
ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರ 18 ಸ್ಪರ್ಧಿಗಳ ಈ ಕಾರ್ಯಕ್ರಮದ ಮೊದಲ ಎಲಿಮಿನೇಟರ್ ರೌಂಡ್ ಮುಗಿದಿದೆ.
ಆದ್ರೆ ಮನೆಯಿಂದ ಹೊರ ಹೋಗುವ ಮೊದಲ ಸ್ಫರ್ಧಿ ಯಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದೀಗ ಅದಕೆಲ್ಲ ತೆರೆಬಿದ್ದಿದೆ.
ಬಿಗ್ ಬಾಸ್‌ನಲ್ಲಿದ್ದಾನೆ 200 ಗರ್ಲ್ ಫ್ರೆಂಡ್ ಸರದಾರ!
ಮೊದಲ ಎಲಿಮಿನೇಷನ್ ರೌಂಡ್ನಲ್ಲಿ ಕ್ರಿಕೆಟರ್ ರಕ್ಷಿತಾ ರೈ, ಜಿಮ್ ರವಿ, ಆನಂದ್ ಮಾಲಗತ್ತಿ, ನಟಿ ನಯನಾ ಪುಟ್ಟಸ್ವಾಮಿ, ಶಶಿ ಕುಮಾರ್, ರೀಮಾ, ಆಡ್ಯಂ ಪಾಶಾ, ಸೋನು ಪಾಟೀಲ್, ಆ್ಯಂಡ್ರೋ, ಒಗ್ಗರಣೆ ಮುರಳಿ ಮತ್ತು ಅಕ್ಷತಾ ಪಾಂಡವಪುರ ಕಾಣಿಸಿಕೊಂಡಿದ್ದರು.
ಇವರ ಪೈಕಿ ರಕ್ಷಿತಾ ರೈ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಸ್ಪೋರ್ಟ್ಸ್ ಕೋಟಾದಿಂದ ಬಿಗ್ಬಾಸ್ಗೆ ಎಂಟ್ರಿಕೊಟ್ಟಿದ್ದ ಕ್ರಿಕೆಟರ್ ರಕ್ಷಿತಾ ರೈ ಎಲಿಮಿನೇಟ್ ಆಗಿದ್ದಾರೆ. ಮಂಗಳೂರು ಮೂಲದ ರಕ್ಷಿತಾ ರೈ, ಪಕ್ಕಾ ಎಂ.ಎಸ್.ಧೋನಿ ಫ್ಯಾನ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.