ತಮಿಳು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕೇವಲ 50 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ಬಳಿ ಇರುವುದೆಲ್ಲ ಐಷಾರಾಮಿ ವಸ್ತುಗಳೇ.
37 ವರ್ಷದ 'ಬಾಹುಬಲಿ' ನಟಿ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಂಭಾವನೆ ಪಡಿಯುವ ನಟಿಯರಲ್ಲಿ ಒಬ್ಬರು. ಒಂದೂವರೆ ವರ್ಷಗಳಲ್ಲಿ ಒಟ್ಟು 142 ಕೋಟಿ ರೂ. ಸಂಭಾವನೆ ಪಡೆದಿರುವುದು ಇವರ ವಿಶೇಷತೆ. ಹಾಗಂಥ ದುಡ್ಡಿನ ವ್ಯಾಮೋಹ ಈ ನಟಿಗೆ ಇದ್ದಂತೆ ಕಾಣಿಸುವುದಿಲ್ಲ. ತಮ್ಮ ಕಾರು ಡ್ರೈವರ್‌ಗೇ 12 ಲಕ್ಷ ರೂ. ಮೌಲ್ಯದ ಕಾರು ನೀಡಿದ್ದಾರೆ.
ತೂಕ ಇಳಿಸೋಕೆ ಅನುಷ್ಕಾ ಶೆಟ್ಟಿ ಮಾಡ್ತಾ ಇರೋ ಕಸರತ್ತೇನು?
ಅನುಷ್ಕಾ ಬಳಿ ಇರುವಾ ಕಾಸ್ಟ್ಲಿ ವಸ್ತುಗಳು ಯಾವುವು ಗೊತ್ತಾ?
ಇನ್ನು ಮದುವೆ ವಿಚಾರದಲ್ಲಿಅನುಷ್ಕಾ ಪ್ರಭಾಸ್ ಕೈ ಹಿಡಿಯಲ್ಲಿದ್ದಾರೆ ಎನ್ನುವ ಸುದ್ದಿ ಆಗಾಗ ಹರಿದಾಡುತ್ತಲೇ ಇರುತ್ತದೆ. ಆದರೆ, ಈ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಅನುಷ್ಕಾ-ಪ್ರಭಾಸ್ ನಡುವೆ ಕುಚ್...ಕುಚ್ ನಡೆಯುತ್ತಿದೆಯಾ?
ಅನುಷ್ಕಾ ಜತೆ ಸಪ್ತಪದಿ ತುಳಿಯೋ ಬಗ್ಗೆ ಈ ಹಿಂದೆ ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿದ್ದ ಪ್ರಭಾಸ್ ಹೇಳಿದ್ದೇನು ಗೊತ್ತಾ? 'ಇವೆಲ್ಲ ಕೇವಲ ಗಾಳಿ ಮಾತು. ನಾನು ಅನುಷ್ಕಾ ಕ್ಲೋಸ್ ಫ್ರೆಂಡ್ಸ್, ಆನ್ ಸ್ಕ್ರೀನ್ ಜೋಡಿ ಸೂಪರ್ ಆದರೆ, ಆಫ್ ಸ್ಕ್ರೀನ್ ಆಗಬೇಕೆಂದೇನೂ ಇಲ್ಲ...' ಎಂದಿದ್ದರು.