'ತಾಜ್ ಮಹಲ್' ನೆನಪಿಸಿಕೊಂಡಿದ್ಯಾಕೆ ಆರ್ ಚಂದ್ರು? 'ಧರ್ಮಂ'ನಲ್ಲಿ 'ನೀನೇ ತಂದ ಒಲವಾ ಒಡವೆ' ಏನೆಲ್ಲಾ ಮಾಡಿದೆ?

Published : Oct 15, 2025, 01:45 PM IST
Dharmam Movie

ಸಾರಾಂಶ

ಮೇಲೂ ಕೀಳು ಅನ್ನೋ ಭಾವ ಲೋಕದ ಹೊಸ ಪ್ರಪಂಚದಲ್ಲಿ ಹೋರಾಟ ಮಾಡ್ತಿರೋ ನಾಯಕನ ಜೊತೆ ತನ್ನ ಮನದಾಳದ ಭಾವನೆಗಳನ್ನ ಹೇಳಿಕೊಳ್ಳೋ ತೊಳಲಾಟದಲ್ಲಿನ ಸನ್ನಿವೇಶಗಳು ಹಾಡಿನಲ್ಲಿ ಮೂಡಿ ಬಂದಿವೆ.. 'ಧರ್ಮಂ' ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಧರ್ಮಂ‌ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಆರ್ ಚಂದ್ರು..!

ಮಲೆ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟು ನಂತರ ತಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿದೆ ಕನ್ನಡದ 'ಧರ್ಮಂ' ಸಿನಿಮಾ ತಂಡ. ಧರ್ಮಂ (Dharmam) ಅನ್ನೋ ವಿಭಿನ್ನ ಕಥಾ ಹಂದರದ ಸಿನಿಮಾವನ್ನ ನಿರ್ದೇಶಕ ಆರ್ ಚಂದ್ರು ಮೆಚ್ಚಿ ಶುಭ ಹಾರೈಸಿದ್ದಾರೆ. ಇದೀಗ ಬಿಡುಗಡೆ ಕಂಡಿರುವ ಈ ಹಾಡು ಸಾಕಷ್ಟು ವೈರಲ್ ಅಗತೊಡಗಿದೆ.

ಸಿನಿಮಾದ ನೀನೇ ತಂದ ಒಲವಾ ಒಡವೆ ಹಾಡನ್ನ ರಿಲೀಸ್ ಮಾಡಿ ತಮ್ಮ ತಾಜ್ ಮಹಲ್ ಸಿನಿಮಾದ ಮೆಲುಕು ಹಾಕಿದ್ದಾರೆ ಕನ್ನಡದ ನಿರ್ದೇಶಕ ಅರ್ ಚಂದ್ರು. ಧರ್ಮಂ ಸಿನಿಮಾಗೆ ನಾಗಮುಖ ಆಕ್ಷನ್ ಕಟ್ ಹೇಳಿದ್ದು...ಸಿನಿಮಾದಲ್ಲಿ ಸಾಯಿ ಶಶಿ ನಾಯಕನಾಗಿ ಕಾಣಿಸಿಕೊಂಡಿದ್ರೆ ನಟಿ ವರ್ಣಿಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಲೆ‌ಮಹಾದೇಶ್ವರ ಬೆಟ್ಟಕ್ಕೆ ಭೇಟಿ

ಮೇಲೂ ಕೀಳು ಅನ್ನೋ ಭಾವ ಲೋಕದ ಹೊಸ ಪ್ರಪಂಚದಲ್ಲಿ ಹೋರಾಟ ಮಾಡ್ತಿರೋ ನಾಯಕನ ಜೊತೆ ತನ್ನ ಮನದಾಳದ ಭಾವನೆಗಳನ್ನ ಹೇಳಿಕೊಳ್ಳೋ ತೊಳಲಾಟದಲ್ಲಿನ ಸನ್ನಿವೇಶಗಳು ಹಾಡಿನಲ್ಲಿ ಮೂಡಿ ಬಂದಿವೆ... ಧರ್ಮಂ ಸಿನಿಮಾ ತಂಡ ಮಲೆ‌ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದು ಸಿನಿಮಾದ ಸಾಂಗ್ ರಿಲೀಸ್ ಮಾಡಿದೆ

ಹಲವು ವಿಭಿನ್ನ ಲೋಕೇಶನ್ ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಸರಿಗಮ ಯ್ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಿದೆ....ಖ್ಯಾತ ನಿರ್ದೆಶಕ ಆರ್ ಚಂದ್ರು ಚಿತ್ರತಂಡದ ಪ್ರಯತ್ನ ಮೆಚ್ಚಿ ಶುಭ ಹಾರೈಸಿದ್ದಾರೆ

ಪ್ರಕೃತಿ ಮಡಿಲಿನ ದೃಶ್ಯ ವೈಭವ!

ನಾಗಮುಖ ನಿರ್ದೇಶನದ ಜೊತೆಗೆ ನಾಗಶೆಟ್ಟಿ ಕ್ಯಾಮರಾ ಕೈಚಳಕ ..ಸರವಣ ಸಂಗೀತ ಕೇಳುಗರನ್ನ ಮೋಡಿ ಮಾಡಿದೆ...ಪ್ರಕೃತಿ ಮಡಿಲಿನ ದೃಶ್ಯ ವೈಭವ ಹೊಸ ಭಾವಲೋಕಕ್ಕೆ ಪಯಣ ಬೆಳೆಸುವಂತೆ ಮಾಡಿದೆ. ಈ ಸಿನಿಮಾ ಶೂಟಿಂಗ್ ಮುಗಿಸಿದ್ದು, ಇದೀಗ ಹಾಡಿನ ಬಿಡುಗಡೆ ಮಾಡುವ ಮೂಲಕ ಸಿನಿಮಾ ರಿಲೀಸ್ ಪ್ರಚಾರಕಾರ್ಯ ಶುರುಮಾಡಿಕೊಂಡಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಈ ಚಿತ್ರತಂಡ ಪ್ಲಾನ್ ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