ಡಾಲಿ ಅಭಿನಯಕ್ಕೆ ಶಿವಣ್ಣ ಫುಲ್ ಫಿದಾ! ಧನಂಜಯ್’ಗೆ ಹ್ಯಾಟ್ಸಾಫ್ ಎಂದ ಹ್ಯಾಟ್ರಿಕ್ ಹೀರೋ

Published : Feb 27, 2018, 10:46 AM ISTUpdated : Apr 11, 2018, 12:41 PM IST
ಡಾಲಿ ಅಭಿನಯಕ್ಕೆ ಶಿವಣ್ಣ ಫುಲ್ ಫಿದಾ! ಧನಂಜಯ್’ಗೆ ಹ್ಯಾಟ್ಸಾಫ್ ಎಂದ ಹ್ಯಾಟ್ರಿಕ್ ಹೀರೋ

ಸಾರಾಂಶ

ನಿರ್ದೇಶಕ ದುನಿಯಾ ಸೂರಿ ತಮ್ಮ ಪ್ರತಿ ಸಿನಿಮಾದಲ್ಲೂ ಒಂದೊಂದು ವಿಭಿನ್ನ, ವಿಶಿಷ್ಟ ಪಾತ್ರಗಳನ್ನು ಗಾಂಧಿನಗರಕ್ಕೆ ತಂದು ಬಿಡುತ್ತಾರೆ. ಅವು ಬಹುಕಾಲ ಪ್ರೇಕ್ಷಕರನ್ನು ಕಾಡುತ್ತವೆ. ಹಾಗೆಯೇ ಉಳಿದು ಬೆಳೆಯುತ್ತವೆ. ಈಗ ‘ಟಗರು’ಮೂಲಕ ಅವರು ಪರಿಚಯಿಸಿದ ಅಂಥದ್ದೇ ಮತ್ತೊಂದು ವಿಶಿಷ್ಟ ಪಾತ್ರದ ಹೆಸರು ಡಾಲಿ.‘ಟಗರು’ ಚಿತ್ರ ನೋಡಿ ಎದ್ದು ಬಂದವರಿಗೆ ಶಿವರಾಜ್ ಕುಮಾರ್ ಅವರ ಪಾತ್ರ ಮತ್ತು ಅಭಿನಯ ನೆನಪಲ್ಲಿ ಉಳಿದಷ್ಟೆ, ಅಲ್ಲಿ ಮತ್ತೇ ಮತ್ತೆ ಕಾಡಿಸುವ, ನೆನಪಲ್ಲಿ ಉಳಿಯುವ ಮತ್ತೊಂದು ಪಾತ್ರವೇ ಡಾಲಿ. ಇದು ಪ್ರೇಕ್ಷಕರಿಗೆ ಮಾತ್ರವಲ್ಲ, ಸ್ವತಃ ಶಿವರಾಜ್ ಕುಮಾರ್ ಅವರೇ ಧನಂಜಯ್ ಅವರ ಡಾಲಿ ಪಾತ್ರಕ್ಕೆ ಫಿದಾ ಆಗಿದ್ದಾರೆಂದರೆ ನೀವು ನಂಬಲೇಬೇಕು.

ಬೆಂಗಳೂರು (ಫೆ. 27): ನಿರ್ದೇಶಕ ದುನಿಯಾ ಸೂರಿ ತಮ್ಮ ಪ್ರತಿ ಸಿನಿಮಾದಲ್ಲೂ ಒಂದೊಂದು ವಿಭಿನ್ನ, ವಿಶಿಷ್ಟ ಪಾತ್ರಗಳನ್ನು ಗಾಂಧಿನಗರಕ್ಕೆ ತಂದು ಬಿಡುತ್ತಾರೆ. ಅವು ಬಹುಕಾಲ ಪ್ರೇಕ್ಷಕರನ್ನು ಕಾಡುತ್ತವೆ. ಹಾಗೆಯೇ ಉಳಿದು
ಬೆಳೆಯುತ್ತವೆ. ಈಗ ‘ಟಗರು’ಮೂಲಕ ಅವರು ಪರಿಚಯಿಸಿದ ಅಂಥದ್ದೇ ಮತ್ತೊಂದು ವಿಶಿಷ್ಟ ಪಾತ್ರದ ಹೆಸರು ಡಾಲಿ.‘ಟಗರು’ ಚಿತ್ರ ನೋಡಿ ಎದ್ದು ಬಂದವರಿಗೆ ಶಿವರಾಜ್ ಕುಮಾರ್ ಅವರ ಪಾತ್ರ ಮತ್ತು ಅಭಿನಯ ನೆನಪಲ್ಲಿ ಉಳಿದಷ್ಟೆ, ಅಲ್ಲಿ ಮತ್ತೇ ಮತ್ತೆ ಕಾಡಿಸುವ, ನೆನಪಲ್ಲಿ ಉಳಿಯುವ ಮತ್ತೊಂದು ಪಾತ್ರವೇ ಡಾಲಿ. ಇದು ಪ್ರೇಕ್ಷಕರಿಗೆ ಮಾತ್ರವಲ್ಲ, ಸ್ವತಃ ಶಿವರಾಜ್ ಕುಮಾರ್ ಅವರೇ ಧನಂಜಯ್ ಅವರ ಡಾಲಿ ಪಾತ್ರಕ್ಕೆ ಫಿದಾ ಆಗಿದ್ದಾರೆಂದರೆ ನೀವು ನಂಬಲೇಬೇಕು.

