'10 ರೂಪಾಯಿಗೊಂದು' ಹಾಡನ್ನು ದರ್ಶನ್ ಗೆ ಕೊಟ್ಟ ಯೋಗರಾಜ್ ಭಟ್ರು!

Published : Feb 26, 2019, 03:51 PM ISTUpdated : Feb 26, 2019, 03:58 PM IST
'10 ರೂಪಾಯಿಗೊಂದು' ಹಾಡನ್ನು ದರ್ಶನ್ ಗೆ ಕೊಟ್ಟ ಯೋಗರಾಜ್ ಭಟ್ರು!

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ಅಭಿನಯದ ’ಯಜಮಾನ’ ಚಿತ್ರದ 5 ನೇ ಹಾಡು ಬಿಡುಗಡೆ ಆಗಿದ್ದು, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ ' ಹತ್ತು ರೂಪಾಯಿಗೊಂದು' ಹಾಡನ್ನು ಯೋಗರಾಜ್ ಭಟ್ ದರ್ಶನ್ ಗೆ ಕೊಟ್ಟಿದ್ದಾರೆ.

ಮಾರ್ಚ್‌ 1 ರಂದು 'ಯಜಮಾನ' ರಿಲೀಸ್‌ಗೆ ಸಿದ್ಧವಾಗುತ್ತಿದ್ದು ಮತ್ತೊಂದು ಕಡೆ ಸಿನಿಮಾದ 5 ನೇ ಹಾಡು ಬಿಡುಗಡೆ ಮಾಡಿದೆ. ಈ ಹಾಡು 3 ನಿಮಿಷ 38 ಸೆಕೆಂಡ್ ಇದೆ.

ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ದಾಸ ’ಹತ್ತು ರೂಪಾಯಿಗೊಂದು.....’ ಹಾಡಿನಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. 10 ರೂಪಾಯಿ ಮೌಲ್ಯವನ್ನು ಯೋಗ್‌ರಾಜ್ ಭಟ್ ಈ ಹಾಡಿನ ಮೂಲಕ ಹೇಳಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಹಾಡನ್ನು ಕಂಪೋಸ್ ಮಾಡಿದ್ದು ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.

 

ಟ್ವೀಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ‘ಫಿಲಂ ರಿಲೀಸ್ ಟೈಮ್ ಹತ್ತಿರ ಬಂದಿದೆ. ಟ್ರೈಲರ್ ಹಾಗೂ 4 ಹಾಡುಗಳನ್ನು ಅಷ್ಟು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವ ಜನತೆಗೆ ನನ್ನ ನಮನಗಳು. "ಯಜಮಾನ" ಚಿತ್ರದ ಕೊನೆಯ ಹಾಡು 'ಹತ್ ರೂಪಾಯಿಗೊಂದು' ಹಾಡು ಈಗ ನಿಮ್ಮ ಮುಂದೆ. ನೋಡಿ ಆನಂದಿಸಿ, ಎಂದಿನಂತೆ ಹರಸಿ, ನಿಮ್ಮ ದಾಸ ದರ್ಶನ್ ' ಎಂದು ಟ್ವೀಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
BBK13: 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?