ಕೊನೆಗೂ ಸಿಕ್ಕೇಬಿಟ್ರು ಗಣೇಶ್ ಗೆ ನಟಿ

Published : Nov 12, 2018, 09:39 AM IST
ಕೊನೆಗೂ ಸಿಕ್ಕೇಬಿಟ್ರು ಗಣೇಶ್ ಗೆ ನಟಿ

ಸಾರಾಂಶ

ಗಣೇಶ್ ಅಭಿನಯ ಹಾಗೂ ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿನ ನಾಯಕಿಯರ ಸಂಖ್ಯೆ ಮೂರಕ್ಕೇರಿ.    

ನಟಿ ಶಾನ್ವಿ ಶ್ರೀವಾಸ್ತವ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಮಲಯಾಳಂ ನಟಿಯರಾದ ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್ ಈಗಾಗಲೇ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ.

ಚಿತ್ರದ ಮುಹೂರ್ತದ ಹೊತ್ತಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿ ಆಗಿ ಅಭಿನಯಿಸುತ್ತಿರುವುದನ್ನು ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿದೆ. 

ಶಂಕರ್‌ನಾಗ್ ಹುಟ್ಟುಹಬ್ಬದ ದಿನವೇ ನವೆಂಬರ್ 9ರಂದು ‘ಗೀತಾ’ ಚಿತ್ರ ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪಂಚಮುಖಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಆರಂಭ ಫಲಕ ತೋರಿದರು. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ಮಾಡಿದರು. ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ: ಡಿಜಿಪಿಗೆ ಪತ್ನಿ ಹೀಗೊಂದು ವಿಶೇಷ ಮನವಿ
Malashri Secret: 'ನಂಜುಂಡಿ ಕಲ್ಯಾಣ'ಕ್ಕಿಂತ ಮೊದಲು ಮಾಲಾಶ್ರೀ 35 ಸಿನಿಮಾಗಳಲ್ಲಿ ನಟಿಸಿದ್ರು; ಕನಸಿನ ರಾಣಿಯ ಹಲವು ಸೀಕ್ರೆಟ್ ಇಲ್ಲಿವೆ ನೋಡಿ!