
ಬೆಂಗಳೂರು (ಡಿ. 14): ಯುಟ್ಯೂಬ್ ಜಾಸ್ತಿ ನೋಡುವವರಿಗೆ ಸಪ್ನಾ ಚೌಧರಿ ಪರಿಚಯ ಇದ್ದೇ ಇರುತ್ತದೆ. ಆಕೆ ಮಾಡುವ ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ. ಆಕೆ ಮಾಡುವುದು ಸಿಂಪಲ್ ಡ್ಯಾನ್ಸ್ ಆದರೂ ಕೂಡಾ ಅದು ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತದೆ. ಅವರಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಸಪ್ನಾ ಚೌಧರಿ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆಂದರೆ ಗೂಗಲ್ ಸರ್ಚ್ ನಲ್ಲೂ ಆಕೆ ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟಿದ್ದಾರೆ.
ಗೂಗಲ್ ಸರ್ಚ್ ನಲ್ಲಿ ಅತೀ ಹೆಚ್ಚು ಸರ್ಚ್ ಆದವರಲ್ಲಿ ಸಪ್ನಾ ಚೌಧರಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಭಾರೀ ಸೆನ್ಸೇಶನ್ ಹುಟ್ಟು ಹಾಕಿದ್ದರು.
ಹರ್ಯಾಣ ಮೂಲದ ಸಪ್ನಾ ಚೌಧರಿ ಫೆಮಸ್ ಡ್ಯಾನ್ಸರ್. ಇವರು ಇರುವುದು ದೆಹಲಿಯಲ್ಲಿ. ಕುಟುಂಬ ನಿರ್ವಹಣೆಗೆ ಎಳೆ ವಯಸ್ಸಿಗೆ ಡ್ಯಾನ್ಸ್ ಮಾಡುವುದನ್ನು ಶುರು ಮಾಡಿದರು. ಅಲ್ಲಿಂದ ಫೇಮಸ್ ಆಗಲು ಶುರುವಾದರು. ನಂತರ ಬಿಗ್ ಬಾಸ್ ಮನೆಗೂ ಹೋಗಿ ಬಂದರು. ಬಿಗ್ ಬಾಸ್ ಗೆಲ್ಲದಿದ್ದರೂ ಪ್ರೇಕ್ಷಕರ ಮನಗೆದ್ದಿದ್ದಾರೆ.
ಇದೀಗ ಬಾಲಿವುಡ್ ಗೂ ಹಾರಲು ರೆಡಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.