
ಬೆಂಗಳೂರು[ ಅ.19] ಶಿವಣ್ಣ ದಡ್ಡನಾ....?? ಹೀಗೆಂದು ಪ್ರಶ್ನೆ ಮಾಡಿದ್ದು ಕಿಚ್ಚ ಸುದೀಪ್. ಈ ಸಿನಿಮಾ ಕತೆ ಕೇಳಿಯೇ ಶಿವಣ್ಣ ಒಪ್ಪಿಕೊಂಡಿರುವುದು. ಶಿವಣ್ಣ 35, 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ ಎಂದು ಹೇಳಿದ್ದರು.
ಇದರ ಮುಂದುವರಿದ ಭಾಗವಾಗಿ ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿದ್ದು, ಇದನ್ನು ಸಿನಿಮಾ ತರ ನೋಡಿ, ಶಿವಣ್ಣ ಸುದೀಪ್ ಮೇಲೆ ಕೈ ಮಾಡಿದ್ದರೆ ಆ ಪಾತ್ರ ಬಿದ್ದು ಹೋಗ್ತಿತ್ತು. ಆ ಪಾತ್ರದ ತೂಕವೇ ಹಾಗಿದೆ ಎಂದು ವಿವರಣೆ ನೀಡಿದ್ದಾರೆ.
ದಿ ವಿಲನ್- ಆದಿಯಿಂದ ಅಂತ್ಯದವರೆಗೆ, ವಿಮರ್ಶೆ-ವಿವಾದ
ಬಾಹುಬಲಿಗೂ ಮೀರಿ ಸಿನಿಮಾ ಗೆಲ್ಲಿಸಿದ್ದೀರಾ, ಚಿತ್ರದ ಅಂತಿಮ ಕ್ಷಣದಲ್ಲಿ ಸುದೀಪ್ ಹೊಡೆದಿದ್ದಾರೆ. ಶಿವಣ್ಣ ತಿರುಗಿಸಿ ಹೊಡೆದಿಲ್ಲ ಎನ್ನುವ ಆರೋಪ ಮಾಡುತ್ತಿದ್ದೀರಾ, ಆ ಪಾತ್ರವೇ ಹಾಗಿದೆ. ಒಂದು ಉತ್ತಮ ಚಿತ್ರ ಗೆಲ್ಲಿಸಿದ್ದೀರಿ.. ಅದಕ್ಕೆ ಧನ್ಯವಾದ.. ದಯವಿಟ್ಟು ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿನಿಮಾದಲ್ಲಿ ಸುದೀಪ್ ವಿಜೃಂಭಿಸಿದ್ದು ಹೊಡೆದಾಟದ ಸೀನ್ ಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂಬ ಶಿವರಾಜ್ ಕುಮಾರ್ ಅಭಿಮಾನಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್, ಶಿವಣ್ಣ ಪ್ರೇಮ್ ಗೆ ಹೇಳಿ ಬೇಕಾದರೆ ಸೀನ್ ಕಟ್ ಮಾಡಿಸಲಿ. ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಕಿದ್ದರೆ ತೆಗೆಸಲಿ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರತ್ತೆ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಕೈ ಎತ್ತೋದಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ಸುದೀಪ್ ದಾವಣಗೆರೆಯಲ್ಲಿ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.