ಬಿಗ್ ಬಾಸ್‌ನಲ್ಲಿದ್ದಾನೆ 200 ಗರ್ಲ್ ಫ್ರೆಂಡ್ ಸರದಾರ!

Published : Oct 26, 2018, 10:30 PM IST
ಬಿಗ್ ಬಾಸ್‌ನಲ್ಲಿದ್ದಾನೆ 200 ಗರ್ಲ್ ಫ್ರೆಂಡ್ ಸರದಾರ!

ಸಾರಾಂಶ

 ಬಿಗ್ ಬಾಸ್ ಮನೆಯಲ್ಲಿ ಎರಿದ್ದ ಬಿಸಿ ಆರುತ್ತಿದೆ. ಲವ್ ಸ್ಟೋರಿಗಳು ಹುಟ್ಟಿಕೊಳ್ಳುತ್ತಿವೆ. ಸತ್ಯವನ್ನು ಸ್ಪರ್ಧಿಗಳು ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ. ಒಂದು ವಾರ  ಕೊನೆಯಾಗಿದ್ದು ಪ್ರೀತಿ-ಪ್ರೇಮ-ಪ್ರಣಯದ ಮಾತುಗಳು ಆರಂಭವಾಗಿದೆ.

ಬಿಗ್ ಬಾಸ್ ನಿಂದ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ ಆ್ಯಡಂ ಮತ್ತು ನಯನಾ ಬಿಡುಗಡೆಯಾಗಿದ್ದಾರೆ. ನಾಣ್ಯ ಸಂಗ್ರಹದ ಟಾಸ್ಕ್ ನಲ್ಲಿಗಳಿಸಿದ್ದ ಅಂಕದ ಆಧಾರದಲ್ಲಿ ಮನೆಯವರಿಗೆ ದಿನಸಿ ವಸ್ತು ಖರೀದಿ ಮಾಡಲು ಬಿಗ್ ಬಾಸ್ ತಿಳಿಸಿದ್ದರು. ಆದರೆ ಸಮಯದ ಅಭಾವವವೋ, ಹೊಸ  ಮನೆಯಾದ್ದರಿಂದ ಗೊಂದಲವೋ ಅಕ್ಕಿಯನ್ನು ಬಿಟ್ಟು ಉಳಿದ ವಸ್ತುಗಳನ್ನು ಖರೀದಿ ಮಾಡಿಕೊಮಡರು. 2600 ಅಂಕ ಕೈನಲ್ಲಿದ್ದರೂ 900 ಅಂಕಕ್ಕೆ ಮಾತ್ರ ವಸ್ತು ಖರೀದಿ ಮಾಡಿಕೊಂಡರು.

ಬಿಗ್ ಬಾಸ್ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಬಗ್ಗೆ ಹೇಳಿಕೊಳ್ಳಲು, ಮನೆಯ ಸದಸ್ಯರು ಒಬ್ಬರನ್ನೊಬ್ಬರು ಅರಿಯಲು ವಿಶೆಷ ರೀತಿಯಾದ ಟಾಸ್ಕ್ ವೊಂದನ್ನು ನೀಡಿದ್ದರು. ಅದರಂತೆ ಪ್ರಶ್ನೆಗಳನ್ನು ಕೇಳಿ ನಂತರ ಯಾರು ಆ ಸದಸ್ಯ ಎಂದು ಊಹೆ ಮಾಡಬೇಕಿತ್ತು.  ಈ ಟಾಸ್ಕ್ ನಲ್ಲಿ ಅನೇಕ ಅಂಶಗಳು ಬಹಿರಂಗವಾದವು. ಇನ್ನೊಂದು ಕಡೆ ರೀಮಾ ಮತ್ತು ಆರ್‌ ಜೆ ರಾಕೇಶ್ ನಡುವೆ ಹುಡುಗರು ಹೇಗಿರಬೇಕು ಎಂಬ ಮಾತುಕತೆ ರಾತ್ರಿಯೆಲ್ಲಾ ನಡೆದೇ ಇತ್ತು.

ರೀಮಾ ಲಿಫ್ಟ್ ನಲ್ಲಿ ಎರಡನೇ ಕಿಸ್ ಪಡೆದುಕೊಂಡಿದ್ದು, ಶಶಿ 10 ಜನ ಹುಡುಗೀಯರೊಂದಿಗೆ ಡೇಟ್ ಮಾಡಿದ್ದು ಎಲ್ಲದಕ್ಕಿಂತ ಮುಖ್ಯವಾಗಿ ಆರ್ ಜೆ ರಾಕೇಶ್ ಗೆ 200 ಜನ ಗರ್ಲ್ ಫ್ರೆಂಡ್ ಇದ್ದರು ಎಂಬ ಸಂಗತಿ ಬಹಿರಂಗವಾಯ್ತು ! ಅದಕ್ಕೆ ರಾಕೇಶ್ ವಿವರಣೆಯನ್ನು ನೀಡಿದರು.


 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

25 ವರ್ಷಗಳಿಂದ ಹೊರಗಡೆ ಊಟವನ್ನೇ ಮಾಡಿಲ್ಲ... ಸಲ್ಮಾನ್ ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್!
ತಲೈವಾ 75ನೇ ಹುಟ್ಟುಹಬ್ಬಕ್ಕೆ ಪಡೆಯಪ್ಪ ರೀ-ರಿಲೀಸ್; ಸೀಕ್ವೆಲ್ ಕಥೆಯೂ ರೆಡಿಯಾಗ್ತಿದೆ..!