ಸಿಂಪಲ್ ಸುನಿ ಚಿತ್ರವೆಂದರೆ ಪ್ರೇಕ್ಷಕರಿಗೆ ಅದೇನೋ ಅಭಿಮಾನ. ಬಹಳ ನಿರೀಕ್ಷೆಗಳನ್ನಿಟ್ಟುಕೊಂಡೇ ಚಿತ್ರ ವೀಕ್ಷಿಸುತ್ತಾರೆ. ಆದರೆ, ಚಿತ್ರಾಭಿಮಾನಿಗಳ ಆಶಯವನ್ನು ಯಾವತ್ತೂ ಸುಳ್ಳು ಮಾಡುವುದಿಲ್ಲ ಇವರು. ಇದನ್ನು ಇದೀಗ ಬಜಾರ್ ಚಿತ್ರದಲ್ಲಿಯೂ ಸಾಬೀತು ಪಡಿಸಿದ್ದಾರೆ ರೌಡೀಸಂ ಕಥೆಯಾದರೂ, ಎಲ್ಲರ ಮನಸ್ಸು ಗೆಲ್ಲುತ್ತಿದೆ ಚಿತ್ರ.
ಇದುವರೆಗಿನ ಅಷ್ಟೂ ಚಿತ್ರಗಳನ್ನು ಒಂದಕ್ಕಿಂತ ಒಂದು ವಿಭಿನ್ನವೆಂಬಂತೆ ನಿರ್ದೇಶಿಸಿದವರು ಸಿಂಪಲ್ ಸುನಿ. ಪ್ರೀತಿ ಪ್ರೇಮಗಳ ಸುತ್ತಲೇ ಸುತ್ತಿದರೂ ಪ್ರತೀ ಚಿತ್ರದಲ್ಲಿಯೂ ಸುನಿಯ ವಿಭನ್ನ ಒಳನೋಟಗಳೇ ಗೆಲುವಿಗೆ ಸಾಥ್ ನೀಡುತ್ತಿವೆ. ಇಂದು ರೀಲೀಸ್ ಆಗಿರೋ ಬಜಾರ್ ಚಿತ್ರವೂ ಈ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ.
ಸಿಂಪಲ್ ಸುನಿ ಇದೇ ಮೊದಲ ಬಾರಿಗೆ ರೌಡಿಸಂ ಸಬ್ಜೆಕ್ಟನ್ನು ಆರಿಸಿಕೊಂಡಿದ್ದಾರೆ. ಆದರೆ ಇಲ್ಲಿನ ಕಥೆ ಖಂಡಿತಾ ಸಿಂಪಲ್ ಆಗಿಲ್ಲ. ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೈಲರ್ ಮೂಲಕವೇ ಸುನಿ ಈ ಟ್ರ್ಯಾಕಿನಲ್ಲಿಯೂ ವಿಜಯ ಪತಾಕೆ ಹಾರಿಸುತ್ತಾರೆಂಬುದು ಸ್ಪಷ್ಟವಾಗಿತ್ತು. ಅದೀಗ ಸತ್ಯವಾಗಿದೆ. ರೌಡಿಸಂ ಎಂಬುದು ಯಾವತ್ತಿದ್ದರೂ ಮಾಮೂಲಿ ಸಿನಿಮಾ ವಸ್ತು. ಆದರೆ ಸುನಿ ಬಜಾರ್ ಚಿತ್ರದಲ್ಲಿ ಅದನ್ನು ತೋರಿಸಿರೋ ರೀತಿ ಮಾಮೂಲಿಯಾಗಿಲ್ಲ.
ಬಜಾರ್ ಚಿತ್ರದಲ್ಲಿ ಅದಿತಿ ಪಾತ್ರವೇನು?
ಸದಾ ಪ್ರೀತಿಯ ಕಣ್ಣುಗಳಿಂದಲೇ ದೃಶ್ಯ ಕಟ್ಟುತ್ತಾ ಬಂದಿರೋ ಸುನಿ ಈವರೆಗೂ ಭಾವನೆಗಳ ಮೇಲಾಟದ ಸಬ್ಜೆಕ್ಟ್‌ಗಳ ಮೂಲಕವೇ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆ ರೀತಿಯ ಪ್ರೀತಿ ಪೂರ್ವಕ ಕಣ್ಣುಗಳಲ್ಲಿ ಮಚ್ಚು ಲಾಂಗುಗಳ ದುನಿಯಾ ಸೆರೆಯಾಗಿದೆ ಎಂದರೆ ಕುತೂಹಲ ಹುಟ್ಟದಿರುತ್ತಾ? ಖಂಡಿತಾ ಅಂಥದ್ದೊಂದು ವಿಚಾರದ ಬಗ್ಗೆ ಪ್ರೇಕ್ಷಕರಲ್ಲಿತ್ತು ಅಪಾರ ಕುತೂಹಲ. ಅದನ್ನು ಪೂರೈಸಿದ್ದಾರೆ ನಿರ್ದೇಶಕರು. ಇದರಿಂದಲೇ ಈ ಚಿತ್ರ ಗೆಲವು ಸಾಧಿಸಲಿದೆ ಎಂಬುವುದು ಚಿತ್ರ ವೀಕ್ಷಕರ ಅಭಿಪ್ರಾಯ.
ಪಾರಿಜಾತಳಾಗಿ ಹಾರಲು ಬರುತ್ತಿದ್ದಾಳೆ ಅದಿತಿ ಪ್ರಭುದೇವೆ...