ಶಂಕರ್'ನಾಗ್' ಒಂದು ಮುತ್ತಿನ ಕತೆ ಜೊತೆ ಅರುಂಧತಿ ಮಾತುಗಳು

Published : Nov 09, 2017, 05:59 PM ISTUpdated : Apr 11, 2018, 12:36 PM IST
ಶಂಕರ್'ನಾಗ್' ಒಂದು ಮುತ್ತಿನ ಕತೆ ಜೊತೆ ಅರುಂಧತಿ ಮಾತುಗಳು

ಸಾರಾಂಶ

ಆಟೋರಾಜ’ ಚಿತ್ರ ಮಾಡಿಯೇ ಲಕ್ಷಾಂತರ ಆಟೋ ಚಾಲಕರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದವರು ನಮ್ಮ ಶಂಕರ್. ‘ಮೂಗನ ಸೇಡು’, ‘ಆರದ ಗಾಯ’, ‘ಸೀತಾ ರಾಮು’ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ

ಯಾವಾಗಲೂ ಜೊತೆಯಲ್ಲೇ ಇರೋಣ ಅಭಿಮಾನಿಗಳೇ ನನ್ನ ಸಿನಿಮಾ ಬಿಡುಗಡೆಯಾದ ನಂತರವೇ ನನಗೊಂದು ಪತ್ರ ಬರೆಯಿರಿ. ನನ್ನ ತಪ್ಪುಗಳನ್ನು ತಿಳಿಸಿ.ನಿಮಗಾಗಿ, ನಿಮ್ಮ ಅಭಿಮಾನ, ಸಲಹೆ ಸೂಚನೆಗಳಿಗಾಗಿ ನನ್ನ ಎದೆಯ ಬಾಗಿಲು ಸದಾ ತೆರೆದೇ ಇರುತ್ತದೆ’ ಹೀಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದವರು ನಾಡಿನ ಕೋಟ್ಯಂತರ ಅಭಿಮಾನಿಗಳ ಹೃದಯ ದೈವ, ದೈತ್ಯ ಪ್ರತಿಭೆ ಶಂಕರ್ ನಾಗ್.

ಅವರಿದ್ದಿದ್ದರೆ ಇಂದಿಗೆ ಅರವತ್ಮೂರು ವರ್ಷ. ಅವರು ದೂರಾಗಿ ಇಪ್ಪತ್ತೇಳು ವರ್ಷಗಳಾಯಿತು. ಆದರೂ ಕೂಡ ನಾಡಿನ, ನಾಡಿನಾಚೆಯ ಅಭಿಮಾನಿಗಳ ಎದೆಯಾಳದಲ್ಲಿ ಅವರು ಅಜರಾಮರ. ಹಾಗೆ ವ್ಯಕ್ತಿಯೊಬ್ಬ ಜೀವಂತವಾಗಿ ಶತಶತಮಾನಗಳ ಆಚೆಗೂ ಉಳಿಯುವುದು ಸೋಜಿಗ. ಅಂತಹ ಸೋಜಿಗವನ್ನು ಕಾಣಿಸುವ ಕೆಲವೇ ಕೆಲವರಲ್ಲಿ ಶಂಕರ್‌ನಾಗ್ ಪ್ರಮುಖರು. ಅವರ ಒಂದೊಂದೂ ಚಿತ್ರಗಳೂ ಒಂದೊಂದು ಮೈಲಿಗಲ್ಲು. ಒಂದೊಂದರಲ್ಲೂ ತನ್ನದೇ ಆದ ವಿಶೇಷಗಳಿವೆ. ‘ಆಟೋರಾಜ’ ಚಿತ್ರ ಮಾಡಿಯೇ ಲಕ್ಷಾಂತರ ಆಟೋ ಚಾಲಕರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದವರು ನಮ್ಮ ಶಂಕರ್. ‘ಮೂಗನ ಸೇಡು’, ‘ಆರದ ಗಾಯ’, ‘ಸೀತಾ ರಾಮು’ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.ಸಿಕ್ಕ ಅಲ್ಪಾವಧಿ ಸಮಯದಲ್ಲಿಯೇ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಹಲವಾರು ಚಿತ್ರಳನ್ನು ನಿರ್ದೇಶಿಸಿದ್ದ ಶಂಕರ್ ಕನ್ನಡ ಚಿತ್ರರಂಗದ ಮಿನುಗುತಾರೆ.

