
ಇತ್ತೀಚೆಗೆ ಚೂರು ದಪ್ಪ ಕಾಣಿಸುತ್ತಿದ್ದ ರಚಿತಾ, ಇದೀಗ 65 ಕೆಜಿಯಿಂದ 58 ಕ್ಕೆ ಇಳಿದಿದ್ದಾರೆ. ಹಾಗಂತ ಇದೇನೂ ಸಿನಿಮಾ ಕಾರಣಕ್ಕೆ ಅಲ್ಲ ಎಂದಿದ್ದಾರೆ. ‘ಮೊದಲಿನಿಂದಲೂ ನಾನೇನು ಹೆಚ್ಚು ದಪ್ಪಗಿದ್ದವಳಲ್ಲ. ಸಪೂರವಾಗಿದ್ದಾಗಲೇ ನಟಿಯಾಗಿ ಇಲ್ಲಿಗೆ ಬಂದೆ. ಹೆಚ್ಚು ಕಡಿಮೆ ಕಳೆದ ಈ ಎರಡು ವರ್ಷಗಳವರೆಗೂ ನಾನು ಇದ್ದಿದ್ದೇ ಹಾಗೆ. ಅದ್ಯಾಕೋ ದಪ್ಪಗಿದ್ರೆ ಹೇಗೆ ಕಾಣ್ಬಹುದು ಅಂತೆನೆಸಿತು. ಒಂದಷ್ಟು ವರ್ಕೌಟ್ ಕಡಿಮೆ ಮಾಡಿದೆ. ಊಟ ಜಾಸ್ತಿ ಆಯಿತು. ಛಬ್ಬಿ ಛಬ್ಬಿ ಅಂತಾರಲ್ಲ ಹಾಗಾದೆ. ‘ಅಯೋಗ್ಯ’, ಜತೆಗೆ ‘ಸೀತಾ ರಾಮ ಕಲ್ಯಾಣ’ ಎರಡು ಚಿತ್ರಗಳಲ್ಲೂ ನಾನು ಹಾಗೆಯೇ ಅಭಿನಯಿಸಿದೆ. ಈಗ ದಪ್ಪಗಾಗಿದ್ದು ಸಾಕು ಎಂತೆನಿಸಿತು. ಹಾಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೇನೆ. ಇದು ಯಾವುದೋ ಹೊಸ ಪ್ರಾಜೆಕ್ಟ್ ಅಂತ ಖಂಡಿತಾ ಅಲ್ಲ. ನನ್ನಷ್ಟಕ್ಕೆ ನಾನೇ ಕಡಿಮೆ ಆಗೋಣ
ಅಂತಷ್ಟೇ’ ಎನ್ನುತ್ತಾರೆ ರಚಿತಾರಾಮ್.
ಇವರ ಟ್ರೈನರ್ ಶ್ರೀನಿವಾಸ್. ಬೆಂಗಳೂರಿನ ಮಸಲ್ 360 ಜಿಮ್‌ನ ಶ್ರೀನಿವಾಸ್ ಅವರು ರಕ್ಷಿತ್ ಶೆಟ್ಟಿ, ಧನಂಜಯ್ ಸೇರಿಕಂದೆ ಅನೇಕ ಸೆಲೆಬ್ರಿಟಿಗಳಿಗೆ ಫಿಟ್‌ನೆಸ್ ಟ್ರೈನರ್. ಅವರಿಂದ ತರಬೇತಿ ಪಡೆದ ರಚಿತಾರಾಮ್ ಕಡಿಮೆ ದಿನದಲ್ಲಿ ಜಾಸ್ತಿ ತೂಕ ಇಳಿಸಿಕೊಂಡಿದ್ದಾರೆ.
ಆರೋಗ್ಯವಾಗಿ ಇರುವವರಿಗೆ ತೂಕ ಕಡಿಮೆ ಮಾಡುವುದು ತುಂಬಾ ಕಷ್ಟವೇನಿಲ್ಲ. ರಚಿತಾ ರಾಮ್ ಅವರು ಬೆಳಿಗ್ಗೆ ಸಂಜೆ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ನಮ್ಮ ಜಿಮ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅವರ ಶ್ರದ್ಧೆಯೇ ಇದಕ್ಕೆಲ್ಲಾ ಕಾರಣ- ಶ್ರೀನಿವಾಸ್ ಮಸಲ್ 360 ಸ್ಥಾಪ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.