
'ಕುರುಕ್ಷೇತ್ರ' ಬಿಡುಗಡೆಯ ಬ್ಯುಸಿಯಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳೇನೂ ಕಡಿಮೆ ಇಲ್ಲ. ಕೇಕ್, ಫೋಟೋ ಅಥವಾ ಅಚ್ಚೆ ಹಾಕಿಸಿಕೊಂಡೇ ನೆಚ್ಚಿನ ಸ್ಟಾರ್ ಮೀಟ್ ಮಾಡಲು ಅಭಿಮಾನಿಗಳು ಹೋಗುವುದು ಕಾಮನ್. ಆದರೆ, ಈ ಅಭಿಮಾನಿ ನೀಡಿರೋ ಗಿಫ್ಟ್ ವಿಶೇಷವಾಗಿದೆ.
‘ಕನ್ನಡ ಕಲಾ ಕುಲ ತಿಲಕ’ಅಭಿಮಾನಿಗಳು ದರ್ಶನ್‌ಗೆ ಉಡುಗೊರೆಯಾಗಿ ನೀಡಿರುವ ಫೋಟೋವನ್ನು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣ ಮರದ ಪೀಸಿನಲ್ಲಿ ದರ್ಶನ್ ಮುಖವನ್ನು ಅದ್ಭುತವಾಗಿ ಕೆತ್ತಿರೋ ಉಡುಗೊರೆಯನ್ನು ನೀಡಲಾಗಿದೆ. ಕೇವಲ ಕೈ ಬೆರಳಿನ ಗಾತ್ರದಷ್ಟಿರುವ ಈ ಮರದ ತುಂಡನ್ನು ಗಾಜಿನಿಂದ ಮುಚ್ಚಲಾಗಿದೆ. ಒಟ್ಟಾರೆ ಅಂಗೈನಷ್ಟು ದೊಡ್ಡದಾಗಿದ್ದು, ಕಂದು ಬಣ್ಣದಲ್ಲಿದೆ.
ಇಂಥ ಅದ್ಭುತವಾದ ಕಲಾಸೃಷ್ಟಿಯನ್ನು ಉಡುಗೊರೆಯಾಗಿ ನೀಡಿದವರು ಆ್ಯಕ್ಟರ್ ಕಮ್ ದಾಸನ ಅಭಿಮಾನಿ! ಒಬ್ಬ ನಟ ಮತ್ತೊಬ್ಬ ನಟನಿಗೆ ಅಭಿಮಾನಿಯಾಗಿರುವುದು ಕಡಿಮೆ. ಆದರೆ, ಈ ಅಭಿಮಾನಿ ತನ್ನ ಪ್ರೀತಿ, ಅಭಿಮಾನವನ್ನು ಕಲಾವಿದನ ಕೈ ಚಳಕವಿರೋ ಕಲೆಯನ್ನು ಉಡುಗೊರೆಯನ್ನಾಗಿ ಕೊಡೋ ಮೂಲಕ ಎಕ್ಸ್‌ಪ್ರೆಸ್ ಮಾಡಿದ್ದಾನೆ. ಅಷ್ಟಕ್ಕೂ ಯಾರೀತ?
‘ಗಾಂಚಲಿ’ ಸಿನಿಮಾ ನಟ ಆದರ್ಶ್. ದರ್ಶನ್ ಗಿಫ್ಟ್ ನೀಡುವಾಗಿನ ಫೋಟೋ ತೆಗೆದುಕೊಂಡಿದ್ದಾರೆ. ಕೊಟ್ಟಿದ್ದು ಆದರ್ಶ್. ಆದರೆ ಈ ಕಲಾಕೃತಿ ಯಾರದ್ದೆಂದು ಎಲ್ಲಿಯೂ ರಿವೀಲ್ ಆಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.