ಸ್ಯಾಂಡಲ್‌ವುಡ್ ಇನ್ನೊಂದು ರಂಗಿತರಂಗ 'ಅನುಕ್ತ'!

By Web Desk  |  First Published Feb 1, 2019, 2:13 PM IST

ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆದಿದ್ದ ಅನುಕ್ತಾ ಚಿತ್ರ ಬಿಡುಗಡೆಯಾಗಿದೆ. ಹೆಸರಿಗೆ ತಕ್ಕಂತೆ ಇದು ವಿಭಿನ್ನವಾದ ಚಿತ್ರವೇ.


 

ನಾವು ಕಾಣುವ ಕನಸಿನಲ್ಲಿ ನಿಗೂಢ ಅರ್ಥಗಳಿರುತ್ತವೆ. ಇಲ್ಲಿ ಚಿತ್ರದ ಪಾತ್ರಕ್ಕೆ ಅಂಥದ್ದೇ ಕನಸುಗಳು ಕಾಡುತ್ತಿದ್ದಾಗ ಹೇಗಿರುತ್ತದೆ ಎನ್ನುವ ಕುತೂಹಲದ ಹಾದಿಯಲ್ಲಿ ಈ ಸಿನಿಮಾ ಸಾಗುತ್ತದೆ. ಚಿತ್ರದ ನಾಯಕನಾಗಿ ಸಂತೋಷ್ ಕುಮಾರ್ ಕೊಂಚಾಡಿ ಇದ್ದಾರೆ. ಸಂಪತ್ ಕುಮಾರ್, ಸಂಗೀತಾ ಭಟ್, ಅನು ಪ್ರಭಾಕರ್, ಶ್ರೀಧರ್, ಉಷಾ ಭಂಡಾರಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ. ಶ್ರೀಹರಿ ಬಂಗೇರ ಚಿತ್ರದ ನಿರ್ಮಾಪಕರು.

Tap to resize

Latest Videos

ಐನೂರು ವರ್ಷ ಹಳೆಯ ಮನೆಯ ರಹಸ್ಯ 'ಅನುಕ್ತ'!

ಉಡುಪಿ ಬ್ರಹ್ಮಾವರದಲ್ಲಿರುವ ಐನೂರು ವರ್ಷಗಳ ಹಳೆಯ ಮನೆಯ ಸುತ್ತ ಈ ಚಿತ್ರ ಸುತ್ತುತ್ತದೆ. ನಾಯಕ ಕಾರ್ತಿಕ್ ಅತ್ತಾವರ್ ಜೊತೆ ನಟಿ ಸಂಗೀತಾ ಭಟ್ ರೊಮ್ಯಾನ್ಸ್ ಮೂಡಲ್ಲಿ ಕಾಣಿಸಿಕೊಂಡಿದ್ದಾರೆ.

 

ನಟಿ ಅನು ಪ್ರಭಾಕರ್ ಹಾಗೂ ಬಹುಭಾಷಾ ನಟ ಸಂಪತ್ ರಾಜ್ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಕರಾವಳಿಯ ಭೂತಾರಾದನೆ ಆಕರ್ಷಕವಾಗಿ ಮೂಡಿ ಬಂದಿದೆ. ಅದನ್ನು ಅದ್ಭುತವಾಗಿ ತೆರೆ ಮೇಲೆ ತರಲಾಗಿದೆ.

ಅನುಕ್ತ: ಕೊಲೆಗೂ ಭೂತ ಕೋಲಕ್ಕೂ ಎಂಥಾ ಕನೆಕ್ಷನ್ನು?

ಚಿತ್ರವನ್ನು ನೋಡಿದವರು ಇದು ಇನ್ನೊಂದು ರಂಗಿತರಂಗ ಚಿತ್ರವನ್ನು ನೆನಪಿಸುವಂತಿದೆ ಎನ್ನುತ್ತಿದ್ದಾರೆ. ಪ್ರತಿ ಸೀನ್ ನಲ್ಲೂ ಟ್ವಿಸ್ಟ್ ಇಟ್ಟಿದ್ದಾರೆ ನಿರ್ದೇಶಕರು.

click me!