ಕನ್ನಡದ ಹಿರಿಯ ನಿರ್ದೇಶಕ ಎಸ್ ಮುರಳಿ ಮೋಹನ್ ನಿಧನ

Published : Aug 13, 2025, 05:13 PM ISTUpdated : Aug 13, 2025, 05:20 PM IST
S Murali Mohan

ಸಾರಾಂಶ

ಸತತ 36 ವರ್ಷಗಳು ಚಿತ್ರರಂಗದಲ್ಲಿ ಎಸ್ ಮುರಳಿ ಮೋಹನ್ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ತಮ್ಮ ನಿರ್ದೇಶನ, ನಟನೆ ಹಾಗೂ ಸಂಭಾಷಣೆ ಬರೆಯುವ ವೃತ್ತಿಯಿಂದ ಕೊಂಚ ದೂರವೇ ಉಳಿದಿದ್ದರು. ಕಾರಣ, ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು.

ಸ್ಯಾಂಡಲ್‌ವುಡ್ ಹಿರಿಯ ನಿರ್ದೇಶಕ ಎಸ್ ಮುರಳಿ ಮೋಹನ್ (S Murali Mohan) ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಂತ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ನಾಗರಹಾವು ಸಿನಿಮಾಗಳು ಸಿನಿಪ್ರಿಯರಿಗೆ ಗೊತ್ತು. ಹೀಗೆ ಹಲವು ಸಿನಿಮಾಗಳನ್ನು ಕನ್ನಡ ಚಿತ್ರರಂಗ ಹಾಗೂ ಚಿತ್ರರಸಿಕರಿಗೆ ಕೊಟ್ಟಿರುವವರು ನಿರ್ದೇಶಕರಾದ ಎಸ್ ಮುರಳಿ ಮೋಹನ್ (S Murali Mohan) ಅವರು ಇಂದು ನಿಧನರಾಗಿದ್ದಾರೆ.

ಸತತ 36 ವರ್ಷಗಳು ಚಿತ್ರರಂಗದಲ್ಲಿ ಎಸ್ ಮುರಳಿ ಮೋಹನ್ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ತಮ್ಮ ನಿರ್ದೇಶನ, ನಟನೆ ಹಾಗೂ ಸಂಭಾಷಣೆ ಬರೆಯುವ ವೃತ್ತಿಯಿಂದ ಕೊಂಚ ದೂರವೇ ಉಳಿದಿದ್ದರು. ಕಾರಣ, ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ಕಿಡ್ನಿ ಸಮಸ್ಯೆಯಿಂದ ಅವರು ಹಲವು ತಿಂಗಳಿಗಳಿಂದ ಬಳಲುತ್ತಿದ್ದರು.

ಹೌದು, ಎಸ್‌ ಮುರಳಿ ಮೋಹನ್ ಅವರು ಕನ್ನಡದ ನಿರ್ದೇಶಕರು, ನಟರು ಹಾಗೂ ಸಂಭಾಷಣೆಕಾರರು. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ, ಸಂಭಾಷಣೆ ಬರೆದು, ಸಿನಿಮಾವನ್ನೇ ಉಸಿರಾಗಿಸಿಕೊಂಡವರು. ಅದರೆ, ಈಗ ಅದನ್ನು ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಮುರಳಿ ಮೋಹನ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ನಿರ್ದೇಶನ ನಿಲ್ಲಿಸಿದ್ದಾರೆ. ಕೋವಿಡ್ ಸಮಯದಿಂದಲೇ, ಅಂದರೆ 5-6 ವರ್ಷದಿಂದ ಅವರಿಗೆ ಕಿಡ್ನಿ ಸಮಸ್ಯೆ ಇತ್ತು, ಡಯಾಲಿಸಿಸ್‌ನಲ್ಲಿ ಇದ್ದರು, ಆದರೆ ಈಗ ಅದು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಬಂದಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮರಣ ಹೊಂದಿದ್ದಾರೆ.

ನಾಗರಹಾವು, ಸಂತ, ಮಲ್ಲಿಕಾರ್ಜುನ್ ಚಿತ್ರಗಳ ನಿರ್ದೇಶಕ ಎಸ್.ಮುರುಳಿಮೋಹನ್ ಇನ್ನಿಲ್ಲ. ಉಪೇಂದ್ರ ಜೊತೆಗೆ ಶ್, ಓಂ ಚಿತ್ರಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಮುರುಳಿ ಮೋಹನ್ ಇಂದು, ಅಂದರೆ 13 ಆಗಸ್ಟ್ 2025ರಂದು ನಿಧನರಾಗಿದ್ದಾರೆ. ಉಪೇಂದ್ರ ನಟನೆಯ ನಾಗರಹಾವು, ಶಿವರಾಜ್​ಕುಮಾರ್ ನಟನೆಯ ಸಂತ ಚಿತ್ರಗಳ ನಿರ್ದೇಶಕ ಎಸ್ ಮುರಳಿ ಮೋಹನ್.

ಎಸ್ ಮುರಳಿ ಮೋಹನ್ ಅವರು 'ರಾಜ್' ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಜೊತೆಗೆ ನಟನೆ ಕೂಡ ಮಾಡಿದ್ದರು. ನಟನೆ, ಗಾಯನ, ಬರವಣಿಗೆ ಜೊತೆಗೆ ನಿರ್ದೇಶನದಲ್ಲೂ ಹೆಸರು ಮಾಡಿದ್ದ ಬಹುಮುಖ ಪ್ರತಿಭೆ ಎಸ್ ಮುರಳಿ ಮೋಹನ್.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್​ಗೆ ಸುದೀಪ್, ಉಪೇಂದ್ರ ಧನಸಹಾಯ ಮಾಡಿದ್ದರು. ಕಿಡ್ನಿ ಕಸಿಗೆ ಸಜ್ಜಾಗಿದ್ದ ಮುರುಳಿ ಮೋಹನ್​, ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದರು ಎಸ್ ಮುರಳಿ ಮೋಹನ್. 'ನನ್ನ ಆರೋಗ್ಯ ಸರಿಯಾಗಿಲ್ಲ. ಈ ಮೊದಲು ಡಯಾಲಿಸ್‌ ಮಾಡಿಸಿಕೊಳ್ಳುತ್ತ ಒಂದು ಹಂತದಲ್ಲಿ ಇದ್ದೆ ನಾನು. ಆದರೆ ಈಗ ಅದು ಟ್ರಾನ್ಸ್‌ಪ್ಲಾಂಟೇಶನ್ ಹಂತಕ್ಕೆ ಬಂದಿದೆ. ಈಗ ತಿಂಗಳಿಗೆ 30 ಸಾವಿರ ಖರ್ಚಾಗುತ್ತಿದೆ. ಹೊಸ ಕಿಡ್ನಿ ಹಾಕಿಸಿಕೊಳ್ಳಲು 30-35 ಲಕ್ಷ ಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಮೆಡಿಸನ್‌, ಡಯಾಲಿಸಿಸ್ ಖರ್ಚಿಗೇ ಒದ್ದಾಡುವ ಪರಿಸ್ಥಿತಿ ಇದೆ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?