’ಚಂಬಲ್’ ಚಿತ್ರದ ಮೆಲೊಡಿಯಸ್ ಸಾಂಗ್ ರಿಲೀಸ್

By Web Desk  |  First Published Feb 15, 2019, 11:03 AM IST

ಟ್ರೇಲರ್‌ನಿಂದಲೇ ಕುತೂಹಲ ಮೂಡಿಸುತ್ತಿದೆ ’ಚಂಬಲ್’ ಚಿತ್ರ | ನೀನಾಸಂ ಸತೀಶ್ ನಟನೆಯ ಚಿತ್ರ ’ಚಂಬಲ್’ | ಈ ಚಿತ್ರದ ಮೆಲೊಡಿಯಸ್ ಸಾಂಗೊಂದು ರಿಲೀಸಾಗಿದೆ. 


ಬೆಂಗಳೂರು (ಫೆ.15): ನೀನಾಸಂ ಸತೀಶ್‌ ನಟನೆಯ ‘ಚಂಬಲ್‌’ ಚಿತ್ರ ಸಾಕಷ್ಟುಗಮನ ಸೆಳೆಯುತ್ತಿದೆ.

ಖಡಕ್ ಅಧಿಕಾರಿ ಡಿಕೆ ರವಿ ಆತ್ಮಚರಿತ್ರೆಯ ಚಂಬಲ್ ಟ್ರೈಲರ್!

Tap to resize

Latest Videos

‘ಒಬ್ಬ ಅಮಾಯಕ ಯುವಕ ಹೇಗೆ ದುಷ್ಟಕೂಟದಲ್ಲಿ ಸಿಲುಕಿಕೊಳ್ಳುತ್ತಾನೆ, ಹೇಗೆ ಆಚೆ ಬರುತ್ತಾನೆ ಎಂಬುದನ್ನ ರೋಮಾಂಚನಕಾರಿಯಾಗಿ ವಿವರಿಸುವ ಪ್ರಯತ್ನವೇ ಈ ‘ಚಂಬಲ್‌’ ಚಿತ್ರದ್ದು. ಇಂಥ ಪವರ್‌ಫುಲ್‌ ಚಿತ್ರದ ಟ್ರೇಲರ್‌ನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಬಿಡುಗಡೆ ಮಾಡಿಕೊಡುತ್ತಿರೋದು ಸಂತಸದ ವಿಷಯ’ ಎನ್ನುತ್ತಾರೆ ನಟ ಸತೀಶ್‌. ರೋಜರ್‌ ನಾರಾಯಣ್‌, ಸೋನು ಗೌಡ, ಸರ್ದಾರ್‌ ಸತ್ಯ, ಅಚ್ಯುತ್‌ ಕುಮಾರ್‌ ಮುಂತಾದವರು ಚಿತ್ರದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.

ಡಿಕೆ ರವಿ ಸಾವಿನ ಕೇಸ್ ರೀ ಓಪನ್?

ಡಿಕೆ ರವಿಯ ಪಾತ್ರವನ್ನು ಘನತೆ ಗೌರವದಿಂದ ಕಾಪಾಡಿಕೊಂಡು ತನ್ನ ಅಧಿಕಾರದಲ್ಲಿದ್ದಾಗ ಮಾಡಿದ ಸಾಮಾಜ ಸೇವೆ, ಭ್ರಷ್ಟಾಚಾರ ನಿರ್ಮೂಲನೆ, ಐಟಿ ರೇಡ್‌ ಮಾಡಿಸಿದ ರೀತಿ ಎಲ್ಲವು ಒಳಗೊಂಡಿದೆ.

ಚಂಬಲ್ ಚಿತ್ರದ ಹಾಡೊಂದು ರಿಲೀಸಾಗಿದೆ. ನೀನಾಸಂ ಸತೀಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

 


 

click me!