ಮಾಜಿ ಸಚಿವನ ಮೊಮ್ಮಗನೊಂದಿಗೆ ಸೈಫ್ ಮಗಳ ಡೇಟಿಂಗ್!

Published : Jan 29, 2019, 03:20 PM IST
ಮಾಜಿ ಸಚಿವನ ಮೊಮ್ಮಗನೊಂದಿಗೆ ಸೈಫ್ ಮಗಳ ಡೇಟಿಂಗ್!

ಸಾರಾಂಶ

ಸಾರಾ ಅಭಿನಯಿಸಿದ್ದು ಎರಡೇ ಸಿನಿಮವಾದರೂ ಎಲ್ಲರಿಗೂ ಅಚ್ಚು ಮೆಚ್ಚಿನ ನಟಿಯಾಗಿದ್ದಾಳೆ. ಪ್ರತಿಯೊಂದೂ ಸಂದರ್ಶನದಲ್ಲಿಯೂ ಕಾರ್ತಿಕ್ ಅರ್ಯನ್ ಇಷ್ಟವೆಂದು ಹೇಳುತ್ತಿದ್ದ ಸಾರಾ, ಇದೀಗ ex-ಬಾಯ್ ಫ್ರೆಂಡ್ ಬಗ್ಗೆ ಬಾಯಿ ಬಿಟ್ಟಿದ್ದಾರೆ...?

 

ನೇರ ಮಾತು, ಬೋಲ್ಡ್ ಕ್ಯಾರಕ್ಟೆರ್‌ನಿಂದ ಸೈಫ್ ಮೊದಲ ಪತ್ನಿ ಮಗಳು ಸಾರಾ ಆಲಿಖಾನ್ ಫೇಮಸ್ ಆಗುತ್ತಿದ್ದಾರೆ. 'ಕೇದರನಾಥ್' ಚಿತ್ರದ ಪ್ರಮೋಷನ್‌ಗಾಗಿ ನಟ ಸುಶಾಂತ್‌ರೊಂದಿಗೆ ಸುತ್ತುತ್ತಿರುವ ಸಾರಾ ಬಗ್ಗೆ ಬಿ ಟೌನ್‌ನಲ್ಲಿ ಗುಸು ಗುಸು ಸುದ್ದಿ ಹರಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಲೇ ತನ್ನ ಎಕ್ಸ್ ಬಾಯ್‌ ಫ್ರೆಂಡ್ ಬಗ್ಗೆಯೂ ಬಾಯಿ ಬಿಟ್ಟಿದ್ದು, ಮತ್ತೊಂದು ಸೀಕ್ರೆಟ್ ವಿಚಾರ ಸಾರಾ ಹಂಚಿಕೊಂಡಿದ್ದಾರೆ.

ಹೌದು, ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗೆ ವೀರ್ ಪಹಾರಿಯಾರೊಂದಿಗೆ ಡೇಟಿಂಗ್ ನಡೆಸುತ್ತಿದ್ದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಸದಾ ‘ಅವನು ನನ್ನ ಮನಸ್ಸು ಮುರಿದಿಲ್ಲ. ಎಲ್ಲವೂ ಸರಿಯಾಗಿಯೇ ಇದೆ. ನನ್ನನ್ನು ನಂಬಿ...’ ಎಂದು ಗೋಗರೆಯುತ್ತಿದ್ದ ಬೆಡಗಿ ಇದೀಗ ತನ್ನ ಎಕ್ಸ್ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದಾಳೆ.

96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?

ವೀರ್ ಜತೆ 2016ರಲ್ಲಿ ಸಿಕ್ಕಾಪಟ್ಟೆ ಡೇಟಿಂಗ್ ಮಾಡಿದ್ದರೂ, ಸಾರಾ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಒಂದು ವರ್ಷದಲ್ಲಿಯೇ ಎಲ್ಲವೂ ಮುಗಿದಿತ್ತು. ಇದೀಗ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ, ‘ನಾನು ಡೇಟ್ ಮಾಡಿದ್ದು ಅವನೊಬ್ಬನ ಜತೆ ಮಾತ್ರ. ಈಗ ನನಗೆ ಯಾವ ಬಾಯ್ ಫ್ರೆಂಡೂ ಇಲ್ಲ. ನಾನೀಗ ಸಿಂಗಲ್....' ಎಂದು ಹೇಳಿದ್ದಾರೆ.

ಎಲ್ಲವೂ ಒಂದು ಹಂತಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಸಾರಾ ಬಿ-ಟೌನ್‌ಗೆ ಎಂಟ್ರಿ ಕೊಟ್ಟಿದ್ದು, ಕೇದರನಾಥ್ ಹಾಗೂ ಸಿಂಬಾ ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಸಾರಾಗೆ ಒಳ್ಳೆ ಹೆಸರು ತಂದು ಕೊಟ್ಟಿದೆ.

ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!