
ಚಿತ್ರದ ನಾಯಕಿ ಪಾರೂಲ್ ಯಾದವ್ ಮೋಹಕ ನಗುವಿನೊಂದಿಗೆ ಪೋಸು ನೀಡಿದ್ದು, ಅವರ ಹಿನ್ನೋಟದಲ್ಲಿ ಪ್ರಸಿದ್ಧ ಐಫೆಲ್ ಟವರ್ ಕೂಡ ನಾಚಿ ನೀರಾಗಿದೆ. ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ ಚಿತ್ರವಿದು.
ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ನಿರ್ಮಾಣವಾಗಿದೆ. ಕನ್ನಡದಲ್ಲಿ ಪಾರೂಲ್ ಯಾದವ್ ನಾಯಕಿ ಆಗಿದ್ದಾರೆ. ಕಥಾ ನಾಯಕಿ ವಿಚಾರಕ್ಕೆ ಬಂದರೆ, ಪಾರೂಲ್ ಯಾದವ್ ಗೋಕರ್ಣ ಹುಡುಗಿ ಪಾರ್ವತಿ ಆಗಿದ್ದಾರೆ. ಪಕ್ಕಾ ಗ್ರಾಮೀಣ ಸೊಗಡಿನ ಈ ಹುಡುಗಿ ನಗಿಸುತ್ತಾಳೆ, ಅಳಿಸುತ್ತಾಳೆ, ನಗು ಮೊಗದ ಮಂದಹಾಸದಲ್ಲಿ ಮುಳುಗಿಸುತ್ತಾಳೆ. ಆಕೆ ಕಥಾ ನಾಯಕಿ ನಮ್ಮ ನಿಮ್ಮ ನಡುವಿನ ಮತ್ಯಾರೋ ಯುವತಿಯೂ ಆಗಿರುತ್ತಾಳೆ ಎನ್ನುತ್ತಾರೆ ನಟಿ ಪಾರೂಲ್ ಯಾದವ್. ಚಿತ್ರ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ.
ನನ್ನ ವೃತ್ತಿ ಬದುಕಿನಲ್ಲಿ ಅತ್ಯುತ್ತುಮ ಅನುಭವ ನೀಡಿದ ಪಾತ್ರ. ನಾನು ಜೀವಿಸಿದ ಪಾತ್ರ. ಹಾಗಾಗಿಯೇ ಈ ಪಾತ್ರ, ಚಿತ್ರ ಎರಡರ ಮೇಲೂ ಅತೀವ ವಿಶ್ವಾಸ ನನಗಿದೆ. ಕನ್ನಡಿಗರಿಗೆ ಇದೊಂದು ಒಳ್ಳೆಯ ಕೊಡುಗೆ ಎನ್ನುವ ನಂಬಿಕೆ ನನಗಿದೆ. - ಪಾರೂಲ್ ಯಾದವ್, ನಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.