ಪದ್ಮಶ್ರೀ ಶ್ರೀದೇವಿ ಬಗ್ಗೆ ಗೊತ್ತಿರದ ವಿಷಯಗಳು...

Published : Feb 25, 2018, 12:55 PM ISTUpdated : Apr 11, 2018, 01:11 PM IST
ಪದ್ಮಶ್ರೀ ಶ್ರೀದೇವಿ ಬಗ್ಗೆ ಗೊತ್ತಿರದ ವಿಷಯಗಳು...

ಸಾರಾಂಶ

ನಾಲ್ಕು ವರ್ಷಗಳಿರುವಾಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 54 ವರ್ಷಗಳವರೆಗೂ ಸೂಪರ್ ಸ್ಟಾರ್ ಆಗಿದ್ದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಮನೋಜ್ಞ ಅಭಿನಯನದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ನಟಿಯ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.ಈ ಬಾಲಿವುಡ್ ಚಾಂದನಿ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು ಇವು.

ನಾಲ್ಕು ವರ್ಷಗಳಿರುವಾಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 54 ವರ್ಷಗಳವರೆಗೂ ಸೂಪರ್ ಸ್ಟಾರ್ ಆಗಿದ್ದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಮನೋಜ್ಞ ಅಭಿನಯನದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ನಟಿಯ ಸಾವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಈ ಬಾಲಿವುಡ್ ಚಾಂದನಿ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು ಇವು.

- ನಾಲ್ಕು ವರ್ಷಗಳಿರುವಾಗ 1969ರಲ್ಲಿ ಎಂ.ಎ.ತಿರುಮುಘಮ್‌ನ ತುವನೈವನ್ ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟನೆ.

- ಶ್ರೀ ಅಮ್ಮ ಯಂಗರ್ ಅಯ್ಯಪ್ಪನ್ ಈ ನಟಿಯ ಮೂಲ ಹೆಸರಾಗಿದ್ದು, ಬೆಳ್ಳಿ ತೆರೆಗೆ ಶ್ರೀದೇವಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು.

- ಶ್ರೀದೇವಿ ಮತ್ತು ಅನಿಲ್‌ ಕಪೂರ್ ಜೋಡಿ ಹಿಂದಿ ಚಿತ್ರರಂಗದಲ್ಲಿ ಬಹಳ ಮೋಡಿ ಮಾಡಿತ್ತು. 1980 ಮತ್ತು 1990ರಲ್ಲಿ ಈ ಇಬ್ಬರು ಅಭಿನಯಿಸಿದ ಮಿ.ಇಂಡಿಯಾ, ಲಮ್ಹೇ, ಲಾಡ್ಲಾ, ಜುದಾಯಿ ಸೇರಿ 13 ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದವು.

- ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರೊಂದಿಗೆ ಅತೀ ಹೆಚ್ಚು ಚಿತ್ರಗಳಲ್ಲಿ ಶ್ರೀದೇವಿ ನಟಿಸಿದ್ದಾರೆ. ಸದ್ಮಾ ಸೇರಿ ಅನೇಕ ಚಿತ್ರಗಳಲ್ಲಿ ಶ್ರೀದೇವಿ, ಕಮಲ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.

- ಚಿತ್ರಕಥೆ ಸರಿ ಹೊಂದುತ್ತಿಲ್ಲವೆಂದು ಜುರಾಸ್ಸಿಕ್ ಪಾರ್ಕ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ ಹಾಲಿವುಡ್ ಚಿತ್ರವನ್ನು ಒಲ್ಲೆ ಎಂದಿದ್ದರು ಶ್ರೀದೇವಿ.

- ಪ್ರಖ್ಯಾತ ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರವನ್ನೂ ಶ್ರೀದೇವಿ ವಿವಿಧ ಕಾರಣಗಳಿಂದ ನಿರಾಕರಿಸಿದ್ದರು.

- ಜುದಾಯಿ ನಂತರ ಶ್ರೀದೇವಿ ಚಿತ್ರರಂಗದಿಂದ ದೂರವೇ ಉಳಿದಿದ್ದರು. 2002ರಲ್ಲಿ ಶಕ್ತಿ ಚಿತ್ರದ ಮೂಲಕ ಮತ್ತೆ ಬಾಲಿವುಡ್‌ಗೆ ಮರು ಪ್ರವೇಶ ಮಾಡುವವರಿದ್ದರು. ಆದರೆ, ತಮ್ಮ ಎರಡನೇ ಮಗುವಿಗೆ ತಾಯಿಯಾಗುವ ಸ್ಥಿತಿಯಲ್ಲಿದ್ದರಿಂದ ಈ ಪಾತ್ರಕ್ಕೆ ಕರೀಷ್ಮಾ ಕಪೂರ್ ಅವರನ್ನು ಆರಿಸಲಾಯಿತು.

- ರಜನೀಕಾಂತ್ ಜತೆ ನಾಯಕ ನಟಿಯಾಗಿ ಮೂಂದ್ರು ಮುಡಿಚು ಚಿತ್ರದಲ್ಲಿ ಅಭಿನಯಿಸಿದಾಗ ಶ್ರೀದೇವಿಗೆ ಕೇವಲ 13 ವರ್ಷಗಳಾಗಿತ್ತು.

- 1992ರಲ್ಲಿ ಮಾಧುರಿ ದೀಕ್ಷಿತ್‌ಗೆ ಹೆಚ್ಚು ಜನಪ್ರಿಯತೆ ತಂದುಕೊಟಿದ್ದ ಬೇಟಾ ಚಿತ್ರಕ್ಕೆ ಮೊದಲು ಶ್ರೀದೇವಿಯನ್ನೇ ಆಯ್ಕೆ ಮಾಡಲಾಗಿತ್ತು. ಆಗಲೇ ಅನಿಲ್ ಕಪೂರ್‌ನೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರಿಂದ, ಈ ಪಾತ್ರವನ್ನು ಶ್ರೀದೇವಿ ನಿರಾಕರಿಸಿದ್ದರು. ಚೂಹಿ ಚಾವ್ಲಾ ನಟನೆಯ ಢರ್ ಚಿತ್ರವನ್ನು ಶ್ರೀದೇವಿ ನಿರಾಕರಿಸಿದ್ದರು.

- 2013ರಲ್ಲಿ ಈ ನಟಿಗೆ ದೇಶದ ನಾಲ್ಕನೇ ಅತ್ಯುನ್ನತ ಪದವಿಯಾದ ಪದ್ಮಶ್ರೀ ನೀಡಿ, ಕೇಂದ್ರ ಸರಕಾರವು ಗೌರವಿಸಿತ್ತು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!