ಶಿವಣ್ಣ ಹೇಳಿದರೆ ಪ್ರೇಮ್ ಆ ಸೀನ್ ಕಟ್ ಮಾಡಲಿ: ಸುದೀಪ್

Published : Oct 19, 2018, 04:12 PM ISTUpdated : Oct 19, 2018, 04:29 PM IST
ಶಿವಣ್ಣ ಹೇಳಿದರೆ ಪ್ರೇಮ್ ಆ ಸೀನ್ ಕಟ್ ಮಾಡಲಿ: ಸುದೀಪ್

ಸಾರಾಂಶ

ವಿಲನ್ ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಆದರೆ ವಿಲನ್ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವಿನ ತಿಕ್ಕಾಟಕ್ಕೂ ವೇದಿಕೆ ಮಾಡಿದೆ. ಸ್ವತಃ ಸುದೀಪ್ ಈ ಕುರಿತು ಮಾತನಾಡಿದ್ದಾರೆ.

ದಾವಣಗೆರೆ(ಅ.19]   ಶಿವಣ್ಣ ದಡ್ಡನಾ....?? ಹೀಗೆಂದು ಪ್ರಶ್ನೆ ಮಾಡಿದ್ದು ಕಿಚ್ಚ ಸುದೀಪ್. ಈ ಸಿನಿಮಾ ಕತೆ ಕೇಳಿಯೇ ಶಿವಣ್ಣ ಒಪ್ಪಿಕೊಂಡಿರುವುದು. ಶಿವಣ್ಣ 35, 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ಸುದೀಪ್ ವಿಜೃಂಭಿಸಿದ್ದು ಹೊಡೆದಾಟದ ಸೀನ್ ಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂಬ ಶಿವರಾಜ್ ಕುಮಾರ್ ಅಭಿಮಾನಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್,  ಶಿವಣ್ಣ ಪ್ರೇಮ್ ಗೆ  ಹೇಳಿ  ಬೇಕಾದರೆ ಸೀಟನ್ ಕಟ್ ಮಾಡಿಸಲಿ. ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಕಿದ್ದರೆ ತೆಗೆಸಲಿ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರತ್ತೆ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಕೈ ಎತ್ತೋದಲ್ಲ.  ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ಮನವಿ ಮಾಡಿದ್ದಾರೆ.

'ಶಿವಣ್ಣ-ಸುದೀಪ್‌ಗೆ  ನಿಜವಾದ ವಿಲನ್ ಜೋಗಿ ಪ್ರೇಮ್'

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಪೀಠದಲ್ಲಿ ಮಾತನಾಡಿದ ಸುದೀಪ್ ಈ ರೀತಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿರುವ ಆರೋಪಗಳಿಗೆ ಈ ಮೂಲಕ ಉತ್ತರ ನೀಡುವ ಕೆಲಸ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!