ಪರೋಕ್ಷವಾಗಿ ಡಬ್ಬಿಂಗ್ ಪರ ನಿಂತ ಯಶ್

By Web DeskFirst Published Nov 12, 2018, 9:10 AM IST
Highlights

ಕೆಜಿಎಫ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಯಶ್ ಹೇಳಿರುವ ಮಾತುಗಳು ಇವು.

  • ವೈಯಕ್ತಿಕವಾಗಿ ಹೇಳುವುದಾದರೆ ಕಾಲ ಕಾಲಕ್ಕೆ ಸನ್ನಿವೇಶಗಳು ಬದಲಾಗುತ್ತಿವೆ. ಸದ್ಯಕ್ಕೆ ಸಿನಿಮಾಗಳಿಗೆ ಪ್ರಾದೇಶಿಕ ಗಡಿ ಇಲ್ಲ. ಗ್ಲೋಬಲ್ ಎನ್ನುವ ಹಾಗೆ ಆಗುತ್ತಿದೆ. ಭಾರತೀಯ ಚಿತ್ರಗಳು ಚೀನಾ ದೇಶದಲ್ಲೂ ಬಿಡುಗಡೆಯಾಗುತ್ತಿವೆ. ಹಾಗೆಯೇ ಕನ್ನಡದ ಸಿನಿಮಾಗಳು ಇನ್ನಾವುದೋ ದೇಶದಲ್ಲಿ ತೆರೆ ಕಾಣುತ್ತಿವೆ. ಪರಿಸ್ಥಿತಿ ಹೀಗಿದ್ದಾಗ, ಪ್ರಪಂಚದ ಜೊತೆ ನಾವು ಓಡಬೇಕು ಎನಿಸುತ್ತದೆ.
  • ಕನ್ನಡ ಪರ-ವಿರೋಧದ ನಡುವೆ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತದೆ ಎನ್ನುವುದಾದರೆ ಖಂಡಿತಾ ಡಬ್ಬಿಂಗ್ ಮಾಡಲಿ ಒಳ್ಳೆಯದೇ. ಅದೇ ಸಮಯದಲ್ಲಿ ಇಲ್ಲಿರುವಂತಹ ಕೆಲವರಿಗೆ ಅದರಿಂದ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದಾದರೆ, ಅವರ ಹೊಟ್ಟೆಪಾಡನ್ನು ನೋಡಬೇಕಾಗುತ್ತದೆ. ಜತೆಗೆ ಭಾಷೆಗೆ ಯಾವುದೇ ರೀತಿ ಧಕ್ಕೆ ಆಗದೇ ನೋಡಿಕೊಳ್ಳುವುದಾದರೆ ನಮ್ಮ ಬೆಂಬಲ ಇರುತ್ತದೆ

ಕನ್ನಡ ಚಿತ್ರವೊಂದು ಇದೇ ಮೊದಲು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ಬಿಡುಗಡೆ ಆಗುತ್ತಿದೆ.ತಮಿಳಿನಲ್ಲಿ ವಿಶಾಲ್, ಹಿಂದಿಯಲ್ಲಿ ಫರಾನ್ ಆಖ್ತರ್, ತೆಲುಗಿನಲ್ಲಿ ರಾಮ್‌ಚರಣ್ ತೇಜಾ ಅವರಂತಹ ಸ್ಟಾರ್ ನಟರೇ ಮುಂದೆ ನಿಂತು ಅವರ ಭಾಷೆಗಳಲ್ಲಿ ಕೆಜಿಎಫ್ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಮುಂದೊಂದು ದಿನ ಅವರ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಂದರೆ ಅಥವಾ ನೀವು ಆ ಸಿನಿಮಾಗಳಿಗೆ ಧ್ವನಿ ನೀಡಿದರೆ ಆ ಸಿನಿಮಾಗಳನ್ನು ನೀವಿಲ್ಲಿ ಪ್ರಮೋಟ್ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಯಶ್ ನೀಡಿದ ಉತ್ತರ ಇದು. ಈ ಮೂಲಕ ಯಶ್ ಪರೋಕ್ಷವಾಗಿ ಡಬ್ಬಿಂಗ್ ಕಡೆವಾಲಿದ್ದಾರೆ ಎನ್ನಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಈಗಲೂ ಡಬ್ಬಿಂಗ್ ಬಹುಚರ್ಚಿತ ವಿಷಯ. ಹೀಗಾಗಿಯೇ ಡಬ್ಬಿಂಗ್ ವಿಷಯ ಅನೇಕರು ವಿರೋಧಿಸುತ್ತಾರೆ. ಯಶ್ ಕೂಡ ಈ ಹಿಂದೆ ಡಬ್ಬಿಂಗ್ ವಿರೋಧಿಸಿದ್ದರು. ಆದರೆ ಬದಲಾದ ಸಂದರ್ಭದಲ್ಲಿ ಅವರು ಪರೋಕ್ಷವಾಗಿ ಡಬ್ಬಿಂಗ್‌ಗೆ ಜೈ ಎಂದಿದ್ದಾರೆ. 

 

click me!