ನಾಗರಕಟ್ಟೆ ಶಂಕರ, ಶಂಕರ್ ನಾಗ್ ಆಗಿದ್ದು ಹೀಗೆ

 ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ’ ಎಂದು ಹಾಡಿದ ಶಂಕರ್ ಹಿಂದೆ ನಾಗರಕಟ್ಟೆ ಶಂಕರ್ ಆಗಿದ್ದವರು. ನಾಟಕ ರಂಗದ ಆಸಕ್ತಿ ಹೊಂದಿದ್ದರೂ ಬ್ಯಾಂಕ್‌ನಲ್ಲಿ ಓಸಿಯಾಗಿ ಕೆಲಸ ಮಾಡಿದ್ದರು. ಓಸಿ ಎಂದರೆ ಏನೆಂದುಕೊಂಡಿರಾ? ಆರ್ಡಿನರಿ ಕ್ಲರ್ಕ್. ಒಮ್ಮೆ ಮುಂಬೈನಲ್ಲಿ ನಾಟಕದ ಅಭಿನಯದಲ್ಲಿ ತೊಡಗಿದ್ದ ನಾಗರಕಟ್ಟೆ ಶಂಕರ್ ಒಂದೊಮ್ಮೆ ಗಿರೀಶ್ ಕಾರ್ನಾಡರ ಕಣ್ಣಿಗೆ ಬೀಳುತ್ತಾರೆ. ಅವರ ಅಭಿನಯವನ್ನು ಮೆಚ್ಚಿದ ಕಾರ್ನಾಡರೂ ಕೂಡಲೇ ಕೇಳಿಯೇ ಬಿಟ್ಟರು ‘ಏನೋ ಹುಡುಗ ಸಿನಿಮಾದಲ್ಲಿ ಪಾರ್ಟ್ ಮಾಡುತ್ತೀಯಾ’ ಎಂದು. ಕೇಳಿದ್ದೇ

ತಡ ಒಂದು ಕ್ಷಣ ಯೋಚಿಸಿ ಸಿನಿಮಾ ತಾನೇ ಮಾಡಿದರಾಯಿತು ಎಂದು ಕಾರ್ನಾಡರ ಹಿಂದೆ ಬಂದ ಯುವಕನಿಗೆ ಹೀಗೆಲ್ಲಾ ಆಗುತ್ತೇನೆ ಎನ್ನುವ ಕನಸು ಅಂದಿಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಠಿಣ ಪರಿಶ್ರಮದೊಂದಿಗೆ ‘ಮಿಂಚಿನ ಓಟ’ದಲ್ಲಿ ಸಾಗುತ್ತೇನೆ ಎನ್ನುವ ಆತ್ಮವಿಶ್ವಾಸವಿತ್ತು. ಅದೇ ಆತ್ಮವಿಶ್ವಾಸ ನಾಗರಕಟ್ಟೆ ಶಂಕರನನ್ನು ಶಂಕರ್ ನಾಗ್ ಮಾಡಿಬಿಟ್ಟಿತು.

ಧೈರ್ಯ ತುಂಬಿದ್ದ ಮಂಜುಳಾ

ಚಿತ್ರವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಇದು ನನ್ನಿಂದ ಆಗದು ಎಂದು ಮೂಲೆಯಲ್ಲಿ ಕೂತಿದ್ದ ಶಂಕರ್ ನಾಗ್‌ಗೆ ಧೈರ್ಯ ಕೊಟ್ಟಿದ್ದೆ ಮಂಜುಳಾ.ನಾನಿದ್ದೇನೆ. ನನ್ನೊಂದಿಗೆ ಹೆಜ್ಜೆ ಹಾಕಿ ಸಾಕು. ಡ್ಯಾನ್ಸ್ ಸುಮ್ಮನೆ ಕೂತರೆ ಬರುವಂತದ್ದಲ್ಲ. ಸುಮ್ಮನೆ ಕುಣಿದರೆ ಅದಾಗಿಯೇ ಒಲಿಯುತ್ತದೆ ಎಂದು ಹೇಳಿದ್ದೇ ಮುಂದೆ ಶಂಕರ್ ಒಬ್ಬ ಒಳ್ಳೆಯ ಡ್ಯಾನ್ಸರ್ ಆಗಲು ಕಾರಣವಾಗಿಬಿಟ್ಟಿತು.

