
ಪಂಚ ಭಾಷೆಗಳಲ್ಲಿ ರಿಲೀಸ್ ಆದ ಕೆಜಿಎಫ್ ಬಗ್ಗೆ ಎಲ್ಲೆಡೆಯಿಂದ ಅತ್ಯುದ್ಭುತ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಎಲ್ಲರೂ ಈ ಟಿತ್ರದ ರಾಕಿಭಾಯ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯನವನ್ನು ಹೊಗಳುವ ಸರದಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರದ್ದು.
ಲೇಟ್ ಆಗಿಯಾದರೂ ಚಿತ್ರ ನೋಡಿ, ಒಳ್ಳೆ ಮಾತನಾಡಿದ್ದಾರೆ ಕೆಸಿಆರ್. 'May be ನಾನು ಲೇಟ್. ಕೂನೆಗೂ ಸಮಯ ಮಾಡಿಕೊಂಡು KGF ನೋಡಿದೆ. ಅದ್ಬುತವಾಗಿ ಮೂಡಿ ಬಂದಿದೆ. ಸೂಪರ್ ಆಗಿ ನಿರ್ದೇಶಿಸಿದ #PrashanthNeel ಹಾಗೂ ತೆರೆ ಮೇಲೆ ರಾಕ್ ಸ್ಟಾರ್‌ನಂತೆ ಯಶ್ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಮೇಜಿಂಗ್' ಎಂದು ತಮ್ಮ ಅಧಿಕೃತ ಖಾತೆಯಿಂದ ಕೆಸಿಆರ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ರಾಕಿಂಗ್ ಸ್ಟಾರ್ ಯಶ್ 'ಥ್ಯಾಂಕ್ ಯೂ ಸರ್, ನಿಜವಾಗಲೂ ಇಡೀ ತಂಡಕ್ಕೆ ಇದೊಂದು ಪ್ರೌಡ್ ಮೊಮೆಂಟ್' ಎಂದು ಟ್ಟೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.