ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ, ಇಬ್ಬರ ಸಾಂಗತ್ಯ ನೆನೆದು ರಾಧಿಕಾ ಪಂಡಿತ್ ಪೋಸ್ಟ್

Published : Jun 19, 2025, 02:31 PM ISTUpdated : Jun 19, 2025, 02:49 PM IST
Radhika Pandit

ಸಾರಾಂಶ

18ನೇ ಕ್ರಾಸ್ ಚಿತ್ರದ ಮೂಲಕ ಸಿನಿಮಾಗೆ ಪ್ರವೇಶ ಪಡೆದ ರಾಧಿಕಾ ಪಂಡಿತ್‌ ಅವರ ಬಿಡುಗಡೆಯಾದ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು'. ಈ ಚಿತ್ರದಲ್ಲಿ ನಟ ಯಶ್ ಕೂಡ (ಈಗ ರಾಧಿಕಾ ಪಂಡಿತ್ ಪತಿ) ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

ಅಚ್ಚ ಕನ್ನಡತಿ, ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ತಮ್ಮ ಪೋಷಕರ ಮದುವೆ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದ್ದಾರೆ. ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಪೇಜ್‌ನಲ್ಲಿ ನಟಿ ರಾಧಿಕಾ ಪಂಡಿತ್‌ ಅವರು ತಮ್ಮ ಅಪ್ಪ-ಅಮ್ಮನ ಮ್ಯಾರೇಜ್ ಆನಿವರ್ಸರಿ ಬಗ್ಗೆ ಶುಭಾಶಯ ಕೋರಿ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ 'ಪ್ರೀತಿ, ಸಹನೆ ಹಾಗೂ ಸಾಂಗತ್ಯವೆಂದರೆ ನಿಜವಾಗಿಯೂ ಏನೆಂದು ಕಲಿಸಿದ ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು' ಎಂದು ಬರೆದಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಬೆಂಗಳೂರಿನಲ್ಲಿ ವಾಸವಿರುವ ರಾಧಿಕಾ ಪಂಡಿತ್, ತಮ್ಮ ಅಪ್ಪನ ಜೊತೆಯಲ್ಲೇ ಇದ್ದು ಸಿನಿಮಾ ನಟನೆಗೆ ಬಂದವರು. 18ನೇ ಕ್ರಾಸ್ ಚಿತ್ರದ ಮೂಲಕ ಸಿನಿಮಾಗೆ ಪ್ರವೇಶ ಪಡೆದ ರಾಧಿಕಾ ಪಂಡಿತ್‌ ಅವರ ಬಿಡುಗಡೆಯಾದ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು'. ಈ ಚಿತ್ರದಲ್ಲಿ ನಟ ಯಶ್ ಕೂಡ (ಈಗ ರಾಧಿಕಾ ಪಂಡಿತ್ ಪತಿ) ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಮೊಗ್ಗಿನ ಮನಸ್ಸು ಮೂಲಕ ನಟನೆ ಶುರು ಮಾಡಿದ್ದರೂ ನಟಿ ರಾಧಿಕಾ ಪಂಡೊತ್ ಅವರು ಸಿನಿಮಾಗೂ ಮೊದಲು ಸೀರಿಯಲ್‌ನಲ್ಲಿ ನಟಿಸಿದ್ದರು.

ಹೌದು, ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಇಬ್ಬರೂ ಕೂಡ ಸಿನಿಮಾ ನಟನೆಗಿಂತ ಮೊದಲು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆ ಬಳಿಕವಷ್ಟೇ ಅವರಿಗೆ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿ, ಅವರಿಬ್ಬರೂ ಸ್ಟಾರ್‌ ನಟನಟಿಯರಾಗಿ ಬೆಳೆದಿದ್ದಾರೆ. ಇಂದು ನಟಿ ರಾಧಿಕಾ ಪಂಡಿತ್ ಅವರು ಸಿನಿಮಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರೆ, ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ನಟ ಯಶ್ ಅವರು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ'ದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ನಟ ಯಶ್ ಅವರು ಸದ್ಯದ ಖ್ಯಾತಿಯನ್ನೂ ಮೀರಿ ಬೆಳೆಯಲಿದ್ದಾರೆ ಎಂದು ಇಡೀ ಜಗತ್ತು ನಿರೀಕ್ಷಿಸುತ್ತಿದೆ.

ಅಂದಹಾಗೆ, ನಟಿ ರಾಧಿಕಾ ಪಂಡಿತ್ ಅವರು ರಾಜ್ಯ ಪ್ರಶಸ್ತಿ ಹಾಗೂ ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಿಡುಗಡೆಯಾದ ಮೊಟ್ಟಮೊದಲ ಚಿತ್ರ ‘ಮೊಗ್ಗಿನ ಮನಸ್ಸು’ಗೆ ಪ್ರಶಸ್ತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಅವರು ಆ ಬಳಿಕ ಬೆಳೆದ ಪರಿ ನಿಜವಾಗಿಯೂ ಅಚ್ಚರಿಯೇ ಸರಿ. ಕನ್ನಡದ ಸ್ಟಾರ್ ನಟಿಯಾಗಿ ಬೆಳೆದ ರಾಧಿಕಾ ಪಂಡಿತ್ ಅವರು ‘ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ’ ಎಂಬ ಬಿರುದನ್ನು ಕೂಡ ಪಡೆದವರು. 

ಕನ್ನಡದ ನಟಿ ರಾಧಿಕಾ ಪಂಡಿತ್ ಅವರು ಕನ್ನಡದ ನಟ ಯಶ್ ಅವರನ್ನು 2016ರಲ್ಲಿ ಮದುವೆ ಆಗಿದ್ದಾರೆ. ಅವರಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳು ಇದ್ದಾರೆ. ಸದ್ಯ ನಟ ಯಶ್ ಅವರು ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. 

ನಟಿ ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ತಾವು ಅಟೆಂಡ್ ಮಾಡಿದ ಕೆಲವು ಕಾರ್ಯಕ್ರಮಗಳ ಫೋಟೋ, ವಿಡಿಯೋಗಳು, ಪತಿ ಹಾಗು ಮಕ್ಕಳ ಜೊತೆ ಔಟಿಂಗ್ ಹೋಗಿರುವ ಕ್ಷಣಗಳ ಫೋಟೋ-ವಿಡಿಯೋಗಳನ್ನು ತಮ್ಮ ಅಧಿಕೃತ ಪೇಜ್‌ನಲ್ಲಿ ರಾಧಿಕಾ ಅವರು ಶೇರ್ ಮಾಡುತ್ತಾರೆ. ಹಬ್ಬವನನು ಮನೆಯಲ್ಲಿ ಗ್ರಾಂಡ್‌ ಆಗಿ ಆಚರಿಸುವ ನಟಿ ರಾಧಿಕಾ ಪಂಡಿತ್ ಅವರು ಅವುಗಳ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪೋಸ್ಟ್ ಮಾಡುವ ಜೊತೆಗೆ ಅದಕ್ಕೊಂದು ಚೆಂದದ ಕ್ಯಾಪ್ಶನ್ ಸಹ ಕೊಡುತ್ತಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?