ಸಮುದ್ರದ ಆಳಕ್ಕೆ ಹೋಗಿ ಮುತ್ತು ತಂದ ಶಂಕರ್

ಕನ್ನಡ ಚಿತ್ರ ರಂಗದ ಏಳಿಗೆಗಾಗಿ ಸಾವಿರ ಕನಸು ಹೊತ್ತಿದ್ದ ಶಂಕರ್ ‘ಒಂದು ಮುತ್ತಿನ ಕತೆ’ ಯಂಥಹ ಸಿನಿಮಾ ಮಾಡಿ ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದವರು. ದೇಶ ವಿದೇಶ ಸುತ್ತಿ, ಪರಿಣಿತರನ್ನು ಕರೆತಂದು ಹೊಸ ತಂತ್ರಜ್ಞಾನಗಳನ್ನು ಬಳಸಿ ‘ಒಂದು ಮುತ್ತಿನ ಕತೆ’ ಚಿತ್ರ ಮಾಡಿಯೇ ಬಿಟ್ಟರು. ‘ಸಂಕೇತ್ ಸ್ಟುಡಿಯೋ’ ಮಾಡಿ ನೆಲದ ಚಿತ್ರಗಳಿಗೆ ಆಧಾರ ಒದಗಿಸಿಕೊಟ್ಟರು.

ಇಂದಿಗೂ ಶಂಕರ

ದೂರಗಾಮಿ ಯೋಜನೆಗಳ ಆಗರವಾಗಿದ್ದ ಶಂಕರ್ ಕೋಟ್ಯಾಂತರ ಅಭಿಮಾನಿಗಳನ್ನೇ ಇಟ್ಟುಕೊಂಡು ಕ್ರಾಂತಿಗೀತೆಯೊಂದನ್ನು ಬರೆದೇ ಬಿಡುತ್ತಿದ್ದರು. ಪ್ರತಿ ಐವತ್ತು ಕಿ. ‘ಜೀವನವೆನ್ನುವುದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಎನ್ನಿಸುತ್ತದೆ. ಕೆಲವು ಸಲ ಅಷ್ಟೇ ಸಂಕುಚಿವಾಗಿಬಿಡುತ್ತದೆ. ಒಮ್ಮೆ ತಂಪಾಗಿ, ಉದ್ದವಾಗಿ ಕಾಣಿಸುವ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರಳಿಯಾಗಿ ಗತ ಕಾಲಕ್ಕೆ ಹೋಗಿ ಕೂತುಬಿಡುತ್ತದೆ. ಹೊಸ ರೂಪ ಹೊಸ ಚೈತನ್ಯ ತಂದುಕೊಟ್ಟ ಅನುಭವಗಳು ಕೇಲವ ಸುರುಳಿಯಾಗಿಬಿಟ್ಟಿತ್ತಲ್ಲ ಎನ್ನುವ ದುಃಖವೂ ಆಗುತ್ತದೆ’ ಶಂಕರ್ ನಾಗ್;

ಒಂದು ಮುತ್ತಿನ ಕತೆ ಚಿತ್ರಕ್ಕೆ  ಒಂದು ೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇರಬೇಕು. ನಂದಿ ಬೆಟ್ಟಕ್ಕೆ ರೋಪ್ ವೇ ಬೇಕು, ಬೆಂಗಳೂರಿಗೆ ಮೆಟ್ರೋ ಆಗಬೇಕು ಎಂದು ಯೋಜನೆ

ರೂಪಿಸಿದ್ದ ಶಂಕರ್ ತಮ್ಮದೇ ಜೇಬಿನ ಹಣ ಹೂಡಿ ಶಾಲೆಗಳಿಗೆ ಸಹಾಯ ಮಾಡುತ್ತಿದ್ದದ್ದು ಇನ್ನಷ್ಟು ವಿಸ್ತಾರವಾಗುತ್ತಿತ್ತು. ಸದಾ ಶುದ್ಧ ಹಸ್ತರಾಗಿದ್ದ ಅವರ ಬಗ್ಗೆ ಇನ್ನೊಂದು ವಿಚಾರವನ್ನು ತಿಳಿಸಿಯೇ ಮಾತು ಮುಗಿಸೋಣ. ಅದೇನೆಂದರೆ ಒಮ್ಮೆ ರಾಮಕೃಷ್ಣ ಹೆಗ್ಡೆ ಅವರು ಚುನಾವಣಾ ವೆಚ್ಚಕ್ಕೆಂದು ಕೊಟ್ಟಿದ್ದ ಹಣವನ್ನು ಪೈಸೆ ಪೈಸೆ ಲೆಕ್ಕ ಇಟ್ಟು, ಚುನಾವಣೆ ನಂತರ ಉಳಿದದ್ದನ್ನು ವಾಪಸ್ ಕೊಟ್ಟಿದ್ದರು. ಶಂಕರ್ ಅವರ ಈ ಪ್ರಾಮಾಣಿಕತೆ ಕಂಡು ಸ್ವತಃ ರಾಮಕೃಷ್ಣ ಹೆಗ್ಡೆ ಅವರೇ ಮೆಚ್ಚಿದ್ದರು.

