ಸೀತಾರಾಮ ಕಲ್ಯಾಣದ ಫಸ್ಟ್ ಸಾಂಗ್ ನ.16ಕ್ಕೆ ನಿಮ್ಮ ಮುಂದೆ

By Kannadaprabha NewsFirst Published Nov 15, 2018, 8:59 AM IST
Highlights

ನಿಖಿಲ್ ಕುಮಾರ್‌ಸ್ವಾಮಿ ನಾಯಕರಾಗಿ, ರಚಿತಾರಾಮ್ ನಾಯಕಿಯಾಗಿ ನಟಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.

130 ದಿನಗಳ ಚಿತ್ರೀಕರಣ ಮುಗಿಸಿರುವ ಎ.ಹರ್ಷ ನಿರ್ದೇಶನದ ಈ ಚಿತ್ರದ ಮೊದಲ ಹಾಡು ನ.16ಕ್ಕೆ ಬಿಡುಗಡೆಯಾಗುತ್ತಿದೆ. ಅರ್ಮಾನ್ ಮಲ್ಲಿಕ್ ಹಾಡಿರುವ ಹಾಡು ಇದು.

‘ನಿನ್ನ ರಾಗ ನಾನು ನನ್ನ ರಾಣಿ ನೀನು ಎಂದು ಸಾಗುವ ಈ ಹಾಡಿಗೆ ವಿ ಸಾಯಿ ಸುಕನ್ಯ ಸಾಹಿತ್ಯ ಬರೆದಿದ್ದಾರೆ. ಪಕ್ಕಾ ಲವ್ ಹಾಡು ಇದು. ಮೊದಲ ಹಾಡಿಗೆ ಯಾವ ರೀತಿ ರೆಸ್ಪಾನ್ಸ್ ಬರುತ್ತದೆಂದ ಕಾದು ನೋಡಬೇಕಿದೆ’ ಎನ್ನುತ್ತಾರೆ ನಿರ್ದೇಶಕ ಎ ಹರ್ಷ. ಅನೂಪ್ ರುಬೆನ್ಸ್ ಸಂಗೀತದಲ್ಲಿ ಚಿತ್ರದ ಎಲ್ಲಾ ಹಾಡುಗಳು ಕಲರ್‌ಫುಲ್ಲಾಗಿ ಬಂದಿವೆಯಂತೆ. ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

 

click me!