
ಜೇಕಬ್ ವರ್ಗೀಸ್ ರಿಯಲಿಸ್ಟಿಕ್ ಚಿತ್ರಗಳಿಗೆ ಹೆಸರಾದವರು. ಈ ಹಿಂದೆ ಗಣಿ ಧೂಳಿನೊಳಗೆ ಮುಚ್ಚಿ ಹೋಗಿದ್ದ ಸತ್ಯಗಳಿಗೆ ಪೃಥ್ವಿ ಮೂಲಕ ಅವರು ಕಣ್ಣಾಗಿದ್ದರು. ಈಗ ಜನಪರ ಅಧಿಕಾರಿಯೊಬ್ಬರ ಸ್ಫೂರ್ತಿಯಿಂದ ಊರಿಗೂರನ್ನೇ ಹರಿದುಮುಕ್ಕುವ ಡಕಾಯಿತರ ಕಥೆಯೊಂದನ್ನು ಚಂಬಲ್ ಮೂಲಕ ಹೇಳ ಹೊರಟಿದ್ದಾರೆ.
ಇದನ್ನೂ ಓದಿ: ಚಂಬಲ್ ನನಗೆ ಆಸ್ಟ್ರೇಲಿಯಾ ಪಿಚ್ ಇದ್ದಂತೆ: ನೀನಾಸಂ ಸತೀಶ್
ಚಂಬಲ್ ಯಾರ ಬದುಕಿನ ಕಥೆಯನ್ನೂ ಆಧರಿಸಿದ ಕಥೆಯಲ್ಲ. ಈ ವಿಚಾರವನ್ನು ನಿರ್ದೇಶಕರು ಈಗಾಗಲೇ ಖಚಿತಪಡಿಸಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಜನಪರವಾದ ಅಧಿಕಾರಿ, ಭ್ರಷ್ಟ ಕುಳಗಳ ಜೊತೆಗೇ ಭರಪೂರವಾದ ಕಾಮಿಡಿ, ನವಿರಾದ ಪ್ರೇಮ ಕಥೆ ಸೇರಿದಂತೆ ಎಲ್ಲವೂ ಇದೆ.
ಆದರೆ ಇದೆಲ್ಲದರ ಜೊತೆಗೇ ಚಂಬಲ್ ಸಾಮಾಜಿಕ ಕ್ರಾಂತಿಯೊಂದಕ್ಕೆ ಉತ್ತೇಜನ ನೀಡುವಂಥಾ ವಿಚಾರಗಳನ್ನೂ ಕೂಡಾ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಎಲ್ಲರನ್ನೂ ಕಿತ್ತು ತಿನ್ನುವ ಭ್ರಷ್ಟರ ಬಗ್ಗೆ ಜನಸಾಮಾನ್ಯರಲ್ಲಿಯೂ ಒಂದು ಆಕ್ರೋಶವಿದೆ. ದನ್ನು ಬಡಿದೆಬ್ಬಿಸುವಂಥಾ ರೋಚಕ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅದರ ಮಜಾ ಎಂಥಾದ್ದೆಂಬುದು ಈ ವಾರವೇ ತಿಳಿಯಲಿದೆ.
ಇದನ್ನೂ ಓದಿ: ಚಂಬಲ್ ಚಿತ್ರಕ್ಕೆ ಸೋನು ಗೌಡ ಭರ್ಜರಿ ಫೋಟೋಶೂಟ್ !
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.