
ಹೈದರಾಬಾದ್ (ನ.08): ಸೌತ್ ಸೂಪರ್ ಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ಸದ್ಯ ತಮ್ಮ 151 ನೇ ಚಿತ್ರದಲ್ಲಿ ಅಭಿನಯಸುತ್ತಿದ್ದಾರೆ. ಸುರೇಂದ್ರ ರೆಡ್ಡಿ ಸ್ವತಂತ್ರ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತ ಚಿತ್ರವಾಗಿರೋ ಸೈರಾ ನರಸಿಂಹ ರೆಡ್ಡಿ ಚಿತ್ರಿಕರಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ಬ್ಯೂಸಿಯಾಗಿರೋವಾಗ ಅವರ ಹೈದರಾಬಾದ್ ನ ಜುಬ್ಲಿಹಿಲ್ಸ್'ನಲ್ಲಿರುವ ನಿವಾಸದಲ್ಲಿ ಕಳ್ಳತನವಾಗಿದೆ.
ಚಿರಂಜೀವಿ ನಿವಾಸದಲ್ಲಿ 2 ಲಕ್ಷ ರುಪಾಯಿ ಕಳ್ಳತನವಾಗಿದ್ದು ಈ ಸಂಬಂಧ ಜ್ಯೂಬಿಲಿಹಿಲ್ಸ್ ಪೊಲೀಸ್ ಠಾಣೆಯಲ್ಲಿ ಚಿರಂಜೀವಿ ಮ್ಯಾನೇಜರ್ ಗಂಗಾಧರ್ ದೂರು ದಾಖಲಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಚಿರಂಜೀವಿ ನಿವಾಸದಲ್ಲಿ ಸರ್ವರ್ ಕೆಲಸ ಮಾಡುತ್ತಿರುವ ಚನ್ನಯ್ಯ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಹಳ ವರ್ಷಗಳಿಂದ ಚಿರಂಜೀವಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಚನ್ನಯ್ಯ ಎಂಬುವವರು 2 ಲಕ್ಷ ರೂಪಾಯಿ ಕದ್ದಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.