‘ಜೀವನವೆನ್ನುವುದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಎನ್ನಿಸುತ್ತದೆ. ಕೆಲವು ಸಲ ಅಷ್ಟೇ ಸಂಕುಚಿವಾಗಿಬಿಡುತ್ತದೆ. ಒಮ್ಮೆ ತಂಪಾಗಿ, ಉದ್ದವಾಗಿ ಕಾಣಿಸುವ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರಳಿಯಾಗಿ ಗತ ಕಾಲಕ್ಕೆ ಹೋಗಿ ಕೂತುಬಿಡುತ್ತದೆ. ಹೊಸ ರೂಪ ಹೊಸ ಚೈತನ್ಯ ತಂದುಕೊಟ್ಟ ಅನುಭವಗಳು ಕೇಲವ ಸುರುಳಿಯಾಗಿ ಬಿಟ್ಟಿತ್ತಲ್ಲ ಎನ್ನುವ ದುಃಖವೂ ಆಗುತ್ತದೆ. ಆದರೆ ಜೀವನ ಮಾತ್ರ ನಡೆದೇ ನಡೆಯುತ್ತದೆ. ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಎನ್ನುತ್ತಲೇ ಸಾಧನೆಯ ದೋಣಿ ಏರಿದ್ದ ಶಂಕರ್ ಇಂದು ಇದ್ದಿದ್ದರೆ ಅಸಾಧ್ಯಗಳ ರಾಶಿಗಳನ್ನು

ಮುಂದೆ ಇಟ್ಟುಕೊಂಡು ಒಂದೊಂದಾಗಿ ಸಾಧ್ಯವಾಗಿಸುತ್ತಾ ಸಾಗಿರುತ್ತಿದ್ದರು.

ಅರುಂಧತಿ ಏನಂತಾರೆ

ಶಂಕರ್ ನಾಗ್ ಬಗ್ಗೆ ಅವರ ಪತ್ನಿ ಅರುಂಧತಿ ನಾಗ್ ಅವರನ್ನು ಮಾತಿಗೆಳೆದಾಗ, ‘ಅವನ ಬಗ್ಗೆ ನಾನೇನು ಹೇಳಲಿ’ ಹೀಗೆ ಹೇಳಿ ಸ್ವಲ್ಪ ನಕ್ಕು ಮತ್ತೆ ಮಾತು ಶುರು ಮಾಡಿದರು. ಇಪ್ಪತ್ತೇಳು ವರ್ಷಗಳ ನಂತರವೂ ಅವನು ಬದುಕಿದ್ದಾನೆ. ಅವನಿಗೆ ಇದ್ದ ಸಾಮಾಜಿಕ ಕಳಕಳಿ ಹೇಳಲ ಸಾಧ್ಯ. ಜನಕ್ಕಾಗಿ, ಸಮಾಜಕ್ಕಾಗಿ ಸದಾ ತುಡಿಯುತ್ತಿದ್ದ ಅವನು, ಅವನ ಒಳ್ಳೆಯ ತನದಿಂದಲೇ ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯದರಸ. ಅವನೇನಾದರೂ ಇದ್ದಿದ್ದರೆ ಹಲವಾರು ಹೊಸ ಹೊಸ ಪ್ರಾಜೆಕ್ಟ್ ಮಾಡಿಬಿಡುತ್ತಿದ್ದ.

