ಪುಸ್ತಕ ಬರೀತಾರಾ ಕಿಚ್ಚ ಸುದೀಪ್?

Published : Nov 22, 2018, 04:13 PM IST
ಪುಸ್ತಕ ಬರೀತಾರಾ ಕಿಚ್ಚ ಸುದೀಪ್?

ಸಾರಾಂಶ

ವಿಭಿನ್ನ ಲುಕ್‌ನಲ್ಲಿ ಕಾಣಿಸುವ ಸುದೀಪ್ ನಟನೆಯ ಪೈಲ್ವಾನ್ ಅಪಾರ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದಲ್ಲಿ ನಟಿಸುತ್ತಿರುವುದು ತೃಪ್ತಿ ತರುತ್ತಿದೆ, ಎಂದು ಹೇಳಿದ ಕಿಚ್ಚನಿಗೆ ಈ ಚಿತ್ರದ ಬಗ್ಗೆ ಮತ್ತಷ್ಟು ಹೇಳಲು ಇನ್ನೂ ಹೆಚ್ಚೆಚ್ಚು ಬರೆಯಬೇಕೆಂಬ ತವಕವಂತೆ...!

'ಪೈಲ್ವಾನ್' ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದೇ ತಡ, ಎಲ್ಲಿ ನೋಡಿದರೂ ಕಿಚ್ಚನ ಬಾಡಿ ಫಿಟ್‌ನೆಸ್ ಹಾಗೂ ಚಿತ್ರದ ಮೇಲೆ ಅವರ ಡೆಡಿಕೇಷನ್‌ನದ್ದೇ ಸುದ್ದಿ. ಈ ಚಿತ್ರದ ಶೂಟಿಂಗ್ ಮುಗಿಸಿ ಬಂದು, ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದೇನೆ ಎಂದ ಸುದೀಪ್‌ಗೆ ಇದರ ಬಗ್ಗೆ ಮತ್ತಷ್ಟು ಹೇಳಿಕೊಳ್ಳಬೇಕಂತೆ. ಹಾಗಾದ್ರೆ...ಪುಸ್ತಕ ಬರಿಯೋ ಪ್ಲ್ಯಾನ್ ಏನಾದ್ರೂ ಇದ್ಯಾ? ಕಾದು ನೋಡಬೇಕು.

''ಪೈಲ್ವಾನ್'ನಲ್ಲಿ ಸುದೀಪ್ ಲುಕ್ ನೋಡಿ ಇದು ಗ್ರಾಫಿಕ್ಸ್ ರಿಯಲ್ ಅಲ್ಲ...ಎನ್ನುವವರಿಗೆ ಕಿಚ್ಚ ಉತ್ತರಿಸಿದ್ದಾರೆ. 'ಪೈಲ್ವಾನ್' ಚಿತ್ರದಲ್ಲಿ ನನ್ನ ಪೋಸ್ಟರ್ ಲುಕ್ ನೋಡಿ ಅದನ್ನು ಫೇಕ್ ಎನ್ನುವವರ ಮೇಲೆ ಯಾವುದೇ ರೀತಿಯ ಆರೋಪ ಮಾಡೊಲ್ಲ. ಬಹುಶಃ ನನ್ನ ಶ್ರಮ ಅವರಿಗೆ ಇಂಥ ಇಂಪ್ರೆಷನ್ ಮೂಡಿಸಿದೆ. ಈ ಸಿನಿಮಾಗೆಂದು ಮಾಡುತ್ತಿರುವ ಕಸರತ್ತು ನನಗೆ ಸಂತೋಷ ಕೊಡುತ್ತಿದೆ. ಜಿಮ್‌ಗೆ ಹೋಗುವುದು, ಕಥೆಗೆ ನನ್ನ ಬದ್ಧತೆಯೇ ಎಲ್ಲರ ಅನುಮಾನಕ್ಕೆ ಉತ್ತರಿಸುತ್ತದೆ,' ಎಂದಿದ್ದಾರೆ.

ಟ್ವಿಟರ್‌ನಲ್ಲಿ ತಮ್ಮ ಚಿತ್ರದ ಅನುಭವ ಹಂಚಿಕೊಂಡ ಸುದೀಪ್, ‘ಈ ಸಿನಿಮಾ ನನಗೆ ಬಹಳಷ್ಟು ಅನುಭವ ಕೊಟ್ಟಿದೆ. ಇದು ಹೊಸ ಅಧ್ಯಾಯವಾಗಿದ್ದು, ಇದರ ಬಗ್ಗೆ ಮತ್ತಷ್ಟು ಮತ್ತೊಮ್ಮೆ ಬರೆಯುತ್ತೇನೆ. ಮಾಡುತ್ತಿರುವ ಕಸರತ್ತಿನಿಂದ ಸುಸ್ತಾಗುತ್ತೇನೆ. ಅದಕ್ಕೆ ಬೇಗ ಹಾಸಿಗೆ ಹಿಡಿಯುತ್ತಿದ್ದೇನೆ,' ಎಂದಿರುವ ಸುದೀಪ್, ನನ್ನ ಶ್ರಮ ಸಾಲದೆನ್ನಿಸಿದರೆ, ಮತ್ತಷ್ಟು ಬದ್ಧನಾಗಲು ಸಿದ್ಧ,' ಎಂದು ನಿರ್ದೇಶಕ ಕೃಷ್ಣ ಅವರಿಗೆ ಭರವಸೆ ನೀಡಿದ್ದಾರೆ.

ಈ ಕಾಂಬಿನೇಷನ್‌ನ ಮತ್ತೊಂದು ಚಿತ್ರ ಸ್ಯಾಂಡಲ್‍ವುಡ್‍ನ ಸೂಪರ್ ಹಿಟ್ ಸಿನಿಮಾ 'ಹೆಬ್ಬುಲಿ' ನಂತರ ಮತ್ತೆ ಕಿಚ್ಚ ಸುದೀಪ್ ಹಾಗೂ ಕೃಷ್ಣ ಕಾಂಬಿನೇಷನ್​ನಲ್ಲಿ ಮೂಡಿ ಬರ್ತಿರೋ ಸಿನಿಮಾ 'ಪೈಲ್ವಾನ್'. ಸದ್ಯ ಪೈಲ್ವಾನ್​​ ಸಿನಿಮಾ ಶೂಟಿಂಗ್​​ ಭರದಿಂದ ಸಾಗುತ್ತಿದ್ದು, ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಏಳು ಭಾಷೆಗಳಲ್ಲಿ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಇದೀಗ ಸುದೀಪ್ ಮಾಡಿರೋ ಟ್ವೀಟ್ ಅಭಿಮಾನಿಗಳನ್ನು ಈ ಚಿತ್ರಕ್ಕಾಗಿ ಮತ್ತಷ್ಟು ಕಾತುರದಿಂದ ಕಾಯುವಂತೆ ಮಾಡಿರುವುದು ಸುಳ್ಳಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?