‘ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಖುಷಿ ಆಗ್ತಿದೆ. ಮೊದಲು ಇದಕ್ಕೆ ಕಾರಣಕರ್ತರು ನಿರ್ದೇಶಕ ಸೂರಿ. ಅವರಿಗೆ ಮೊದಲು ಥ್ಯಾಂಕ್ಸ್. ಉಳಿದಂತೆ ಇದು ಚಿತ್ರತಂಡದ ಕ್ರೆಡಿಟ್. ಚಿತ್ರದಲ್ಲಿನ ಪ್ರತಿ ವಿಷಯಗಳ ಬಗ್ಗೆಯೂ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿವೆ. ಚಿತ್ರದಲ್ಲಿನ ಸಣ್ಣ ಸಣ್ಣ ವಿಷಯಗಳು, ಪಾತ್ರಗಳ ಬಗ್ಗೆಯೂ ಜನ ಮಾತನಾಡುತ್ತಿದ್ದಾರೆ. ಕೆಲವರಿಗೆ ಕತೆ ಹಾಗೂ ಸೂರಿಯವರ ನಿರೂಪಣೆ ಮೆಚ್ಚಿಗೆ ಆಗಿದೆ. ಮತ್ತೆ ಕೆಲವರಿಗೆ ಚಿತ್ರದಲ್ಲಿನ ಅಷ್ಟು ಪಾತ್ರಗಳು ಹಿಡಿಸಿವೆ. ಭಾವನಾ, ಮಾನ್ವಿತಾ, ವಶಿಷ್ಠ ಸಿಂಹ, ದೇವರಾಜ್, ಚರಣ್ ರಾಜ್ ಅವರ ಸಂಗೀತ ಸೇರಿದಂತೆ ಇಲ್ಲಿ ಎಲ್ಲವೂ ಹೈಲೆಟ್. ಆದರೂ ನನಗೆ ತುಂಬಾನೆ ಮೈಂಡ್ ಡಿಸ್ಟರ್ಬ್  ಮಾಡಿದ್ದು ಧನಂಜಯ್ ಅವರ ಡಾಲಿ ಪಾತ್ರ. ಅವರದು ಇಲ್ಲಿ ಮೈಂಡ್ಬ್ಲೋಯಿಂಗ್ ಪರ್‌ಫಾರ್ಮೆನ್ಸ್. ಧನಂಜಯ್ ತುಂಬಾನೆ ಒಳ್ಳೆಯ ಮನುಷ್ಯ. ನನಗೆ ಬೆಸ್ಟ್ ಫ್ರೆಂಡ್ ಕೂಡ . ಆದರೂ, ಆ ಪಾತ್ರದಲ್ಲಿ ಅವರನ್ನು ನೋಡಿದಾಗೆಲ್ಲ ವಾಟ್ ಏ ಬ್ಯಾಡ್ ಮ್ಯಾನ್ ಎಂದೆನಿಸಿಬಿಡುತ್ತೆ. ಆ ಪಾತ್ರವನ್ನು ನುಂಗಿ ಹಾಕಿದ್ದಾರೆ. ನಿಜಕ್ಕೂ ಅವರ ಅಭಿನಯಕ್ಕೆ  ಹ್ಯಾಟ್ಸಾಫ್ ಹೇಳ್ತೀನಿ. ಧನಂಜಯ್ ಪಾಲಿಗೆ ಒಳ್ಳೆಯ ದಿನ ಶುರುವಾದವು ಅಂತ ಎನಿಸುತ್ತೆ’ ಎನ್ನುತ್ತಾ ನಟ ಧನಂಜಯ್ ಅಭಿನಯವನ್ನು ಮುಕ್ತ  ಕಂಠದಿಂದ ಬಣ್ಣಿಸಿದರು ನಟ ಶಿವರಾಜ್ ಕುಮಾರ್.
 

ಅಷ್ಟೇ ಅಲ್ಲ, ಈ ಚಿತ್ರದ ನಿರೂಪಣೆ ಶೈಲಿಯೂ ಶಿವರಾಜ್ ಕುಮಾರ್ ಅವರಲ್ಲಿ ಅಚ್ಚರಿ ಹುಟ್ಟಿಸಿದೆಯಂತೆ. ಹೀಗೂ ಮಾಡಬಹುದಾ ಅಂತ ಅವರಿಗೂ ಎನಿಸಿದೆಯಂತೆ. ‘ನಾನು ಸ್ಟೋರಿ ಕೇಳುವಾಗ ಜಸ್ಟ್ ಒನ್ ಲೈನ್ ಮಾತ್ರ ಕೇಳಿದ್ದು. ಬೇರೆ ತರಹದ
ರೀತಿಯಲ್ಲಿಯೇ ಈ ಸಿನಿಮಾ ಮಾಡೋಣ ಸರ್ ಅಂತಲೇ ಸೂರಿ ಅವರು ಹೇಳಿದ್ರು. ಅದೆಲ್ಲ ಅವರ ಜಾದೂ ಅಂತ ಈಗ ಎನಿಸುತ್ತಿದೆ’ ಧನಂಜಯ್ ಅಭಿನಯಕ್ಕೆ ಹ್ಯಾಟ್ಸಾಪ್ ಎಂದ ಹ್ಯಾಟ್ರಿಕ್ ಹೀರೋ  ಅಂತಾರೆ ಶಿವರಾಜ್ ಕುಮಾರ್. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್
ಫ್ಯಾಷನ್ ಕ್ವೀನ್ ದೀಪಿಕಾ ಪಡುಕೋಣೆಯ 5 ದುಬಾರಿ ಸೀರೆಗಳು.. ಬೆಲೆ ಕೇಳಿದ್ರೆ ಬಾಯ್ಮೇಲೆ ಬೆರಳಿಡ್ತೀರಾ!