ನಾವು ದಿನವೂ ಎದ್ದು ಕನ್ನಡಿಯಲ್ಲಿ ನಮ್ಮ ಮುಖ ನೋಡಿಕೊಳ್ಳಬೇಕಲ್ಲಾ ಅದಕ್ಕಾಗಿಯಾದರೂ ಪ್ರಾಮಾಣಿಕವಾಗಿರಬೇಕು. ನಿತ್ಯವೂ ಹಾಗೆ ಬದುಕಿದವನು ಶಂಕರ್. ಅವನಿಗೆ ಸಿಕ್ಕಿದ್ದು ತುಂಬಾ ಕಡಿಮೆ ಸಮಯ. ಸಿಕ್ಕಷ್ಟು ಹೊತ್ತಿನಲ್ಲಿ ಅವನ ಕೆಲಸ ಅವನು ಮಾಡಿ ಹೋಗಿದ್ದಾನೆ. ಜನರ ಬೆಂಬಲ ಸಿಕ್ಕಿದ್ದಕ್ಕಾಗಿ ಅವನಿಗೆ ಸದಾ ಜನತೆಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು ಎನ್ನುವ ತುಡಿತವಿತ್ತು. ನಮ್ಮ ಸಿನಿಮಾಗಳಿಗೆ ತಾಂತ್ರಿಕತೆಯ ಪ್ರಬಲವಾದ ಅವಶ್ಯಕತೆ ಇದೆ ಎಂಬುದನ್ನು ಅಂದೆಯೇ ಅರಿತ್ತಿದ್ದ ಅವನು, ಅದಕ್ಕಾಗಿಯೇ ‘ಸಂಕೇತ್ ಸ್ಟುಡಿಯೋ’ ಆರಂಭಿಸಿದ್ದು.

ಅವನದೇನಿದ್ದರೂ ಪ್ಯೂಚರಿಸ್ಟಿಕ್ ಪ್ಲಾನಿಂಗ್. ಕನಿಷ್ಟ ಐವತ್ತು ವರ್ಷ ಮುಂದಿನದನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯದಲ್ಲಿ ತೊಡಗುವುದು ಅವನ ವಿಶೇಷ. ಇನ್ನಷ್ಟು ಸಮಯ ಅವನಿದ್ದಿದ್ದರೆ ಚಿತ್ರರಂಗ ಇನ್ನಷ್ಟು ಶ್ರೀಮಂತವಾಗುತ್ತಿದ್ದದ್ದಂತೂ ಖಂಡಿತ.

ಶ್ರೇಷ್ಠ ಸಂಘಟಕ. ಒಂದಷ್ಟು ಜನರನ್ನು ಗುಡ್ಡೆ ಹಾಕಿ ಹಳ್ಳಿ ಹಳ್ಳಿಗೂ ಹೋಗಿ ಜನ ನೆಮ್ಮದಿಯಿಂದ ಇರಲು ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತಿದ್ದ. ಹಳ್ಳಿಗರು ಕೃಷಿ ಬಿಡಬಾರದು ಎಂಬುದೇ ಅವನ ಮುಖ್ಯ ಆಶಯ. ಸಾಮಾನ್ಯರ ನಡುವೆಯೇ ಇದ್ದು, ಅವರ ನೋವಿಗೆ ಸ್ಪಂದಿಸಬೇಕು ಎನ್ನುವುದು ಅವನ ಆಸೆ. ಅವನ ಬ್ಯೂಟಿ ಅಡಗಿದ್ದದ್ದು ಅವನ ಒಳ್ಳೆಯತನದಲ್ಲಿ. ಅಂತರಂಗ ಬಹಿರಂಗ ಎರಡರಲ್ಲೂ ಅವನು ಶುದ್ಧಿ. ಅವನನ್ನು ಆರಾಧಿಸುವವರು ಅವನಂತೆ ಚಿಂತಿಸಬೇಕು. ಅವನಂತವರು ಮತ್ತೆ ಮತ್ತೆ ಹುಟ್ಟಬೇಕು ಎಂದು ಹೇಳಿ ಮತ್ತೆ ನಕ್ಕರು ಅರುಂಧತಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ: ಮಾರ್ಕ್‌ ಸಿನಿಮಾದ ವೇದಿಕೆಯಲ್ಲಿ ಗರ್ಜಿಸಿದ್ಯಾಕೆ ಕಿಚ್ಚ ಸುದೀಪ್‌?
ದರ್ಶನ್ ಪುತ್ರ ವಿನೀಶ್ ನೋಡಿ ತುಂಬಾ ನೋವಾಯಿತು.. 45 ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?