
ಕನ್ನಡದ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಅವರು 'ಮತ್ತೆ ಮೊದಲಿಂದ' ಅನ್ನೋ ಹೊಸ ಮ್ಯೂಸಿಕ್ ಆಲ್ಬಂ ರೆಡಿಮಾಡಿದ್ದಾರೆ. ನಾಲ್ಕು ಬಣ್ಣಗಳ ಹೆಸರಿನ ನಾಲ್ಕು ಹಾಡುಗಳು ಈ ಆಲ್ಬಂನಲ್ಲಿದ್ದು ಭಟ್ಟರು ಎಲ್ಲದಕ್ಕೂ ಸಾಹಿತ್ಯ ಒದಗಿಸಿದ್ದಾರೆ. ಸದ್ಯ 'ನೀಲಿ' ಅನ್ನೋ ಸಾಂಗ್ ರಿಲೀಸ್ ಆಗಿದ್ದು ಇದಕ್ಕೆ ಅನಿರುಧ್ ಶಾಸ್ತ್ರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ವಿಜಯ್ ಪ್ರಕಾಶ್ ಕಾಡುವ ಧ್ವನಿಯಲ್ಲಿರೋ ಈ ಹಾಡಿಗೆ ಸಂಜನ್ ಕಜೆ ಮತ್ತು ನಿಧಿ ಸುಬ್ಬಯ್ಯ ಹೆಜ್ಜೆ ಹಾಕಿದ್ದಾರೆ. ನೀಲಿ ಹಾಡಿನಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಮೋಹದಲ್ಲಿ ತೇಲಿ ತೇಲಿ ನೀಲಿ ಆಗೋ ಕಥೆ ಇದೆ. ಕೇಳೋದಕ್ಕೂ, ನೋಡೋದಕ್ಕೂ ಹಿತವಾಗಿರೋ ಈ ಹಾಡು ಸದ್ಯ ಎಲ್ಲರ ಮನಸ್ಸು ಗೆಲ್ತಾ ಇದೆ. ಈ ಹಾಡು ಇದೀಗ ಟ್ರೆಂಡ್ ಕ್ರಿಯೇಟ್ ಮಾಡುವ ಹಾದಿಯಲ್ಲಿದೆ.
'ಮತ್ತೆ ಮೊದಲಿಂದ' ಶುರು ಮಾಡಿದ ಯೋಗರಾಜ್ ಭಟ್ಟರ 'ನೀಲಿ' ಹೆಸರಲ್ಲಿ ಹೊಸ ಮೋಡಿ ಮಾಡಿದ್ದಾರೆ ಎನ್ನಬಹುದು. ನೀಲಿ ಬಣ್ಣವು ಡಾಮಿನೇಟ್ ಮಾಡುವ, ನೀಲಿ ಬಣ್ಣ ಮೈಮೇಲೆ ಕಾಣಬೇಕೆಂಬ ಕಾರಣಕ್ಕೆ ಕಡಿಮೆ ಬಟ್ಟೆ ತೊಟ್ಟಿರುವ ನಾಯಕ-ನಾಯಕಿ ಮೈ ಕ್ಯಾಮೆರಾ ಮುಂದೆ ಅನಾವರಣ ಆಗಿದೆ ಎನ್ನಬಹುದು. ಆದರೆ, ಅದು ಎಲ್ಲೂ ರೇಜಿಗೆ ಹುಟ್ಟಿಸದಂತೆ, ನೀಲಿ ಹಾಡು ನೀಲಿ ಚಿತ್ರವಾಗದಂತೆ ನಿರ್ದೇಶಕ ಯೋಗರಾರ್ಜ ಭಟ್ಟರು ಈ ಹಾಡನ್ನು ಸೂಕ್ಷ್ಮವಾಗಿ ಸೆರೆ ಹಿಡಿದು ವೀಕ್ಷಕರ ಮುಂದೆ ಹರಿಯಬಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.