ಪುಟ್ಟರಾಜುವಿನ ಪ್ರಣಯ ಪರಸಂಗ

By Web DeskFirst Published Aug 11, 2018, 1:26 PM IST
Highlights

ಕನ್ನಡದಲ್ಲಿ ಈ ಹಿಂದೆ ತೆರೆಗೆ ಬಂದಿದ್ದ ಗ್ರಾಮೀಣ ಭಾಗದ ಹೈಸ್ಕೂಲ್ ಮಕ್ಕಳಲ್ಲಿನ ಚಿಗುರು ಮೀಸೆಯ ಮಕ್ಕಳ ಪ್ರೀತಿ- ಪ್ರೇಮವನ್ನು ಕತೆಯ ಎಳೆಯಾಗಿಸಿ ಪುಟ್ಟರಾಜು ಲವರ್ಸ್ ಆಫ್ ಶಶಿಕಲಾ. ಅದರಲ್ಲಿ ಬಾಲ್ಯದ ಘಟನೆಗಳನ್ನು ಪೋಣಿಸಿದ್ದಾರೆ.

ಇದು ನಿರ್ದೇಶಕರು ಹೇಳುವಂತೆ ಸತ್ಯ ಘಟನೆಯ ಆಧಾರಿತ. ಕತೆ ರಿಮೇಕ್ ಮಾಡದಿದ್ದರೂ ದೃಶ್ಯಗಳನ್ನು ಸಂಯೋಜಿಸುವಾಗ ಜನಪ್ರಿಯ ಚಿತ್ರಗಳ ಹಾಡು, ದೃಶ್ಯಗಳಿಂದಲೂ, ವೇಷಭೂಷಣಗಳಿಂದಲೂ ಸ್ಫೂರ್ತಿಯನ್ನಂತೂ ಪಡೆದುಕೊಂಡಿದ್ದಾರೆ. ‘ಖೋಖೋ’ ಆಟವನ್ನು ಹೆಚ್ಚು ತೋರಿಸಿ ದೇಸಿಯ ಆಟವನ್ನು ಪ್ರಮೋಟ್ ಮಾಡಲು ಪ್ರಯತ್ನಿಸಿದ್ದಾರೆ. 

ಕನ್ನಡದಲ್ಲಿ ಈ ಹಿಂದೆ ತೆರೆಗೆ ಬಂದಿದ್ದ ಗ್ರಾಮೀಣ ಭಾಗದ ಹೈಸ್ಕೂಲ್ ಮಕ್ಕಳಲ್ಲಿನ ಚಿಗುರು ಮೀಸೆಯ ಮಕ್ಕಳ ಪ್ರೀತಿ- ಪ್ರೇಮವನ್ನು ಕತೆಯ ಎಳೆಯಾಗಿಸಿದ್ದಾರೆ. ಅದರಲ್ಲಿ ಬಾಲ್ಯದ ಘಟನೆಗಳನ್ನು ಪೋಣಿಸಿದ್ದಾರೆ. ಹೀರೋಗೊಬ್ಬ ವಿಲನ್ ಬೇಕೆಂಬ ಹಠಕ್ಕೆ ಬಿದ್ದು ಅದನ್ನೂ ತಂದಿದ್ದಾರೆ. ಫೈಟ್ ಅನ್ನು ಜೋಡಿಸಿದ್ದಾರೆ. 

ಮಕ್ಕಳು ಪ್ರೇಮಿಸಿ ಓಡಿ ಹೋಗಬಾರದು ಎಂಬ ಸಂದೇಶವೂ ಇದೆ. ಮೊಮ್ಮಗ-ಅಜ್ಜ ಇಬ್ಬರೂ ಒಟ್ಟಿಗೆ ಪ್ರೀತಿ-ಪ್ರೇಮದಲ್ಲಿ ಬೀಳುವ ದೃಶ್ಯವೂ ಇದೆ. ಹೊಸ ಪರಿಚಯದ ಅಮಿತ್ ಭರವಸೆಯನ್ನು ಮೂಡಿಸಿದ್ದಾರೆ. ಪಡ್ಡೆಗಳಿಗಾಗಿ ಸನ್ನಿಲಿಯೋನ್‌ಳ ಫೋಟೋ ಹಾಗೂ ನಾಮಬಲವನ್ನೂ ಬಳಸಿಕೊಳ್ಳಲಾಗಿದೆ. ಆದರೆ ಈ ಫೋಟೋದೊಂದಿಗೆ ನಂಟಿರುವ ಪಾತ್ರಧಾರಿಯು ವಿಶೇಷವಾಗಿ ನಟಿಸಿದ್ದು ಕನ್ನಡಕ್ಕೊಬ್ಬ ಹೊಸ ಹಾಸ್ಯ ನಟನ ಎಂಟ್ರಿಯಾಗಿದೆ. ಇಡೀ ಚಿತ್ರದ ಹೈಲೈಟ್ ಹಿನ್ನೆಲೆಯ ಸಂಗೀತ, ಹಾಡು. ನಿರ್ದೇಶಕರ ಸಹದೇವ ಅವರಿಗಿದು ಮೊದಲ ಪ್ರಯತ್ನವಾದ್ದರಿಂದ ಮುಂದಿನ ಚಿತ್ರಗಳಲ್ಲಿ ಕಾದು ನೋಡಬೇಕಿದೆ.

ಸಂಕೇತ್

click me!