* ಸ್ಕೂಲ್ ಆಫ್ ಸಿನೆಮ್ಯಾಟಿಕ್ ಆರ್ಟ್ಸ್ ವಿಭಾಗದಲ್ಲಿ ಪದವಿ ಪಡೆದುಕೊಂಡ ಶಾರುಖ್ ಪುತ್ರ
* ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ
* ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್
* ಸಿನಿಮಾ ನಿರ್ಮಾಣ ಮಾಡುವವರು ಅದರ ಬಗ್ಗೆ ಅಧ್ಯಯನ ಮಾಡಿಕೊಂಡಿದ್ದರೆ ಉತ್ತಮ
ಕ್ಯಾಲಿಫೋರ್ನಿಯಾ( ಮೇ 17) ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ಪದವಿ ಪಡೆದುಕೊಂಡಿದ್ದಾರೆ. 2020ರ ಪರೀಕ್ಷೆ ಉತ್ತೀರ್ಣರಾಗಿ ಪದವಿ ಪಡೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪದವಿ ಸ್ವೀಕಾರದ ಪೋಟೋ ಹಂಚಿಕೊಂಡಿದ್ದಾರೆ. ಲಲಿತಕಲೆಗಳು, ಸಿನೆಮ್ಯಾಟಿಕ್ ಕಲೆಗಳು, ಚಲನಚಿತ್ರ ಮತ್ತು ಟೆಲಿವಿಶನ್ ಪ್ರೊಡಕ್ಷನ್ ಸ್ಕೂಲ್ ಆಫ್ ಸಿನೆಮ್ಯಾಟಿಕ್ ಆರ್ಟ್ಸ್ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಕೆಕೆಆರ್ ಅಭಿಮಾನಿಗಳ ಕ್ಷಮೆ ಕೋರಿದ ಶಾರುಖ್
ಕೆಲವು ವಾರಗಳ ಹಿಂದೆ ಆರ್ಯನ್ ತಾಯಿ ಗೌರಿಯೊಂದಿಗೆ ಮುಂಬೈನಿಂದ ಪ್ರಯಾಣ ಬೆಳೆಸಿದ್ದರು. ಇಲ್ಲಿಂದ ತೆರಳಿ ಮಗಳು ಸುಹಾನಾ ಖಾನ್ ಜತೆ ಸಮಯ ಕಳೆದಿದ್ದರು.
ಪುತ್ರ ಆರ್ಯನ್ ಅವರು ಮುಂದೆ ಏನಾಗಲಿದ್ದಾರೆ ಎಂದು ಶಾರುಖ್ ಬಳಿ ಸಂದರ್ಶನವೊಂದರಲ್ಲಿ ಕೇಳಿದ್ದಾಗ, ನಾವು ಚಲನಚಿತ್ರ ನಿರ್ಮಾಣದ ಬಗ್ಗೆ ಸ್ವಲ್ಪ ಮಾತನಾಡುತ್ತೇವೆ ಅಂದರೆ ಮಾತನಾಡುವ ಮೊದಲು ಆ ಕ್ಷೇತ್ರದಲ್ಲಿ ಅಧ್ಯಯನ ಇದ್ದರೆ ಉತ್ತಮ ಎಂದು ಹೇಳಿದ್ದರು. ಈಗ ಪುತ್ರ ಸಿನಿಮಾ ವಿಭಾಗದಲ್ಲಿಯೇ ಪದವಿ ಪಡೆದುಕೊಂಡಂತೆ ಆಗಿದೆ.
ಕೊರೋನಾ ಕಾರಣಕ್ಕೆ ಬಾಲಿವುಡ್ ಸೇರಿ ಎಲ್ಲ ಚಿತ್ರರಂಗದಲ್ಲಿ ಸದ್ಯಕ್ಕೆ ಶೂಟಿಂಗ್ ಇಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಮತ್ತೆ ವೇಗ ಪಡೆದುಕೊಳ್ಳಲಿದೆ.