
ಬೆಂಗಳೂರು (ಅ.09): ಯಶ್ ಬಹು ನಿರೀಕ್ಷಿತ ಚಿತ್ರ ’ಕೆಜಿಎಫ್’ ನವೆಂಬರ್ 16 ಕ್ಕೆ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಅಭಿಮಾನಿಗಳು ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಈ ಚಿತ್ರಕ್ಕಾಗಿ ಡಿಸಂಬರ್ ವರೆಗೆ ಕಾಯಬೇಕಾಗಿದೆ.
ಅರೇ, ಏನಾಯ್ತು ಕೆಜಿಎಫ್ ಗೆ ಅಂತ ತಲೆಕೆಡಿಸ್ಕೋತಿದೀರಾ? ಕೆಜಿಎಫ್ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ನವೆಂಬರ್ 16 ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಡಿಸಂಬರ್ ಗೆ ಹೋಗಿದೆ. ಡಿಸಂಬರ್ ತಿಂಗಳು ಯಶ್ ಗೆ ಅದೃಷ್ಟದ ತಿಂಗಳಂತೆ. ಹಾಗಾಗಿ ಅದೇ ತಿಂಗಳು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕೆಜಿಎಫ್ ಸಿನಿಮಾದ 6 ಸೀಕ್ರೇಟ್’ಗಳು ಇಲ್ಲಿವೆ ನೋಡಿ
ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿತ್ತು. ಐದೂ ಭಾಷೆಗಳ ಸಿನಿಮಾ ಡಿಸಂಬರ್ ವರೆಗೆ ಹೋಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.