾಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ನಟ ಶಿವಣ್ಣ ಅವರು ನಟ ವಿಷ್ಣುವರ್ಧನ್ ಸಮಾಧಿ ತೆರವಿನ ಬಗ್ಗೆ ಮಾತನ್ನಾಡಿದ್ದು, ಅವರೇನು ಹೇಳಿದ್ದಾರೆ ನೋಡಿ..
'ವಿಷ್ಣು ಸರ್ ಬಗ್ಗೆ ಯಾರಿಗೆ ಅಭಿಮಾನ ಇಲ್ಲ ಹೇಳಿ.. ನೂರಕ್ಕೆ ನೂರರಷ್ಟು ಪ್ರೀತಿ-ಅಭಿಮಾನ ಎಲ್ಲರಿಗೂ ಇದೆ. ಪ್ರೀತಿ ಅನ್ನೋದು ಬೇರೆನೇ.. ಭಾರತಿ ಅಮ್ಮ ಇದಾರೆ, ಅವ್ರ ಅಳಿಯಂದಿರು, ಅವ್ರ ಇಬ್ಬರು ಹೆಣ್ಣುಮಕ್ಕಳು ಇದಾರೆ. ಸಪೋರ್ಟ್ ಮಾಡಿದ್ರೇನೇ ಪ್ರೀತಿ ಅಂತ ಅಲ್ಲ. ವಿಷ್ಣು ಸರ್ ಮೇಲೆ ಪ್ರೀತಿ ಯಾವತ್ತೂ ಇದೆ ನಂಗೆ. ಅಭಿಮಾನಿಗಳು ಏನೂ ಚಿಂತೆ ಮಾಡೋದು ಬೇಡ.. ಅದು ಆಗ್ಬೇಕಾದಾಗ ಖಂಡಿತ ಆಗಿಯೇ ಆಗುತ್ತೆ ಅದು.. ಅದೇನೂ ದೊಡ್ಡ ವಿಷ್ಯ ಅಲ್ಲ..
ಇದನ್ನ ಪದೇ ಪದೇ ಮಾತಾಡ್ತಾ ಹೋದ್ರೆ ಇದು ಬೇರೆ ಬೇರೆ ವಿಷ್ಯಕ್ಕೆ ಎಳೀತಾ ಹೋಗುತ್ತೆ ಇದು.. ಅವ್ರ ಫ್ಯಾಮಿಲಿ ಏನ್ ಡಿಸೈಡ್ ಮಾಡುತ್ತೋ ಅದಾಗುತ್ತೆ.. ಆ ಸ್ಥಾನ ಒಂದು ಜಾಗದಿಂದ ಇದಾಗೋದಿಲ್ಲ, ಹೃದಯದಿಂದ ತುಂಬಿಕೊಂಡು ಫೀಲ್ ಮಾಡೋದಿದ್ಯಲ್ಲ, ಅದು ದೊಡ್ಡದು ಅಂತ ಅಂಡ್ಕೊಂಡಿದೀನಿ ನಾನು.. ಮೊದಲು ಅವ್ರ ಫ್ಯಾಮಿಲಿ ಬರುತ್ತೆ, ಆಮೇಲೆ ಅಭಿಮಾನಿಗಳು ಬರ್ತಾರೆ. ಅವ್ರ ಫ್ಯಾಮಿಲಿ ಏನ್ ಹೇಳ್ತಾರೋ ಅದ್ರ ಮೇಲೆ ಡಿಪೆಂಡ್..'
ವಿಷ್ಣು ಸರ್ ಮೇಲೆ ನನ್ ಪ್ರೀತಿ ಯಾವತ್ತೂ ಇದೆ. ನಮ್ಮಿಬ್ಬರ ಒಡನಾಟದ ಬಗ್ಗೆ ಹೇಳೋಕೆ ಹೋದ್ರೆ ಟೈಂ ಸಾಕಾಗಲ್ಲ. 1976 ರಿಂದ, ನಾನು ನಟನೆ ಶುರು ಮಾಡೋದಕ್ಕಿಂತ ಮೊದಲೇ ಅವ್ರ ಕೈ ಹಿಡಿದುಕೊಂಡು ಓಡಾಡಿರೋನು ನಾನು. ಆದರೆ, ಈ ವಿಷಯದಲ್ಲಿ ಅವ್ರ ಫ್ಯಾಮಿಲಿ ನಿರ್ಧಾರವೇ ಅಂತಿಮ' ಅಂತ ಹೇಳುವ ಮೂಲಕ ತಮ್ಮ ಸ್ಪಷ್ಟ ನಿಲುವನ್ನು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.