
ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಸಿನಿಮಾ ಅಮರ್ ಶೂಟಿಂಗ್ ಆರಂಭವಾಗಿದಾಗಿಂದಲೂ ಇದೂವರೆಗೂ ಪ್ರೆಸ್ ಮೀಟ್ ಮಾಡಿರಲಿಲ್ಲ. ಇದೇ ತಿಂಗಳ 31 ರಂದು ಈ ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು ಚಿತ್ರ ತಂಡ ಮೊದಲ ಪ್ರೆಸ್ ಮೀಟ್ ಮಾಡಿದೆ. ಇದರಲ್ಲಿ ಚಿತ್ರ ನಿರ್ದೇಶಕರಾದ ನಾಗಶೇಖರ್, ನಿರ್ಮಾಪಕ ಸಂದೇಶ್, ನಟಿ ತಾನ್ಯ ಹೋಪ್ ಭಾಗಿಯಾಗಿದ್ದರು.
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಮೊದಲ ಚಿತ್ರದಲ್ಲಿ ಕೊಡವ ಬಾಷೆಯಲ್ಲಿ ಹಾಡಿರುವುದು ವಿಶೇಷ. ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅಭಿನಯದ 'ಮುತ್ತಿನಹಾರ' ಚಿತ್ರದಲ್ಲಿ ಕೊಡವ ಮಿಶ್ರಿತ ಕನ್ನಡ ಹಾಡಿದ್ದರೆ, ಇದೇ ಮೊದಲ ಬಾರಿಗೆ 'ಅಮರ್' ಚಿತ್ರದಲ್ಲಿ ಸಂಪೂರ್ಣ ಕೊಡವ ಭಾಷೆಯಲ್ಲಿಯೇ ಹಾಡಿರುವುದು ಮತ್ತೊಂದು ವಿಶೇಷ. ಹಲವು ಲೊಕೇಷನ್‌ಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, 87 ದಿನಗಳಲ್ಲಿ ಶೂಟಿಂಗ್ ಮುಗಿಯಿತಂತೆ.
ಒಂದೇ ಏಟಿಗೆ ಕೊಂದೇ ಬಿಟ್ಟಳು.. ತಾನ್ಯಾ ಜೊತೆ ಜೂ. ರೆಬೆಲ್ ಸ್ಟಾರ್ ರೊಮ್ಯಾನ್ಸ್
ಮೇ 29ರಂದು ರೆಬೆಲ್ ಮ್ಯಾನ್ ಅಂಬಿ ಹುಟ್ಟುಹಬ್ಬ. ಈ ಪ್ರಯುಕ್ತ 31ರಂದು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದಲ್ಲಿ ವಿಶೇಷ ಪಾತ್ರಗಳಲ್ಲಿ ಜಾಲೆಂಜಿಂಗ್ ಸ್ಟಾರ್ ದರ್ಶನ್, ಮೂಸಿಕಲ್ ಕಂಪೋಸರ್ ಅರ್ಜುನ್ ಜನ್ಯಾ, ನಟ ನಿರೂಪ್ ಭಂಡಾರಿ, ನಟಿ ರಚಿತಾ ರಾಮ್ ಗೆಸ್ಟ್ ಅಪಿಯರೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಅಭಿ- ತಾನ್ಯಾ ಹೋಪ್ ಕಾಂಬಿನೇಷನ್ ನೋಡಿದರೆ ಥೇಟ್ ರವಿಚಂದ್ರನ್- ಜೂಹಿ ಚಾವ್ಲಾ ನೆನಪಿಸುವುದಂತೂ ಗ್ಯಾರಂಟಿ. ಚಿತ್ರೀಕರಣದ ಆರಂಭದಲ್ಲಿ ಅಂಬರೀಶ್ ತನ್ನ ಪುತ್ರನ ವೀಕ್‌ನೆಸ್ ವಾಕಿಂಗ್ ಸ್ಟೈಲ್ ಎಂದೇಳಿ ಅದನ್ನು ಬದಲಾಯಿಸುವಂತೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಹೇಳಿದ್ದರಂತೆ!
'ಸುಮ್ಮನೆ' ಯೂಟ್ಯೂಬ್‌ನಲ್ಲಿ ಟ್ರೆಂಡಾದ ಜೂನಿಯರ್ ಅಮರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.