'ದಿ ಡೆವಿಲ್' ಶೂಟಿಂಗ್​ನಲ್ಲಿ ನಟ ದರ್ಶನ್ ತೀವ್ರ ಒದ್ದಾಟ; ಬೆನ್ನು ನೋವಿನಿಂದ ಬಳಲಿದ್ದ ನಟ!

Published : Sep 15, 2025, 06:18 PM IST
Darshan Thoogudeepa

ಸಾರಾಂಶ

ದರ್ಶನ್​ಗೆ ಬೆನ್ನಿನ ಎಲ್​1-ಎಲ್​5 ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಕಳೆದ 9 ವರ್ಷದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು ನಟ ದರ್ಶನ್. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದಕೊಳ್ಳುತ್ತಿದ್ದರು ಎನ್ನಲಾಗಿದೆ. ಬೆನ್ನು ನೋವಿನ ಕಾರಣ ಹೇಳಿಯೇ ಬೇಲ್ ಪಡೆದು ಹೊರ ಬಂದಿದ್ದರು ನಟ ದರ್ಶನ್..

ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು 'ದಿ ಡೆವಿಲ್' ಸಿನಿಮಾ ಶೂಟಿಂಗ್‌ನಲ್ಲಿ ಬೆನ್ನು ನೋವಿನಿಂದ ಬಹಳಷ್ಟು ಸಮಯ ಬಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೂಟಿಂಗ್‌ ಸೆಟ್‌ನಲ್ಲಿನ ವಿಡಿಯೋವೊಂದು ಇದೀಗ ಹೊರಬಂದಿದ್ದು, ಅದೀಗ ಸಾಕಷ್ಟು ವೈರಲ್ ಅಗುತ್ತಿದೆ. ಬೆನ್ನು ನೋವು ತಾಳಲಾರದೆ ನೆಲ ಹಿಡಿದು ಕೂತುಕೊಂಡಿದ್ದ ದರ್ಶನ್ ವಿಡಿಯೋ ಇದೀಗ ಬಹಿರಂಗವಾಗಿದೆ. ಅಲ್ಲಿಗೆ, ನಟ ದರ್ಶನ್ ಅವರು ಬೆನ್ನುನೋವಿನ ಕಾರಣ ನೀಡಿ ಬೇಲ್ ಪಡೆದುಕೊಂಡಿದ್ದು ಸುಳ್ಳಲ್ಲ, ಸತ್ಯ ಸಂಗತಿ ಎನ್ನಲಾಗುತ್ತಿದೆ.

ಜೈಲಿಂದ ಬೇಲ್ ಪಡೆದು ದಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ನಟ ದರ್ಶನ್!

ಹೌದು, ಜೈಲಿಂದ ಬೇಲ್ ಪಡೆದು ದಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಅವರು ಸಾಕಷ್ಟು ವೇಳೆ ತೀವ್ರ ನೋವಿನಿಂದ ನರಳಿದ್ದರು. ಶೂಟಿಂಗ್‌ ಸೆಟ್‌ನಲ್ಲೇ, ಅಲ್ಲೇ ಮಲಗಿ ನೋವು ತಡೆದುಕೊಂಡು ಸಾಕಷ್ಟು ಸಮಯದ ಬಳಿಕ ನಟ ದರ್ಶನ್ ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಮತ್ತೆ ಜೈಲಿಗೆ ಮರಳಬೇಕಾಗಬಹುದು ಎಂಬ ಬಗ್ಗೆ ಅರಿವಿದ್ದ ನಟ ದರ್ಶನ್ ಅವರು, ಬೇಲ್ ಪಡೆದುಕೊಂಡ ಅಷ್ಟೇ ಸಮಯದಲ್ಲಿ ದಿ ಡೆವಿಲ್ ಶೂಟಿಂಗ್ ಮುಗಿಸಿಕೊಡುವ ಬಗ್ಗೆ ಪ್ಲಾನ್ ಮಾಡಿದ್ದರು, ತಮ್ಮಿಂದ ನಿರ್ಮಾಒಕರು ಹಾಗೂ ಇಡೀ ಸಿನಿಮಾತಂಡಕ್ಕೆ ತೊಂದರೆ ಆಗಬಾರದು ಎಂಬ ಆಶಯವನ್ನು ನಟ ದರ್ಶನ್ ಹೊಂದಿದ್ದರು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾರೆ ನಟ ದರ್ಶನ್!

ಅದಕ್ಕೆ ಬದ್ಧರಾಗಿ ಶೂಟಿಂಗ್ ಮುಗಿಸಿಕೊಟ್ಟಿದ್ದರು ದರ್ಶನ್. ಆ ಬಳಿಕ, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ, ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾರೆ ನಟ ದರ್ಶನ್. 'ದಿ ಡೆವಿಲ್' ಶೂಟಿಂಗ್​​ನಲ್ಲಿ ನಟ ದರ್ಶನ್ ಬೆನ್ನು ನೋವಿನ ನರಳಿದ ವೀಡಿಯೋ ಇದೀಗ ವೈರಲ್​ ಆಗಿದ್ದು, 'ನಟ ದರ್ಶನ್ ಬೆನ್ನು ನೋವು ಒಂದು ನಾಟಕ' ಎಂದಿದ್ದ ಹಲವಾರು ಮಾತಿನ ಬಗ್ಗೆ ಯೋಚಿಸುವಂತೆ ಮಾಡಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆ ಚಿತ್ರದ ಚಿತ್ರೀಕರಣ ಮಾಡುವಾಗ ನಟ ದರ್ಶನ್ ಅವರಿಗೆ ತೀವ್ರತರವಾದ ಬೆನ್ನು ನೋವು ಕಾಣಿಸಿಕೊಂಡಿತ್ತು.

ದರ್ಶನ್​ಗೆ ಬೆನ್ನಿನ ಎಲ್​1-ಎಲ್​5 ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಕಳೆದ 9 ವರ್ಷದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು ನಟ ದರ್ಶನ್. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದಕೊಳ್ಳುತ್ತಿದ್ದರು ಎನ್ನಲಾಗಿದೆ. ಬೆನ್ನು ನೋವಿನ ಕಾರಣ ಹೇಳಿಯೇ ಬೇಲ್ ಪಡೆದು ಹೊರ ಬಂದಿದ್ದರು ನಟ ದರ್ಶನ್ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?