ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಬರ್ತ್‌ಡೇ ಸಂಭ್ರಮದಲ್ಲಿ ಪಾಲ್ಗೊಂಡ 'ದೊಡ್ಮನೆ ದೊಡ್ಮಗ.!

Published : Sep 18, 2025, 06:25 PM IST
Dr Vishnuvardhan Shivarajkumar

ಸಾರಾಂಶ

ಶಿವಣ್ಣ ಹಾಗೂ ಗೀತಾ ದಂಪತಿ ಇಂದು ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ವೈರಲ್ ಆಗುತ್ತಿದೆ. ಶಿವಣ್ಣ-ಗೀತಾ ದಂಪತಿ ಇಂದು ನಟ ವಿಷ್ಣುವರ್ಧನ್ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ..

ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಹುಟ್ಟುಹಬ್ಬ; ಶಿವರಾಜ್‌ಕುಮಾರ್-ಗೀತಾ ದಂಪತಿ ಭಾಗಿ!

ಇಂದು, 18 ಸೆಪ್ಟೆಂಬರ್ ರಂದು ಕನ್ನಡದ ಮೇರ ನಟ. ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಹುಟ್ಟುಹಬ್ಬ (Dr Vishnuvardhan Birthday) ಕನ್ನಡದ ಅಸಂಖ್ಯಾತ ಸಿನಿಪ್ರೇಕ್ಷಕರು, ವಿಷ್ಣುವರ್ಧನ್ ಅಭಿಮಾನಿಗಳು ಹಾಗು ವಿಷ್ಣುವರ್ಧನ್ ಕುಟುಂಬಸ್ಥರು ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಡಾ ರಾಜ್‌ಕುಮಾರ್ ಹಿರಿಯ ಮಗ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಅವರು ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡು, ಡಾ ವಿಷ್ಣುವರ್ಧನ್ ಭಾವಚಿತ್ರಕ್ಕೆ ಹೂ ಹಾಕಿ ಗೌರವ ನಮನ ಸಲ್ಲಿಸಿದ್ದಾರೆ.

ಹೌದು, ಶಿವಣ್ಣ ಹಾಗೂ ಗೀತಾ ದಂಪತಿ ಇಂದು ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ವೈರಲ್ ಆಗುತ್ತಿದೆ. ಶಿವಣ್ಣ-ಗೀತಾ ದಂಪತಿ ಇಂದು ನಟ ವಿಷ್ಣುವರ್ಧನ್ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಹಲವರ ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ ಎನ್ನಬಹುದೇ?

ಹೌದು, ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಮನಸ್ತಾಪ, ವೈರತ್ವ ಇದೆ ಎಂದು ಅಂದು-ಇಂದು ಸುದ್ದಿ ಇರುವುದು ಹೊಸ ಸಂಗತಿಯೇನಲ್ಲ. ಆದರೆ ಅವರಿಬ್ಬರ ಕುಟುಂಬಗಳ ಮಧ್ಯೆ ಆವತ್ತೂ ವೈರತ್ವ ಇರಲಿಲ್ಲ, ಈಗಲೂ ಇಲ್ಲ ಎಂಬ ಸಂದೇಶ ಆಗಾಗ ಬಹಿರಂಗ ಆಗುತ್ತಲೇ ಇರುತ್ತದೆ. ಆದರೆ, ಆ ಸುದ್ದಿ ಮಾತ್ರ ಯಾವತ್ತೂ ತಣ್ಣಗಾಗೋದೇ ಇಲ್ಲ. ಎಲ್ಲಾ ಭಾಷೆಗಳ ಎಲ್ಲಾ ನಟರ ಅಭಿಮಾನಿಗಳ ಮಧ್ಯೆ ಸಣ್ಣದೋ ದೊಡ್ಡದೋ ಸ್ಟಾರ್ ವಾರ್ ಇದ್ದೇ ಇರುತ್ತೆ ಅನ್ನೋ ಮಾತೂ ಕೂಡ ಇದೆ. ಆದರೆ ಅದರಲ್ಲಿ ಸತ್ಯವೆಷ್ಟು ಅನ್ನೋದೇ ಸಂದೇಹಾಸ್ಪದ!

ಡಾ ರಾಜ್‌ಕುಮಾರ್- ಡಾ ವಿಷ್ಣುವರ್ಧನ್ ಅಭಿಮಾನಿಗಳ ಸ್ಟಾರ್ ವಾರ್!

ಸ್ಟಾರ್ ನಟರುಗಳ ಅಭಿಮಾನಿಗಳ ಮಧ್ಯೆ 'ವಾರ್' ಸರಿಯೋ ತಪ್ಪೋ ಅಂತ ಹೇಳೋದು ಹೇಗೆ? ಆದರೆ, ಒಂದು ಮಾತಂತೂ ಸತ್ಯ. 'ಒಬ್ಬ ಸ್ಟಾರ್‌ ನಟರನ್ನು ಇಷ್ಟಪಡುವವರು ಇನ್ನೊಬ್ಬರನ್ನು ಯಾಕೆ ದ್ವೇಷಿಸಬೇಕು? ಎಲ್ಲರ ಸಿನಿಮಾವನ್ನೂ ನೋಡಿ ಎಲ್ಲರ ಅಭಿಮಾನಿಯಾಗಿ 'ಕಲಾಭಿಮಾನ' ಮೆರೆಯಲು ಯಾಕೆ ಸಾಧ್ಯವಿಲ್ಲ?' ಎಲ್ಲರ ಅಭಿಮಾನಿಗಳು ಹೀಗೆ ಯಾಕೆ ಯೋಚಿಸಬಾರದು ಅಂತ ಎಲ್ಲೋ ಒಂದು ಕಾಮೆಂಟ್ ಓದಿದ್ದ ನೆನಪು! ಹಾಗೇ, ಈ ಸ್ಟಾರ್‌ ವಾರ್‌ಗಳು ನಿಂತು ಎಲ್ಲ ಕಲಾವಿದರ ಅಭಿಮಾನಿಗಳು ಸೃಷ್ಟಿಯಾದರೆ ಇಲ್ಲೆ ಸ್ವರ್ಗ ಎನ್ನಬಹುದಲ್ಲ!

ನಾಡಿನ ಅನೇಕ ಕಡೆಗಳಲ್ಲಿ ಸಂತೋಷ-ಸಂಭ್ರಮದಿಂದ ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಆಚರಣೆ!

ಒಟ್ಟಿನಲ್ಲಿ, 'ದೊಡ್ಮನೆ ದೊಡ್ಮಗ' ಇಂದು ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಲ್ಲಿ ಸಂತೋಷದಿಂದ ಭಾಗಿಯಾಗಿ ಸಖತ್ ಸುದ್ದಿಯಾಗಿದ್ದಾರೆ. ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ನಾಡಿನ ಅನೇಕ ಕಡೆಗಳಲ್ಲಿ ಸಂತೋಷ-ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗಿದೆ. ಅಭಿಮಾನಿಗಳ ಜೊತೆ ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಪತ್ನಿ ಭಾರತಿ, ಅಳಿಯ ಅನಿರುಧ್ ಹಾಗೂ ಕುಟುಂಬಸ್ಥರು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕರ್ನಾಟಕದ ಅನೇಕ ಕಡೆಗಳಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು 'ವಿಷ್ಣುವರ್ಧನ್ ಬರ್ತ್‌ಡೇ' ಸೆಲೆಬ್ರೇಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?