ಚಿತ್ರ ವಿಮರ್ಶೆ: ತೆರೆ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ ’ಮಣಿಕರ್ಣಿಕಾ’

By Web Desk  |  First Published Jan 26, 2019, 3:59 PM IST

ಬಹು ನಿರೀಕ್ಷಿತ ಚಿತ್ರ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಜಾನ್ಸಿ ರಿಲೀಸಾಗಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ಓದಿ 


ಮುಂಬೈ (ಜ. 26): ಬಹು ನಿರೀಕ್ಷಿತ ಚಿತ್ರ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಜಾನ್ಸಿ ರಿಲೀಸಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್ ನಲ್ಲಿ 8.75 ಕೋಟಿ ಕಲೆಕ್ಷನ್ ಮಾಡಿದೆ. 

ಸಿನಿಮಾದುದ್ದಕ್ಕೂ ಕಂಗನಾ ಜಾನ್ಸಿ ರಾಣಿಯಾಗಿ ಅದ್ಭುತ ನಟನೆ ಮೂಲಕ ಗಮನ ಸೆಳೆಯುತ್ತಾರೆ. ವೀರಮಹಿಳೆ ಲಕ್ಷ್ಮೀಬಾಯಿಯಾಗಿ ಕಂಗನಾ ತೆರೆ ಮೇಲೆ ಅಬ್ಬರಿಸುತ್ತಾರೆ. ಖಡ್ಗ ಹಿಡಿದು ಝಳಪಿಸುತ್ತಾರೆ.  ಖ್ಯಾತ ಚಿತ್ರಕಥೆ ಬರಹಗಾರ ಕೆ ವಿಜಯೇಂದ್ರ ಪ್ರಸಾದ್ ಪೌರಾಣಿಕ ಕಥೆಗಳನ್ನು ತೆರೆ ಮೇಲೆ ತರುವುದರಲ್ಲಿ ಫೇಮಸ್. ಅದೇ ರೀತಿ ಜಾನ್ಸಿಯನ್ನು ತೆರೆ ಮೇಲೆ ತಂದಿದ್ದಾರೆ. ವಿಶೇಷ ಎಂದರೆ ಸ್ವತಃ ಕಂಗನಾ ರಾಣಾವತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಜೊತೆಗೆ ರಾಜಾ ಕೃಷ್ಣ ಜಗರ್ಲಮುದಿ ಕೂಡಾ ನಿರ್ದೇಶನದಲ್ಲಿದ್ದಾರೆ. 

Tap to resize

Latest Videos

ಚಿತ್ರ ವಿಮರ್ಶೆ: ಸೀತಾರಾಮ ಕಲ್ಯಾಣ

ಲಕ್ಷ್ಮೀ ಬಾಯಿ ಬ್ರಿಟಿಷರ ಜೊತೆ ನಿರರ್ಗಳವಾಗಿ ಬ್ರಿಟಿಷರ ಜೊತೆ ಮಾತನಾಡುತ್ತಾರೆ. ಪುಸ್ತಕ ಪ್ರೀತಿ ಅಪಾರವಾಗಿತ್ತು. ಪ್ರಾಣಿಗಳನ್ನು ಬಹುವಾಗಿ ಪ್ರೀತಿಸುತ್ತಿದ್ದರು. ಮಮತಾಮಯಿ ತಾಯಿಯಾಗಿದ್ದರು. 

ಪತಿ ಸತ್ತಾಗ ತಲೆ ಬೋಳಿಸಲು ನಿರಾಕರಿಸುತ್ತಾರೆ. ಝಾನ್ಸಿಯನ್ನು ಆಳಲು ರಾಣಿಯ ಅವಶ್ಯಕತೆ ಇದೆ. ನಾನು ತಲೆ ಬೋಳಿಸುವುದಿಲ್ಲ ಎನ್ನುತ್ತಾಳೆ.  ರಣಾಂಗಣಕ್ಕೆ ಹೋದರೆ ಯಾವ ಪುರುಷನಿಗೂ ಕಮ್ಮಿ ಇಲ್ಲದಂತೆ ಹೋರಾಡುತ್ತಾರೆ. 

ಕಂಗನಾ ರಾಣಾವತ್ ನಮ್ಮನ್ನು 1800 ಕ್ಕೆ ಕರೆದೊಯ್ಯುತ್ತಾಳೆ. ಪತಿಯ ಮರಣಾನಂತರ ಝಾನ್ಸಿ ಸಂಸ್ಥಾನವನ್ನು ಬ್ರಿಟಿಷರಿಗೆ ಬಿಟ್ಟು ಕೊಡಲು ನಿರಾಕರಿಸುತ್ತಾಳೆ. ಬ್ರಿಟಿಷರ ವಿರುದ್ಧ ಹೋರಾಡುತ್ತಾಳೆ. ಹೋರಾಡುತ್ತಾ ಹೋರಾಡುತ್ತಾ ರಣಾಂಗಣದಲ್ಲಿ 1958 ರಲ್ಲಿ ವೀರ ಮರಣವನ್ನಪ್ಪುತ್ತಾಳೆ. 

ಮಣಿಕರ್ಣಿಕಾ ಕೂಡಾ ಈ ಕಥೆಯ ಸುತ್ತ ಸುತ್ತುತ್ತದೆ.  ಕಂಗನಾ ಅಭಿನಯ ಮನೋಜ್ಞವಾಗಿದೆ. ಮುಖದಲ್ಲಿ ಆತ್ಮವಿಶ್ವಾಸದ ನಗು, ಕೈಯಲ್ಲಿ ಖಡ್ಗ, ದಿಟ್ಟ ನಡೆ, ನಿರರ್ಗಳ ಮಾತು ನೋಡುತ್ತಿದ್ದರೆ ಪ್ರೇಕ್ಷಕ ಮನಸ್ಸಲ್ಲೇ ಜೈ ಲಕ್ಷ್ಮೀ ಬಾಯಿ ಅನ್ನೋದು ಸುಳ್ಳಲ್ಲ. 

ಕಂಗನಾ ರಾಣಾವತ್, ಅತುಲ್ಕುಲಕರ್ಣಿ, ಡಾನಿ ಡೆನ್ ಜೋನ್ ಪಾ, ಸುರೇಶ್ ಒಬೆರಾಯ್, ಅಂಕಿತಾ ಲೋಖಂಡೆ ಚಿತ್ರದಲ್ಲಿದ್ದಾರೆ. 
 

click me!