
ಬೆಂಗಳೂರು (ನ. 14): ನಟ ಅರ್ಜುನ್ ಸರ್ಜಾ ಮೇಲಿನ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ. ಮಹಿಳಾ ಆಯೋಹದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಎದುರು ಹಾಜರಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶೃತಿಗೆ ನಟ ಚೇತನ್ ಸಾಥ್ ನೀಡಿದ್ದಾರೆ.
ಮಹಿಳಾ ಆಯೋಗಕ್ಕೆ ಹಾಜರಾಗುವ ವೇಳೆ ಮಾಧ್ಯಮದವರು ಎದುರಾಗಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಶೃತಿ ಗರಂ ಆಗಿದ್ದಾರೆ. ನಾನೊಂಥರ ಸಕ್ಕರೆ ಇದ್ದಂಗೆ. ಅದಕ್ಕೆ ಇವರೆಲ್ಲ ನನ್ನ ಇರುವೆ ತರ ಹಿಂಬಾಲಿಸುತ್ತಾರೆ. ಎಲ್ಲಿ ಹೋದರೂ ಬಿಡುವುದೇ ಇಲ್ಲ ಎಂದು ಶೃತಿ ಹರಿಹರನ್ ವ್ಯಂಗ್ಯವಾಡಿದ್ದಾರೆ.
ಮೀಟೂ ನಂತರ ಜೀವಭಯದಲ್ಲಿದ್ದಾರಾ ಶೃತಿ ಹರಿಹರನ್?
ಸ್ಪಷ್ಟೀಕರಣ ಕೇಳಿದರೆ ನಾನು ಹಾಗೆ ಹೇಳಿಯೇ ಇಲ್ಲ ಅಂತ ಹೇಳಿ ಆಮೇಲೆ ಕ್ಯಾಮರದವರನ್ನು ತೋರಿಸಿ "ನೋಡಿಲ್ಲಿ ನಿಮ್ಮವರನ್ನ" ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಸಿನಿಮಾ ಪಬ್ಲಿಸಿಟಿ ಗೆ ಬರುವಾಗ ನಿಮಗೆ ಹಾಗೆ ಅನಿಸಲಿಲ್ವಾ ಅಂತ ಕೇಳಿದ್ದಕ್ಕೆ ಲೋಗೋ ತಳ್ಳಲು ಯತ್ನಿಸಿದ್ದಾರೆ. ಕೊನೆಗೆ ಕ್ಷಮೆಯಾಚನೆ ಮಾಡಿ ನಂಗೆ ಮಾಧ್ಯಮದ ಮೇಲೆ ಗೌರವವಿದೆ ಅಂತೇಳಿ ಹಾರಿಕೆ ಯ ಉತ್ತರ ಕೊಟ್ಟು ಹೋಗಿದ್ದಾರೆ.
ಮೀಟೂ ಆರೋಪದ ಬಗ್ಗೆ ಮಾತನಾಡುತ್ತಾ. ನಮ್ಮ ಅಣ್ಣಂಗೆ ಕ್ಷಮೆ ಕೇಳುವ ತನಕ ನಿನ್ನನ್ನು ಬಿಡುವುದಿಲ್ಲ ಎಂದು ಅರ್ಜುನ್ ಸರ್ಜಾ ಬೆಂಬಲಿಗರು ಹೆದರಿಸಿದ್ದಾರೆ. ಹಾಗಾಗಿ ದೂರು ನೀಡಿದ್ದೇನೆ ಎಂದಿದ್ದಾರೆ.
ನನ್ನ ಮನಸ್ಥಿತಿಯನ್ನ ನೀವು ಪ್ರಶ್ನೆ ಮಾಡುತ್ತಿದ್ದೀರಿ. ನಾನು ಬಹಳ ಧೈರ್ಯವಂತೆ. ಎಲ್ಲಾ ಮಹಿಳೆಯರಿಗೂ ಒಂದಲ್ಲ ಒಂದು ಭಾರಿ ಲೈಂಗಿಕ ದೌರ್ಜನ್ಯವಾಗಿರುತ್ತದೆ. ಆದರೆ ಹೇಳಿಕೊಳ್ಳುವ ಧೈರ್ಯವಿರುವುದಿಲ್ಲ. ನನ್ನ ಬಳಿಯೂ ದಾಖಲೆಗಳಿವೆ. ಅದನ್ನ ಕೋರ್ಟ್ ಗೆ ಹಾಜರುಪಡಿಸಿದ್ದೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.